‘ಧುರಂಧರ್ 2’ ಚಿತ್ರದ ಒಟಿಟಿ ಹಕ್ಕಿಗೆ ಡಬಲ್ ಹಣ ಕೊಟ್ಟ ಜಿಯೋ ಹಾಟ್​​ಸ್ಟಾರ್ – Kannada News | Dhurandhar 2: Ranveer Singh’s Sequel OTT Rights Soar; Netflix and Hotstar’s Mega Deals Revealed

ಆದಿತ್ಯ ಧಾರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟಿಸಿದ ‘ಧುರಂಧರ್’ ಜನವರಿ 30, 2026 ರಂದು ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಚಿತ್ರವು ಬಿಡುಗಡೆಯಾದ ತಕ್ಷಣ ನೆಟ್‌ಫ್ಲಿಕ್ಸ್‌ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇದೆಲ್ಲದರ ನಡುವೆ, ‘ಧುರಂಧರ್ 2: ದಿ ರಿವೆಂಜ್’ನ ಮೊದಲ ಟೀಸರ್ ಅನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಟೀಸರ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಈ ಚಿತ್ರದ ಒಟಿಟಿ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆ ಎನ್ನಲಾಗುತ್ತಿದೆ.

ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ‘ಧುರಂಧರ್’ ಚಿತ್ರದ ಎರಡೂ ಭಾಗಗಳ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್​​ಫ್ಲಿಕ್ಸ್ ಖರೀದಿ ಮಾಡಿತ್ತು. ನೆಟ್‌ಫ್ಲಿಕ್ಸ್ ಎರಡೂ ಭಾಗಗಳನ್ನು ಒಟ್ಟಿಗೆ ಪಡೆಯಲು 170 ಕೋಟಿ ನೀಡಲು ರೆಡಿ ಇತ್ತು. ಆದರೆ, ನಂತರ ಡೀಲ್ ಕ್ಯಾನ್ಸಲ್ ಮಾಡಿ ಹಾಟ್​​ಸ್ಟಾರ್ ಇದರ ಹಕ್ಕನ್ನು ಪಡೆದುಕೊಂಡಿದೆ.

ವರದಿಯ ಪ್ರಕಾರ, ಮೊದಲ ಪಾರ್ಟ್​​ಗಾಗಿ ನೆಟ್​​ಫ್ಲಿಕ್ಸ್​​ 85 ಕೋಟಿ ರೂ ನೀಡಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಸಿನಿಮಾ ಖರೀದಿಗೆ ಇತ್ತೀಚೆಗೆ ಕಡಿಮೆ ಆಸಕ್ತಿ ತೋರಿಸುತ್ತಿವೆ ಎಂದು ಹೇಳಲಾಗಿದೆ. ಆದರೆ ‘ಧುರಂಧರ್’ ಚಿತ್ರದ ದೊಡ್ಡ ಯಶಸ್ಸು ಮತ್ತು ಪ್ರೇಕ್ಷಕರಿಂದ ಬಂದ ಬೇಡಿಕೆಯಿಂದಾಗಿ ಅವರು ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಬೇಕಾಯಿತು. ಈಗ ಜಿಯೋ ಹಾಟ್​​ಸ್ಟಾರ್ 170 ಕೋಟಿ ರೂಪಾಯಿ ಕೊಟ್ಟು ಎರಡನೇ ಭಾಗದ ಸ್ಟ್ರೀಮಿಂಗ್ ಹಕ್ಕು ಖರೀದಿಸಿದೆ ಎಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ‘ಧುರಂಧರ್’ ಬಗ್ಗೆ ಹೃತಿಕ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಆದಿತ್ಯ ಧಾರ್

ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿನ ಭಾಗದಲ್ಲಿ ರೆಹಮಾನ್ ಡಕಾಯಿತ್ (ಅಕ್ಷಯ್ ಖನ್ನಾ) ಅವರ ಮರಣದ ನಂತರ, ಎರಡನೇ ಭಾಗವು ಹಮ್ಜಾ ಅಲಿ (ರಣವೀರ್ ಸಿಂಗ್) ಅವರ ಪಾತ್ರ ಹೈಲೈಟ್ ಆಗೋ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಕೂಡ ನಟಿಸಿದ್ದಾರೆ. ಈ ಚಿತ್ರವು ಮಾರ್ಚ್ 19, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *