‘ಧುರಂಧರ್ 2’ ಸಿನಿಮಾದ ಅವಧಿ ಬರೋಬ್ಬರಿ 4 ಗಂಟೆ? ರಿಸ್ಕ್ ತೆಗೆದುಕೊಂಡ ಚಿತ್ರತಂಡ – Kannada News | Reports say Dhurandhar 2 movie runtime is nearly 4 hour

2025ರಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆದ ‘ಧುರಂಧರ್’ ಸಿನಿಮಾ ನೋಡಿದ ಎಲ್ಲರೂ ಈಗ ಸೀಕ್ವೆಲ್ ನೋಡಲು ಕಾಯುತ್ತಿದ್ದಾರೆ. ‘ಧುರಂಧರ್ 2’ (Dhurandhar 2) ಸಿನಿಮಾ ಮಾರ್ಚ್ 19ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ. ಸಿನಿಮಾದ ಬಿಡುಗಡೆಗೂ ಮೊದಲು ಅನೇಕ ಇಂಟರೆಸ್ಟಿಂಗ್ ವಿಷಯಗಳು ಕೇಳಿಬರುತ್ತಿವೆ. ರಣವೀರ್ ಸಿಂಗ್ (Ranveer Singh) ಅಭಿಮಾನಿಗಳು ‘ಧುರಂಧರ್ 2’ ನೋಡಲು ಹೋದರೆ ಬರೋಬ್ಬರಿ 4 ಗಂಟೆಗಳ ಕಾಲ ಚಿತ್ರಮಂದಿರದ ಒಳಗೆ ಇರಬೇಕಾಗುತ್ತದೆ! ಯಾಕೆಂದರೆ, ಈ ಸಿನಿಮಾದ ಅವಧಿ (Runtime) ಬರೋಬ್ಬರಿ 3 ಗಂಟೆ 55 ನಿಮಿಷ ಇದೆ ಎನ್ನಲಾಗಿದೆ.

ಸಿನಿಮಾದ ಅವಧಿ ದೀರ್ಘವಾಗಿದ್ದರೆ ಚಿತ್ರತಂಡ ರಿಸ್ಕ್ ತೆಗೆದುಕೊಂಡಂತೆಯೇ ಅರ್ಥ. ‘ಧುರಂಧರ್ 2’ ಸಿನಿಮಾದ ಅವಧಿ 3 ಗಂಟೆ 55 ನಿಮಿಷ ಇದ್ದರೆ ಅಷ್ಟು ದೀರ್ಘ ಕಾಲ ಪ್ರೇಕ್ಷಕರನ್ನು ಹಿಡಿದಿರುವುದು ಸುಲಭದ ಮಾತಲ್ಲ. ಹಾಗಾಗಿ ‘ಧುರಂಧರ್ 2’ ಚಿತ್ರತಂಡ ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ಕಾದುನೋಡಬೇಕು.

ಆದಿತ್ಯ ಧಾರ್ ಅವರು ‘ಧುರಂಧರ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಧುರಂಧರ್ 2’ ಸಿನಿಮಾದಲ್ಲಿ ನಟಿ ಯಾಮಿ ಗೌತಮ್ ಅವರು ಅತಿಥಿ ಪಾತ್ರ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಅದು ಇನ್ನೂ ಖಚಿತವಾಗಿಲ್ಲ.

‘ಧುರಂಧರ್ 2’ ಟೀಸರ್ ಬಿಡುಗಡೆ ಆದಾಗ ಪ್ರೇಕ್ಷಕರಿಗೆ ನಿರಾಸೆ ಆಗಿತ್ತು. ಸದ್ಯದಲ್ಲೇ ಟ್ರೇಲರ್ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಕ್ರೌರ್ಯ ಇನ್ನಷ್ಟು ಜಾಸ್ತಿ ಇರುವ ಸಾಧ್ಯತೆ ಇದೆ. ಚಿತ್ರದ ಅವಧಿ 3 ಗಂಟೆ 55 ನಿಮಿಷ ಇದೆ ಎಂಬುದನ್ನು ಚಿತ್ರತಂಡ ಇನ್ನೂ ಖಚಿತಪಡಿಸಿಲ್ಲ. ಒಂದು ವೇಳೆ ಅಷ್ಟು ದೀರ್ಘ ಅವಧಿ ಇರುವುದೇ ನಿಜವಾದರೆ ಮಧ್ಯಂತರದ ಬ್ರೇಕ್ ಸೇರಿ ಈ ಸಿನಿಮಾ ನೋಡಿ ಮುಗಿಸಲು 4 ಗಂಟೆಗೂ ಅಧಿಕ ಸಮಯ ಹಿಡಿಯಲಿದೆ.

ಇದನ್ನೂ ಓದಿ: ಟಾಕ್ಸಿಕ್ Vs ಧುರಂದರ್ 2: ಅಡ್ವಾನ್ಸ್ ಬುಕಿಂಗ್​ನಲ್ಲಿ ಮುನ್ನಡೆ ಸಾಧಿಸಿದ ರಣವೀರ್ ಸಿಂಗ್ ಸಿನಿಮಾ

ಕೇವಲ ಹಿಂದಿಯಲ್ಲಿ ‘ಧುರಂಧರ್’ ಬಿಡುಗಡೆ ಆಗಿತ್ತು. ಆದರೆ ‘ಧುರಂಧರ್ 2’ ಸಿನಿಮಾ ಹಿಂದಿ ಜೊತೆಗೆ ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ರಿಲೀಸ್ ಆಗಲಿದೆ. ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಈ ಎರಡೂ ಸಿನಿಮಾಗಳ ನಡುವೆ ಸಖತ್ ಪೈಪೋಟಿ ಏರ್ಪಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *