ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಕಳೆದ ವರ್ಷ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಈಗ ಆ ಚಿತ್ರದ ಸೀಕ್ವೆಲ್ ಸಿದ್ಧವಾಗಿದೆ. ಮಾರ್ಚ್ 19ರಂದು ‘ಧುರಂಧರ್ 2’ (Dhurandhar 2) ಸಿನಿಮಾ ರಿಲೀಸ್ ಆಗಲಿದೆ. ಆದರೆ ಕೆಲವು ದೇಶಗಳಲ್ಲಿ ಈ ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಮಿಡಲ್ ಈಸ್ಟ್ ದೇಶಗಳಲ್ಲಿ ಈ ಸಿನಿಮಾದ ಬಿಡುಗಡೆಗೆ ನಿಷೇಧ ಹೇರಲಾಗಿದೆ. ಆದರೂ ಪ್ರೇಕ್ಷಕರ ಕ್ರೇಜ್ ಕಡಿಮೆ ಆಗಿಲ್ಲ. ಅನೇಕರು ದುಬೈನಿಂದ ಭಾರತಕ್ಕೆ ಬಂದು ಸಿನಿಮಾ ನೋಡಲಿದ್ದಾರೆ ಎಂದು ಚಿತ್ರದ ನಟ ಆರ್. ಮಾಧವನ್ (R. Madhavan) ಅವರು ಹೇಳಿದ್ದಾರೆ.
‘ಧುರಂಧರ್ 2’ ಸಿನಿಮಾದಲ್ಲಿ ಆರ್. ಮಾಧವನ್ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಸಿನಿಮಾ ಬಗ್ಗೆ ಜನರಿಗೆ ಇರುವ ಕ್ರೇಜ್ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಕೆಲವು ದೇಶಗಳಲ್ಲಿ ಬ್ಯಾನ್ ಆಗಿದ್ದರೂ ಕೂಡ ಪ್ರೇಕ್ಷಕರ ಕ್ರೇಜ್ ಕಡಿಮೆ ಆಗಿಲ್ಲ ಎಂದು ಆರ್. ಮಾಧವನ್ ಹೇಳಿದ್ದಾರೆ.
‘ಅದು ಒಳ್ಳೆಯ ಕಂಟೆಂಟ್ನ ಶಕ್ತಿ. ದುಬೈನಲ್ಲಿ ಇರುವವರು ಮಾರ್ಚ್ 19ರ ಆಸುಪಾಸಿನಲ್ಲಿ ತಮ್ಮ ಬಿಸ್ನೆಸ್ ಮೀಟಿಂಗ್ ಪ್ಲ್ಯಾನ್ ಮಾಡಿಕೊಂಡು ಭಾರತಕ್ಕೆ ಬರಲಿದ್ದಾರೆ. ಮೀಟಿಂಗ್ನಲ್ಲಿ ಭಾಗವಹಿಸುವುದರ ಜೊತೆಗೆ ‘ಧುರಂಧರ್ 2’ ಸಿನಿಮಾವನ್ನು ಕೂಡ ಅವರು ನೋಡಬಹುದು. ಯಾಕೆಂದರೆ ಈ ಸಿನಿಮಾ ದುಬೈನಲ್ಲಿ ರಿಲೀಸ್ ಆಗುತ್ತಿಲ್ಲ’ ಎಂದಿದ್ದಾರೆ ಆರ್. ಮಾಧವನ್.
ಪಾಕಿಸ್ತಾನ, ದುಬೈ ಮುಂತಾದ ಕಡೆಗಳಲ್ಲಿ ‘ಧುರಂಧರ್’ ಸಿನಿಮಾ ರಿಲೀಸ್ ಆಗಿರಲಿಲ್ಲ. ಆದರೆ ಪೈರಸಿ ಕಾಪಿ ಮೂಲಕ ಅಲ್ಲಿನ ಕೋಟ್ಯಂತರ ಜನರು ಸಿನಿಮಾ ನೋಡಿದರು. ಬಳಿಕ ಒಟಿಟಿಯಲ್ಲಿ ಕೂಡ ಸಿನಿಮಾವನ್ನು ವೀಕ್ಷಿಸಿದರು. ಮೊದಲ ಪಾರ್ಟ್ ಸೂಪರ್ ಹಿಟ್ ಆಗಿದ್ದರಿಂದ ಸೀಕ್ವೆಲ್ ಮೇಲೆ ಭಾರಿ ನಿರೀಕ್ಷೆ ಮನೆ ಮಾಡಿದೆ.
ಇದನ್ನೂ ಓದಿ: ಕೆಟ್ಟ ವಿಮರ್ಶೆಗೆ ತಿರುಗೇಟು: ಪ್ರಶಸ್ತಿ ತಿರಸ್ಕರಿಸಿ ಮುಖಭಂಗ ಮಾಡಿದ ‘ಧುರಂಧರ್’ ಚಿತ್ರತಂಡ
ಆರ್. ಮಾಧವನ್, ಸಾರಾ ಅರ್ಜುನ್, ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಮ್ಪಾಲ್ ಮುಂತಾದವರು ‘ಧುರಂಧರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಆದಿತ್ಯ ಧಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮಾರ್ಚ್ 19ರಂದು ‘ಧುರಂಧರ್ 2’ ಎದುರು ಕನ್ನಡದ ‘ಟಾಕ್ಸಿಕ್’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಆದ್ದರಿಂದ ಪೈಪೋಟಿ ಹೆಚ್ಚಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
