‘ಧುರಂಧರ್ 2’ ಹಣ ಮಾಡಿದ್ದು ನೋಡಿ ಬದಲಾದ ರಾಜಮೌಳಿ; ಎರಡು ಭಾಗದಲ್ಲಿ ‘ವಾರಣಾಸಿ’

‘ಧುರಂಧರ್ 2’ ಹಣ ಮಾಡಿದ್ದು ನೋಡಿ ಬದಲಾದ ರಾಜಮೌಳಿ; ಎರಡು ಭಾಗದಲ್ಲಿ ‘ವಾರಣಾಸಿ’

‘ಧುರಂಧರ್ 2’ ಸಿನಿಮಾ (Dhurandhar 2) ಸೂಪರ್ ಹಿಟ್ ಆಗಿದೆ. ಮೊದಲ ಭಾಗ ಅಬ್ಬರಿಸಿತ್ತು. ಇದು ಎರಡನೇ ಪಾರ್ಟ್​​ ಹಿಟ್ ಆಗು ಸಹಕಾರಿ ಆಗಿದೆ. ಇಷ್ಟು ದಿನಗಳ ಕಾಲ ಮೊದಲ ಪಾರ್ಟ್ ರಿಲೀಸ್ ಆಗಿ ಬಹು ಸಮಯದ ಬಳಿಕ ಎರಡನೇ ಪಾರ್ಟ್ ಬರುತ್ತಿತ್ತು. ಆದರೆ, ‘ಧುರಂಧರ್ 2’ ವಿಷಯದಲ್ಲಿ ಆ ರೀತಿ ಆಗಿಲ್ಲ. ‘ಧುರಂಧರ್’ ರಿಲೀಸ್ ಆಗಿ ಕೇವಲ ಮೂರೇ ತಿಂಗಳಲ್ಲಿ ‘ಧುರಂಧರ್ 2’ ಸಿನಿಮಾ ತೆರೆಗೆ ಬಂದಿದೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಈಗ ಇದರಿಂದ ರಾಜಮೌಳಿ ಪ್ಲ್ಯಾನ್ ಬದಲಿಸಿದ್ದಾರೆ ಎಂದು ವರದಿ ಆಗಿದೆ.

‘ಬಾಹುಬಲಿ’ ಚಿತ್ರವನ್ನು ರಾಜಮೌಳಿ ಎರಡು ಪಾರ್ಟ್​ ಅಲ್ಲಿ ತಂದರು. ಅಲ್ಲಿಂದ ಎರಡು ಪಾರ್ಟ್​ಗಳಲ್ಲಿ ಸಿನಿಮಾ ಮಾಡುವ ಟ್ರೆಂಡ್ ಜೋರಾಯಿತು. ಭಾರತದಲ್ಲಿ ಅನೇಕ ಭಾಷೆಗಳಲ್ಲಿ ಅನೇಕ ಸಿನಿಮಾಗಳು ಎರಡು ಪಾರ್ಟ್​​ ಅಲ್ಲಿ ತರಲಾಯಿತು. ಆದರೆ, ಕೊನೆ ಕೊನೆಗೆ ಇದಕ್ಕೆ ಅರ್ಥವೇ ಇಲ್ಲದಂತೆ ಆಯಿತು. ದುಡ್ಡು ಮಾಡುವ ಉದ್ದೇಶದಿಂದ ಸಿನಿಮಾಗಳನ್ನು ಎರಡು ಪಾರ್ಟ್​​​ಗಳಲ್ಲಿ ತರಲಾಗುತ್ತಾ ಬಂತು. ಇದು ರಾಜಮೌಳಿಗೆ ಬೇಸರ ತರಿಸಿತ್ತು.

ಧುರಂಧರ್ ಸಿನಿಮಾ ರಿಲೀಸ್​ಗೂ ಮೊದಲಿನ ವರದಿ ಪ್ರಕಾರ, ‘ವಾರಣಾಸಿ’ ಚಿತ್ರವನ್ನು ಒಂದೇ ಪಾರ್ಟ್​​ ಅಲ್ಲಿ ತೆರೆಗೆ ತರೋ ಪ್ಲ್ಯಾನ್ ಅಲ್ಲಿ ರಾಜಮೌಳಿ ಇದ್ದರು. ಎರಡು ಪಾರ್ಟ್​​ನ ಜನರು ಇಷ್ಟಪಡೋದಿಲ್ಲ ಎಂಬುದು ಅವರ ಊಹೆ ಆಗಿತ್ತು. ಆದರೆ, ಯಾವಾಗ ‘ಧುರಂಧರ್ 2’ ಸಿನಿಮಾ ಹಿಟ್ ಆಯಿತೋ ಅವರು ಮತ್ತೆ ಪ್ಲ್ಯಾನ್ ಬದಲಿಸಿದ್ದಾರೆ ಎನ್ನಲಾಗಿದೆ.

‘ಧುರಂಧರ್ 2’ ಸಿನಿಮಾ ಹಣ ಮಾಡುತ್ತಿರುವ ರೀತಿ ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಮೊದಲ ಭಾಗಕ್ಕೂ, ಎರಡನೇ ಪಾರ್ಟ್​​ಗೆ ಲಿಂಕ್ ಇತ್ತು. ರಾಜಮೌಳಿ ಸಿನಿಮಾಗಳಲ್ಲಿ ಸಸ್ಪೆನ್ಸ್ ಯಾವ ರೀತಿಯಲ್ಲಿ ಇಡುತ್ತಾರೆ ಎಂಬುದನ್ನು ಮತ್ತೆ ಹೇಳಬೇಕಿಲ್ಲ. ಅವರು ಈಗ ‘ವಾರಣಾಸಿ’ ಚಿತ್ರವನ್ನು ಎರಡು ಪಾರ್ಟ್​​​ನಲ್ಲಿ ತರೋ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹತ್ತೇ ದಿನದಲ್ಲಿ ‘KGF 2’ ಲೈಫ್​​ ಟೈಮ್ ಕಲೆಕ್ಷನ್ ಬ್ರೇಕ್ ಮಾಡಲಿದೆ ‘ಧುರಂಧರ್ 2’ 

ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್​ ಸುಕುಮಾರನ್ ಮೊದಲಾದವರು ‘ವಾರಣಾಸಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಬಜೆಟ್​​ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಮುಂದಿನ ವರ್ಷ ಏಪ್ರಿಲ್​​ನಲ್ಲಿ ಸಿನಿಮಾ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *