ನವದೆಹಲಿ, ಆಗಸ್ಟ್ 6: ಎಐನಿಂದ ಯಾವ್ಯಾವ ಕೆಲಸಗಳು ಹೋಗುತ್ತವೆ ಎನ್ನುವ ಚರ್ಚೆ ಕಳೆದ ಒಂದೆರಡು ವರ್ಷದಿಂದ ಕೇಳಿಬರುತ್ತಲೇ ಇದೆ. ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರು ಈ ವಿಚಾರದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಮತ್ತು ಆಟೋಮೇಷನ್‌ನಿಂದಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಉಂಟಾಗುವ ಬದಲಾವಣೆಗಳ ಕುರಿತು ಅವರು ಮಾತನಾಡಿದ್ದಾರೆ. ಅವರ ಪ್ರಕಾರ, ದೊಡ್ಡ ಸಂಸ್ಥೆಗಳು ನಿರ್ದಿಷ್ಟ ಮತ್ತು ಪುನರಾವರ್ತಿತ ಪ್ರಕ್ರಿಯೆಗಳನ್ನು (Routine & Standardised Tasks) ಹೆಚ್ಚು ಹೊಂದಿರುವ ಕಾರಣ, ಅವುಗಳ ಮೇಲೆಯೇ AI ಮತ್ತು ಆಟೋಮೇಷನ್‌ನ ಪ್ರಭಾವ ಹೆಚ್ಚು ಬೀಳಲಿದೆ.
ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ತಗ್ಗಿಸಲು ದೊಡ್ಡ ಕಂಪನಿಗಳು AI ಅನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವುದರಿಂದ, ಭವಿಷ್ಯದಲ್ಲಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಉದ್ಯೋಗಗಳ ಸೃಷ್ಟಿ ನಿಧಾನವಾಗಿ, ಉದ್ಯೋಗ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ನಿಲೇಕಣಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಆಭರಣದಂಗಡಿಗಳಿಗೆ ಭರ್ಜರಿ ಸುದ್ದಿ; ಜಿಎಂಎಸ್ ಸ್ಕೀಮ್ನಲ್ಲಿ ಶೇ. 1 ಕಮಿಷನ್ ಕೊಡಲು ಸರ್ಕಾರದ ಮುಂದೆ ಪ್ರಸ್ತಾವ
ಸಣ್ಣ ಉದ್ಯಮಗಳು ಭವಿಷ್ಯದ ಉದ್ಯೋಗ ಎಂಜಿನ್
ದೊಡ್ಡ ಕಂಪನಿಗಳ ಬದಲಿಗೆ, ಭಾರತದ ಭವಿಷ್ಯದ ಉದ್ಯೋಗ ವೃದ್ಧಿಯು ಕೋಟ್ಯಂತರ ಸಣ್ಣ ವ್ಯಾಪಾರಗಳು ಮತ್ತು ಉದ್ಯಮಿಗಳಿಂದ (Small Businesses & Entrepreneurs) ಆಗಲಿದೆ. ಸಣ್ಣ ಸಂಸ್ಥೆಗಳ ಕಾರ್ಯವಿಧಾನಗಳು ಮತ್ತು ವಿಭಿನ್ನ ಕಾರ್ಯಗಳು ಹೆಚ್ಚು ವೈವಿಧ್ಯಮಯವಾಗಿರುವುದರಿಂದ, ಅವುಗಳು AI ನಿಂದ ಸಂಪೂರ್ಣವಾಗಿ ಬಾಧಿತಗೊಳ್ಳುವುದಿಲ್ಲ ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸುವುದನ್ನು ಮುಂದುವರಿಸುತ್ತವೆ ಎಂದು ಹೇಳುತ್ತಾರೆ ಇನ್ಫೋಸಿಸ್ ಸಹ-ಸಂಸ್ಥಾಪಕ.
ಸ್ಟಾರ್ಟ್‌ಅಪ್‌ಗಳ ಬೆಳವಣಿಗೆ
ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯು ಸದ್ಯವಿರುವ ಸುಮಾರು 1.5 ಲಕ್ಷದಿಂದ ಬೆಳೆದು, 2035ರ ವೇಳೆಗೆ ಸುಮಾರು 10 ಲಕ್ಷಕ್ಕೆ ತಲುಪುವ ನಿರೀಕ್ಷೆಯಿದೆ. ಇದು ದೇಶಾದ್ಯಂತ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಆಸ್ತಿ ವರ್ಗಾವಣೆ ವೇಳೆ ಸಕ್ಸಶನ್ ಸರ್ಟಿಫಿಕೇಟ್ ಮಾಡಿಸಬೇಕಾ, ಪ್ರೊಬೇಟ್ ಮಾಡಿಸಬೇಕಾ? ಇವೆರಡರ ಪಾತ್ರವೇನು? ಇಲ್ಲಿದೆ ವಿವರ
ಡಿಜಿಟಲ್ ಮೂಲಭೂತ ಸೌಕರ್ಯ ಮತ್ತು ಸುಲಭ ವ್ಯಾಪಾರ
ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು, ಮಾರುಕಟ್ಟೆ ಪ್ರವೇಶ ಮತ್ತು ಡಿಜಿಟಲ್ ಸೇವೆಗಳನ್ನು ಸುಲಭಗೊಳಿಸಲು ಆರ್ಬಿಐನ ‘ಅಕೌಂಟ್ ಅಗ್ರಿಗೇಟರ್’ ಮತ್ತು ‘ONDC’ ನಂತಹ ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್ (DPI) ಪ್ರಮುಖ ಪಾತ್ರ ವಹಿಸಲಿವೆ. ಉದ್ಯಮಿಗಳು ವ್ಯಾಪಾರ ಆರಂಭಿಸಲು ಮತ್ತು ಬೆಳೆಸಲು ಇರುವ ನಿಯಮಗಳನ್ನು ಸರಳಗೊಳಿಸುವುದು (Deregulation) ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
