‘ನನ್ನ ಗಂಡನಿಗೆ ಅಕ್ರಮ ಸಂಬಂಧ ಇದೆ’: ಪತ್ನಿಯನ್ನು ಗೃಹ ಬಂಧನದಲ್ಲಿಟ್ಟು ಪತಿ ಎಸ್ಕೇಪ್ – Kannada News | KR Puram Family Drama: Wife Reveals Confinement, Husband’s Affair and Talaq Plea

ಹಾಸನ, ಫೆ. 5: ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ನಡೆದ ಘಟನೆಗೆ ಭಾರೀ ಅಕ್ರೋಶ ವ್ಯಕ್ತವಾಗಿದೆ. ಹತ್ತು ವರ್ಷಗಳ ಸುಂದರ ಸಂಸಾರ, ಕೋಟಿ ಕೋಟಿ ಆಸ್ತಿ ಮತ್ತು ಮುದ್ದಾದ ಮಗುವಿದ್ದರೂ ಸಹ ಪತ್ನಿಗೆ ಹಿಂಸೆ ನೀಡಿರುವ ಘಟನೆಯೊಂದು ಹಾಸನದಲ್ಲಿ ಬೆಚ್ಚಿ ಬೀಳಿಸಿದೆ. ನಿಧಾ ಮತ್ತು ಮೊಹಮ್ಮದ್ ಉಮೇರ್​ಗೆ ಮದುವೆಯಾಗಿ (Hassan domestic dispute) 10 ವರ್ಷಗಳಾಗಿದ್ದು, ಒಂದು ಗಂಡು ಮಗುವಿದೆ. ಪತಿ ಉಮೇರ್ ತನಗೆ ತಲಾಖ್ ನೀಡಲು ಮುಂದಾಗಿದ್ದಾನೆ ಮತ್ತು ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ. ಈ ಕಾರಣಕ್ಕಾಗಿ ತನ್ನನ್ನು ಮನೆಯೊಳಗೆ ಕೂಡಿಹಾಕಿ ಮೂರು ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ಪತ್ನಿ ನಿಧಾ ಆರೋಪಿಸಿದ್ದಾಳೆ. ಇದೀಗ ಈ ಗಂಡ -ಹೆಂಡತಿಯ ಜಗಳ ಬೀದಿಗೆ ಬಂದಿದೆ.

ಹಾಸನದ ಕೆ.ಆರ್.ಪುರಂ ಬಡಾವಣೆಯಲ್ಲಿರುವ ಸ್ವಂತ ಬಿಲ್ಡಿಂಗ್​​​ನ ಬಾಲ್ಕನಿಯಿಂದಲೇ ತನಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಲ್ಲರಿಗೂ ಕೇಳುವಂತೆ ಕೂಗಿ ಕೂಗಿ ನಿಧಾ ಹೇಳಿದ್ದಾಳೆ. ಇದನ್ನು ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ಕೆ.ಆರ್.ಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಪೊಲೀಸರಿಗೆ ಈ ಗಂಡ -ಹೆಂಡತಿ ಜಗಳವನ್ನು ಇತ್ಯರ್ಥ ಮಾಡುವುದು ಅಷ್ಟೊಂದು ಸುಲಭ ಇರಲಿಲ್ಲ. ಹಾಗೂ ಮನೆಯ ಒಳಗೆ ಹೋಗಿ ಆಕೆಯನ್ನು ಕಾಪಾಡಲು ಕೂಡ ಆಗಿಲ್ಲ. ಪೊಲೀಸರು ಬಾಲ್ಕನಿಯಿಂದ ಎಲ್ಲವನ್ನು ವಿಚಾರಿಸಿದ್ದಾರೆ. ಆಕೆ ನನ್ನ ಗಂಡ ಮತ್ತೊಂದು ಮಹಿಳೆ ಜತೆಗೆ ಸಂಬಂಧ ಹೊಂದಿದ್ದಾನೆ ಎಂದು ಹೇಳುತ್ತಿದ್ದಾಳೆ. ಆಕೆಯ ಮನೆಯವರು ಕೂಡ ಮೊಹಮ್ಮದ್ ಉಮೇರ್​ ಸರಿ ಇಲ್ಲ ಎಂದು ಹೇಳಿದ್ದಾರೆ. ಮತ್ತೊಂದು ಕಡೆ ಮೊಹಮ್ಮದ್ ಉಮೇರ್ ಮನೆಯವರು, ನಿಧಾ ಸರಿ ಇಲ್ಲ, ಅವಳೇ ಬೀದಿ ರಂಪಾಟ ಮಾಡುತ್ತಿದ್ದಾಳೆ ಎಂದು ದೂರುತ್ತಿದ್ದಾರೆ. ಇದೀಗ ಈ ಪ್ರಕರಣ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಪೊಲೀಸರ ಮುಂದೆಯೇ ಎರಡೂ ಕುಟುಂಬದ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಾ ಬೀದಿಯಲ್ಲಿ ಹೈಡ್ರಾಮ ನಡೆಸಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ಭಾರೀ ಅಗ್ನಿ ಅವಘಡ: ಹೊತ್ತಿ ಉರಿದ ಸರ್ವೀಸ್ ಸೆಂಟರ್, 1 ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಕಾರುಗಳು ಭಸ್ಮ

ಮೊಹಮ್ಮದ್ ಉಮೇರ್ ಮಟನ್ ಚಿಕನ್ ವ್ಯಾಪಾರ ಮಾಡಿ ಸ್ವಂತ ಬಿಲ್ಡಿಂಗ್ ಕಟ್ಟಿಸಿ, ಕೋಟಿ ಕೋಟಿ ಹಣ ಮಾಡಿದ್ದಾನೆ.ಮುದ್ದಾದ ಹೆಂಡತಿ, ಮಗು ಖುಷಿಯಾದ ಸಂಸಾರ ನಡೆಸುತ್ತಿದ್ದ, ಆದರೆ ಇದರ ಮಧ್ಯೆ ಮತ್ತೊಂದು ಮಹಿಳೆ ಎಂಟ್ರಿ ಆಗಿರುವ ಶಂಕೆ ವ್ಯಕ್ತವಾಗಿದೆ. ತನ್ನನ್ನು ರೂಮ್​​ನಲ್ಲಿ ಬಂಧನ ಮಾಡಿ, ಚಿತ್ರಹಿಂಸೆ ನೀಡಿದ್ದಾನೆ ಎಂದು ಪತ್ನಿಯ ಆರೋಪವಾಗಿದೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ನನ್ನನ್ನೂ ಮೂರು ದಿನದಿಂದ ಬಂಧನದಲ್ಲಿ ಇಟ್ಟಿದ್ದಾರೆ. ನನ್ನ ಮನೆಯವರಿಗೆ ಫೋನ್​​ ಮಾಡಿ, ಊಟ, ತಿಂಡಿ ತರಿಸಿಕೊಳ್ಳುತ್ತಿದ್ದೇ, ಗಂಡನಿಗೆ ಫೋನ್​​ ಮಾಡಿದ್ರೆ, ಈಗ ಬರ್ತೆನೆ, ಮತ್ತೆ ಬರ್ತೆನೆ ಎಂದು ಹೇಳುತ್ತಾರೆ. ನೀನು ನನಗೆ ತಲಾಖ್​​ ನೀಡು ಎಂದು ಪ್ರತಿದಿನ ಒತ್ತಾಯ ಮಾಡುತ್ತಾರೆ. ಯಾಕೆ ತಲಾಖ್​​​ ನೀಡಬೇಕು ಎಂದು ಕೇಳಿದ್ರೆ, ನನಗೆ ಬೇರೆ ಸಂಬಂಧ ಇದೆ ಎಂದು ಹೇಳುತ್ತಾರೆ. ಆದರೆ ನನಗೆ ಗಂಡ ಬೇಕು ಎಂದು ಮಹಿಳೆ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *