Headlines

ನಾಗರಹೊಳೆ, ಬಂಡೀಪುರದಲ್ಲಿ ಹೆಚ್ಚಿದ ವ್ಯಾಘ್ರಗಳ ಗರ್ಜನೆ: ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು! – Kannada News | Karnataka’s Tiger Conservation Success: Nagarahole, Bandipur Boost Wildlife Tourism

ಮೈಸೂರು, ಮೇ,21: ಪ್ರಕೃತಿ ಪ್ರೇಮಿಗಳು ಹಾಗೂ ವನ್ಯಜೀವಿ ಆಸಕ್ತರಿಗೆ ಒಂದು ಸಂತಸದ ಸುದ್ದಿಯೊಂದು ಇದೆ. ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆಯ ಕಠಿಣ ಸುರಕ್ಷತಾ ಕ್ರಮಗಳು ಮತ್ತು ಪೂರಕ ವಾತಾವರಣದಿಂದಾಗಿ ಈ ಉದ್ಯಾನವನಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ (Increase in Tiger Population) ಕಂಡಿದೆ. ಇದರ ಬೆನ್ನಲ್ಲೇ, ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹುಲಿಗಳ ದರ್ಶನ ಭಾಗ್ಯ ನಿರಂತರವಾಗಿ ಸಿಗುತ್ತಿದೆ. ಇತ್ತೀಚೆಗಷ್ಟೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವಾಹನದಲ್ಲಿ ತೆರಳುತ್ತಿದ್ದ ಪ್ರವಾಸಿಗರಿಗೆ ಅತ್ಯಂತ ಅಪರೂಪದ ಹಾಗೂ ರೋಮಾಂಚನಕಾರಿ ದೃಶ್ಯವೊಂದು ಕಂಡಿದೆ. ಅರಣ್ಯದ ಹಸಿರ ಮಧ್ಯೆ ರಾಜಗಾಂಭೀರ್ಯದಿಂದ ಓಡಾಡುತ್ತಿದ್ದ ಎರಡು ದೊಡ್ಡ ಗಾತ್ರದ ಹುಲಿಗಳು ಏಕಕಾಲದಲ್ಲಿ ಪ್ರವಾಸಿಗರ ಕಣ್ಣಿಗೆ ಬಿದ್ದಿವೆ. ಸಫಾರಿ ವಾಹನವನ್ನು ಕಂಡು ಕಿಂಚಿತ್ತೂ ಹೆದರದೆ, ಈ ಜೋಡಿ ಹುಲಿಗಳು ಪ್ರವಾಸಿಗರ ಕ್ಯಾಮೆರಾಗೆ ಅತ್ಯಂತ ‘ಬಿಂದಾಸ್’ ಆಗಿ ಪೋಸ್ ನೀಡಿವೆ. ಸಾಮಾನ್ಯವಾಗಿ ದಟ್ಟ ಕಾಡಿನಲ್ಲಿ ಹುಲಿಗಳ ದರ್ಶನವಾಗುವುದು ಅತ್ಯಂತ ಅಪರೂಪ. ಆದರೆ ಒಂದೇ ಬಾರಿಗೆ ಎರಡು ಹುಲಿಗಳು ಅತ್ಯಂತ ಹತ್ತಿರದಿಂದ ಕಾಣಿಸಿಕೊಂಡು, ಗಂಟೆಗಟ್ಟಲೆ ಪ್ರವಾಸಿಗರ ಕಣ್ಣಮುಂದೆ ವಿಹರಿಸಿದ್ದನ್ನು ಕಂಡು ಸಫಾರಿಯಲ್ಲಿದ್ದ ಪ್ರವಾಸಿಗರು ಅಕ್ಷರಶಃ ಮಂತ್ರಮುಗ್ಧರಾಗಿದ್ದಾರೆ. ತಮ್ಮ ಪ್ರವಾಸದ ಅತ್ಯುತ್ತಮ ಕ್ಷಣಗಳನ್ನು ಪ್ರವಾಸಿಗರು ಮೊಬೈಲ್ ಹಾಗೂ ವೃತ್ತಿಪರ ಕ್ಯಾಮೆರಾಗಳಲ್ಲಿ ಸೆರೆಹಿಡಿದುಕೊಂಡಿದ್ದು, ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ನಾಗರಹೊಳೆ ಮತ್ತು ಬಂಡೀಪುರ ಪ್ರವಾಸೋದ್ಯಮಕ್ಕೆ ಈ ವ್ಯಾಘ್ರಗಳ ಸಂಖ್ಯೆ ಹೆಚ್ಚಳವು ಮತ್ತಷ್ಟು ಆನೆಬಲ ತಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *