ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಧ್ರುವಂತ್ ಅವರು ಸಾಕಷ್ಟು ಚರ್ಚೆ ಆಗಿದ್ದರು. ಅವರಿಗೆ ಸೀಸನ್ ಚಪ್ಪಾಳೆಯನ್ನು ಸುದೀಪ್ ನೀಡಿದರು. ನಂತರ ಇದಕ್ಕೆ ಟೀಕೆ ಸಿಕ್ಕಿದ್ದರಿಂದ ವಾರದ ಚಪ್ಪಾಳೆ ಎಂದು ಕಲರ್ಸ್ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಬದಲಾಯಿಸಿತ್ತು. ಈ ಬಗ್ಗೆ ಧ್ರುವಂತ್ ಮಾತನಾಡಿದ್ದಾರೆ. ‘ಟಿಆರ್ಪಿ ತರೋರು ಒಬ್ಬರಾದರೆ, ಕಪ್ ಗೆಲ್ಲೋರು ಮತ್ತೊಬ್ಬರಾಗಿರ್ತಾರೆ. ಕಪ್ ಗೆಲ್ಲದೆ ಇರಬಹುದು ಆದರೆ, ಶೋ ಗೆದ್ದಿದ್ದು ನಾನು’ ಎಂದು ಧ್ರುವಂತ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
