ಬೆಂಗಳೂರು, (ಆಗಸ್ಟ್ 02): ಈ ಭಾನುವಾರ ರಾಜ್ಯದ ಗಮನಸೆಳೆಯುವ ಐತಿಹಾಸಿಕ ದಿನ. ಸಿಎಂ ಆಗಿ ಎರಡು ತಿಂಗಳು ಕಳೆದಿವೆ. ಸಿಎಂ ಜೊತೆಗೆ ನಾನು ಕೂಡ ಕಾವೇರಿ ಕಣಿವೆಯಲ್ಲಿ ಹುಟ್ಟಿಬೆಳೆದಿದ್ದೇನೆ.ನಾನು ಕೂಡ ರೈತನ ಮಗನಾಗಿದ್ದೇನೆ. ಕಾವೇರಿ ವಿಚಾರದಲ್ಲಿ ರೈತರ ರಕ್ಷಣೆಗೆ ನಾನು ಮತ್ತು ನಮ್ಮ ಸರಕಾರ ಬದ್ಧವಾಗಿದೆ. ರಾಜ್ಯದ ಏಳುವರೆ ಕೋಟಿ ಜನರಿಗೆ ಯಾವುದೇ ಅನುಮಾನ ಬೇಡ. ಎಲ್ಲ ಸಂದರ್ಭದಲ್ಲಿ ಜನರ ಹಿತ ಕಾಪಾಡುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಸರ್ವಪಕ್ಷಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಕಾವೇರಿ ಜಲಾನಯನ ಪ್ರದೇಶದ ಜನತೆ ಆತಂಕ ಪಡುವುದು ಬೇಡ. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಪರವಾಗಿ ನಿರ್ಧಾರ ಕೈಗೊಳ್ಳಲಿದೆ. ತಮಿಳುನಾಡಿಗೆ 15 ದಿನ 3,500 ಕ್ಯೂಸೆಕ್ ನೀರು ಹರಿಸಲು ಆದೇಶಿಸಿದ್ದು, CWRC ಶಿಫಾರಸನ್ನು ಸಿಡಬ್ಲ್ಯುಎಂಎ ಆದೇಶವಾಗಿ ಮಾರ್ಪಡಿಸಿತ್ತು. ಪ್ರಕೃತಿ ನಮಗೆ ನೆರವು ನೀಡಿದ್ದರಿಂದ ಸದ್ಯದ ಸಮಸ್ಯೆ ಬಗೆಹರಿದಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮಳೆ ಬರದೆ ಬರದ ಛಾಯೆ ಇದೆ. 35% ಮಳೆ ಮಾತ್ರ ರಾಜ್ಯದಲ್ಲಿ ಬಂದಿದೆ. CWMA 3500 ಕ್ಯೂಸೆಕ್ ಬಿಡುವ ಆದೇಶ ಸಂಕಟ ತಂದಿತ್ತು. 9.5 ಟಿಎಂಸಿ ಬಿಡಬೇಕು ಎಂದು ತಮಿಳುನಾಡು ಸರಕಾರ ವಾದಿಸಿತ್ತು. ರಾಜ್ಯದ ಜನರ ಪ್ರಾರ್ಥನೆಯಂತೆ ಮಳೆ ಬಂದಿದೆ. ಕಬಿನಿಯಲ್ಲಿ 24 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಕೆಆರ್ ಎಸ್ ನಲ್ಲಿ 22 ಕ್ಯೂಸೆಕ್ ನೀರು ಹರಿದು ಬರದುತ್ತಿದೆ. ಕೊಡಗು ಭಾಗದಲ್ಲಿ ಸ್ವಲ್ಪ ಮಳೆ ಕಡಿಮೆಯಾಗಿದೆ. ಕುಡಿಯುವ ನೀರಿಗೆ 40 ಟಿಎಂಸಿ ಇಡಬೇಕು ಎಂದು ವಿವರಿಸಿದರು.
ಇದನ್ನೂ ಓದಿ: ರಾಜಕೀಯಕ್ಕಿಂತ ರಾಜ್ಯದ ರೈತರು, ಜನರ ಹಿತ ಮುಖ್ಯ: ಸರ್ವಪಕ್ಷಗಳ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಅಭಿಮತ
ಸರ್ವ ಪಕ್ಷಗಳ ಸಭೆಯಲ್ಲಿ ಒಳ್ಳೆಯ ಸಲಹೆ ಕೊಟ್ಟಿದ್ದಾರೆ. ಮಾಜಿ ಸಿಎಂಗಳು ಸಲಹೆ, ಮಾರ್ಗದರ್ಶನ ಕೊಟ್ಟಿದ್ದಾರೆ. ದೆಹಲಿಯ ರಾಜ್ಯದ ವಕೀಲರ ಟೀಂ ಬಂದಿದೆ. ಅಡ್ವೊಕೆಟ್ ಜನರ್ ಕೂಡ ಸಭೆಯಲ್ಲಿ ಭಾಗಿಯಾಗಿದ್ರು.ಕೆಆರ್ ಎಸ್ ಡ್ಯಾಂ ನಲ್ಲಿ ಒಳಹರಿವು ಮಧ್ಯಾಹ್ನದಿಂದ ಕಡಿಮೆ ಆಗಿದೆ. ಕೆರೆಗಳನ್ನು ತುಂಬಲು ಕುಡಿಯುವ ನೀರಿಗೆ ನೀರು ಕಾಲುವೆಗಳ ಮೂಲಕ ಹರಿಸಲಾಗುತ್ತಿದೆ. ಕುಡಿಯುವ ನೀರಿಗೆ ಒತ್ತು ನೀಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಸಂಕಷ್ಟದ ಸೂತ್ರದ ಅನ್ವಯ ಕಾನೂನಿನ ಮೂಲಕವೇ ಹೋರಾಟ ಮಾಡಬೇಕು ಎಂದಿದ್ದಾರೆ ಎಂದು ತಿಳಿಸಿದರು.
ಜೂನ್ ನಲ್ಲಿ 2.9 ಟಿಎಂಸಿ ಬಿಟಗಟಿದ್ದೇವು. ಜುಲೈನಲ್ಲಿ 1.5 ಟಿಎಂಸಿ ಬಿಟ್ಟಿದ್ದೇವೆ ಇಲ್ಲಿವರೆಗೆ ಯಾವುದೇ ಡ್ಯಾಂನಿಂದ ಬಿಟ್ಟಿರಲಿಲ್ಲ. ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ನಿನ್ನೆ ಮಧ್ಯಾಹ್ನ ನಂತರ ಡ್ಯಾಂ ಸೇಫ್ಟಿಗೋಸ್ಕರ ಕಬಿನಿಯಿಂದ ನೀರು ಬಿಟ್ಟಿದ್ದೇವೆ ಎಂದರು.
ಕರ್ನಾಟಕ ಬಂದ್ ಕೈಬಿಡುವಂತೆ ಮನವಿ
ಸಂಸದರು ಕಾನೂನು ಸಲಹೆ ಕೊಟ್ಟಿದ್ದಾರೆ. ಪ್ರತಿಭಟನೆ ಮಾಡಿದ್ದಾರೆ.ಬಿಜೆಪಿಯವರು ಕೆಆರ್ ಎಸ್ ಬಳಿ ಪ್ರತಿಭಟನೆ ಮಾಡಿದ್ದಾರೆ. ಆಗಸ್ಟ್ 13ಕ್ಕೆ ಬಂದ್ ಮಾಡುವ ಘೋಷಣೆ ಮಾಡಿದ್ದಾರೆ. ಎಲ್ಲ ಸಂಘಟನೆಗಳಿಗೂ ನನ್ನ ಮನವಿ. ಬಂದ್ ಗೆ ಅವಕಾಶ ಕೊಡುವುದು ಬೇಡ. ಸರ್ವಪಕ್ಷಗಳ ಸಭೆಯಲ್ಲಿ ಇದೆ ಅಭಿಪ್ರಾಯ ಒತ್ತಾಯವಾಗಿದೆ. ಸರಕಾರ ಮತ್ತು ಪ್ರಕೃತಿ ನಿಮ್ಮ ಪರವಾಗಿ ನಿಂತಿದೆ ಎಂದು ಕರ್ನಾಟಕ ಬಂದ್ ಕೈಬಿಡುವಂತೆ ಮನವಿ ಮಾಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 3:23 pm, Sun, 2 August 26
