ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026) ರ 24ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ (MI vs PBKS) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅಸಾಧಾರಣ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಶ್ರೇಯಸ್ ಅಯ್ಯರ್ ಹಿಡಿದ ಈ ಅದ್ಭುತ ಕ್ಯಾಚ್ ಅನ್ನು ನೋಡಿದ ಮುಂಬೈ ತಂಡದ ಆಟಗಾರರು ಕೂಡ ದಿಗ್ಭ್ರಮೆಗೊಂಡಿದ್ದರು. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಅವರ ಸಮಯ ಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಕೂಡ ಶ್ರೇಯಸ್ ಅಯ್ಯರ್ ಅವರನ್ನು ಹಾಡಿ ಹೊಗಳಿದಿದ್ದಾರೆ.
ವಾಸ್ತವವಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಲಾಂಗ್ ಆನ್ ಕಡೆಗೆ ಬಿಗ್ ಶಾಟ್ ಆಡಿದರು. ಈ ವೇಳೆ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಗಾಳಿಯಲ್ಲಿ ಹಾರಿ ಮೊದಲು ಚೆಂಡನ್ನು ಹಿಡಿದರು. ಆ ನಂತರ, ತಾನು ಬೌಂಡರಿ ಲೈನ್ ಅನ್ನು ದಾಡುತ್ತಿರುವುದನ್ನು ಗಮನಿಸಿದ ಶ್ರೇಯಸ್ ಗಾಳಿಯಲ್ಲಿ ಇರುವಾಗಲೇ ಚೆಂಡನ್ನು ಮೇಲಕ್ಕೆ ಎಸೆದರು. ಈ ವೇಳೆ ಅಲ್ಲಿಯೇ ಇದ್ದ ಕ್ಸೇವಿಯರ್ ಬಾರ್ಟ್ಲೆಟ್ ಕ್ಯಾಚ್ ಪೂರ್ಣಗೊಳಿಸಿದ್ದರು.
IPL 2026: ಐಪಿಎಲ್‌ನಲ್ಲಿ ವಿಶೇಷ ತ್ರಿಶತಕ ಬಾರಿಸುವ ಹೊಸ್ತಿಲಿನಲ್ಲಿ ವಿರಾಟ್ ಕೊಹ್ಲಿ
What made Shreyas Iyer’s catch so special was not just the athleticism, but the awareness behind it.
He had to judge the speed of the ball, the height, where the boundary rope was, how close he was to stepping on it, and get his jump absolutely perfect.
Then, while still in the…
— Sachin Tendulkar (@sachin_rt) April 17, 2026
ನಾನು ಲೈವ್ ಆಗಿ ನೋಡಿದ ಅತ್ಯುತ್ತಮ ಕ್ಯಾಚ್
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್, ‘ಶ್ರೇಯಸ್ ಅಯ್ಯರ್ ಅವರ ಕ್ಯಾಚ್ ಕೇವಲ ಕ್ರೀಡಾಶೀಲತೆಯ ಬಗ್ಗೆ ಮಾತ್ರವಲ್ಲ, ಬದಲಿಗೆ ಆ ಕ್ಯಾಚ್ ಹಿಡಿಯುವಾಗ ಅವರು ಎಷ್ಟು ಜಾಗರೂಕರಾಗಿದ್ದರು ಎಂಬುದನ್ನು ತೋರಿಸುತ್ತದೆ. ಏಕೆಂದರೆ ಶ್ರೇಯಸ್ ಆ ಚೆಂಡಿನ ವೇಗ, ಎತ್ತರ, ಬೌಂಡರಿ ಲೈನ್ ಎಲ್ಲಿದೆ? ಎಂಬುದನ್ನೆಲ್ಲ ಗಮನದಲ್ಲಿಟ್ಟುಕೊಂಡಿರಬೇಕಿತ್ತು. ಇದರ ಜೊತೆಗೆ ಬೌಂಡರಿ ಲೈನ್ಗೆ ತುಂಬಾ ಹತ್ತಿರದಲ್ಲೇ ಶ್ರೇಯಸ್ ಅವರ ಕಾಲಿತ್ತು. ಇದರಿಂದ ಅವರ ಕಾಲು ಬೌಂಡರಿ ಲೈನ್ಗೆ ತಾಗುವುದಕ್ಕೂ ಮೊದಲು, ಗಾಳಿಯಲಿದ್ದಾಗಲೇ ಚೆಂಡನ್ನು ತಂಡದ ಸಹ ಆಟಗಾರನ ಕಡೆಗೆ ಎಸೆದರು. ಅಂದರೆ ಶ್ರೇಯಸ್ ಇದೆಲ್ಲದರ ನಡುವೆ ಸಹ ಆಟಗಾರ ಎಲ್ಲಿದ್ದಾನೆ ಎಂಬುದನ್ನು ಗಮನಿಸಿದ್ದರು. ಇದೆಲ್ಲವನ್ನು ಕ್ಷಣ ಮಾತ್ರದಲ್ಲಿ ಮಾಡಬೇಕಿತ್ತು. ಶ್ರೇಯಸ್ ಇದೆಲ್ಲವನ್ನು ಮಾಡಲು ಸಾಧ್ಯವಾಗಿದ್ದು, ಅವರ ಸಮಯಪ್ರಜ್ಞೆ, ಫಿಟ್ನೆಸ್ನಿಂದ. ನಾನು ಲೈವ್ ಆಗಿ ನೋಡಿದ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಇದು ಒಂದು!’ ಎಂದು ಬರೆದುಕೊಂಡಿದ್ದಾರೆ.
Published On – 3:55 pm, Fri, 17 April 26