
ಸತೀಶ್ (Satish) ಅವರು ಸದಾ ಸುದ್ದಿಯಲ್ಲಿರಲು ಬಯಸುತ್ತಾರೆ. ಇತ್ತೀಚೆಗೆ ಅವರು ಸುದೀಪ್ ಬಗ್ಗೆ ಆಡಿದ ಮಾತು ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ಈ ವಿಷಯದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದವು. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಬೆದರಿಕೆಗಳು ಬಂದವು. ಈಗ ತಾವು ಆ ರೀತಿ ಹೇಳಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.
‘ನಾನು, ಸರ್ ಬಗ್ಗೆ ಎಲ್ಲಿ ಹಗುರವಾಗಿ ಮಾತನಾಡಿದ್ದೇನೆ. ನಟರಿಗೆ ಕೊಂಬಿರುತ್ತದೆಯೇ ಎಂದು ನಾನು ಕೇಳಿದೆನೇ ಹೊರತು, ಸುದೀಪ್ ಸರ್ಗೆ ಕೇಳಿದ್ದಲ್ಲ. ಈ ಬಗ್ಗೆ ನಾನು ಟಿವಿ9 ಅಲ್ಲಿ ಮಾತನಾಡಿದ್ದೆ. ನಟರು ಮಾತ್ರ ಸಾಧಿಸೋದಾ? ಡಾಗ್ ಫಿಲ್ಡ್ ಅವರು, ವೈದ್ಯರು ಎಲ್ಲರೂ ಸಾಧನೆ ಮಾಡಿರ್ತಾರೆ. ಹೀಗಿರುವಾಗ ನಟರಿಗೆ ಮಾತ್ರ ಯಾಕೆ ಅಷ್ಟು ಗೌರವ ಕೊಡಬೇಕು ಎಂದು ನಾನೆ ಪ್ರಶ್ನೆ ಮಾಡಿದ್ದು. ಸೋಶಿಯಲ್ ಮೀಡಿಯಾದಲ್ಲ ಅದನ್ನು ತಿರುಚಲಾಗಿದೆ’ ಎಂದು ಸತೀಶ್ ಹೇಳಿದ್ದಾರೆ.
ಇದನ್ನೂ ಓದಿ: ಸುದೀಪ್ ನಟ ಆದ್ರೆ ತಲೆ ಮೇಲೆ ಕೊಂಬು ಇರುತ್ತಾ? ಡಾಗ್ ಸತೀಶ್ ಗರಂ
‘ಸುದೀಪ್ ಸರ್ ಅವರು ಎಲ್ಲಿಯವರೆಗೆ ಹೆಸರು ಮಾಡಿದ್ದಾರೆ? ಗೂಗಲ್ನಲ್ಲಿ ನಂಬರ್ 1 ಹೀರೋ ಅಂತ ಹುಡುಕಿದರೆ ಬರುವಂತಹ ಹಂತಕ್ಕೆ ಆಗಿದ್ದಾರಾ? ನಟ ಆದ ಮಾತ್ರಕ್ಕೆ ತಲೆ ಮೇಲೆ ಕೊಂಬು ಇರುತ್ತಾ? ನಾಯಿ ಪೀಲ್ಡ್ನಲ್ಲಿ ಪ್ರಪಂಚಕ್ಕೆ ನಂಬರ್ 1 ನಾನು ಅಂತ ಬರುತ್ತೇನೆ. ಅವರು ಕರ್ನಾಟಕಕ್ಕೆ ಇರಬಹುದು ಅಥವಾ ಅರ್ಧ ಭಾರತಕ್ಕೆ ಇರಬಹುದು. ಇಂಡಿಯಾಗೆ ನಂಬರ್ ಒನ್ ಹೀರೋ ಅಂತ ಗೂಗಲ್ನಲ್ಲಿ ಹಾಕಿದರೆ ಸುದೀಪ್ ಸರ್ ಬರುತ್ತಾರಾ’ ಎಂದು ಸತೀಶ್ ಪ್ರಶ್ನೆ ಮಾಡಿದ್ದರು. ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಈ ಹೇಳಿಕೆಯಿಂದ ಸುದೀಪ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ರಜತ್ ಹಾಗೂ ವಿನಯ್ ಗೌಡ ಸಿಟ್ಟಾಗಿದ್ದು, ಸತೀಶ್ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಆ ಬಳಿಕ ಸತೀಶ್ ಅವರು ಇಬ್ಬರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.