ನಾಪತ್ತೆಯಾಗಿದ್ದ ಮಹಿಳೆ ಪರಪುರುಷನ ಜೊತೆ ಪತ್ತೆ: ಬಾಡಿಗೆ ಮನೆ ಮಾಲೀಕನ ಶಾಕಿಂಗ್​​ ಹೇಳಿಕೆ – Kannada News | Hassan Missing Woman Found with a men in Kunigal: House Owners Shocking Revelation

ಹಾಸನ, ಫೆಬ್ರವರಿ 15: ಮದುವೆಗೆ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣ ಸಂಬಂಧ ಆಕೆ ತಂಗಿದ್ದ ಪತಿಯ ಸ್ನೇಹಿತ ಡೇವಿಡ್​​ ಎಂಬಾತನ ಬಾಡಿಗೆ ಮನೆಯ ಮಾಲೀಕ ಘಟನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮನೆ ಮಾಲೀಕ ಶಿವಣ್ಣ ಅವರು, ತಮ್ಮ ಬಾಡಿಗೆದಾರ ಡೇವಿಡ್ ಮನೆಯಲ್ಲಿ ಮಹಿಳೆ ಇದ್ದ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ. ಪೊಲೀಸರು ಬಂದು ಇಬ್ಬರನ್ನೂ ಕರೆದೊಯ್ದ ನಂತರವೇ ಈ ವಿಚಾರ ತಿಳಿದುಬಂದಿದೆ ಎಂದು ಹೇಳಿದ್ದಾರೆ. ಡೇವಿಡ್ ಸುಮಾರು ಒಂದು ವರ್ಷದಿಂದ ಶಿವಣ್ಣ ಅವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ. ಮೊದಲು ಹೆಂಡತಿ ಎಂದು ಹೇಳಿ ಒಬ್ಬ ಮಹಿಳೆಯೊಂದಿಗೆ ಡೇವಿಡ್ ವಾಸವಿದ್ದ ಎನ್ನಲಾಗಿದ್ದು, ಆ ಮಹಿಳೆ ಆರು-ಏಳು ತಿಂಗಳ ಹಿಂದೆ ಅಪ್ಪ-ಅಮ್ಮನಿಗೆ ಹುಷಾರಿಲ್ಲವೆಂದು ಹೋದವಳು ನಂತರ ಮರಳಿ ಬಂದಿರಲಿಲ್ಲ. ಅಂದಿನಿಂದ ಡೇವಿಡ್ ಒಬ್ಬನೇ ವಾಸವಾಗಿದ್ದ ಎಂದು ಶಿವಣ್ಣ ವಿವರಿಸಿದ್ದಾರೆ.

ಪೊಲೀಸರು ರಾತ್ರಿ 9:30ರ ಸುಮಾರಿಗೆ ಆಗಮಿಸಿ ನೇರವಾಗಿ ಡೇವಿಡ್ ಇದ್ದ ಕೊಠಡಿಗೆ ಹೋಗಿ ಮಹಿಳೆ ಮತ್ತು ಆತನನ್ನು ಕರೆದುಕೊಂಡು ಹೋಗಿದ್ದಾರೆ. ಯಾರೂ ವಿಚಾರಿಸಲಿಲ್ಲ ಅಥವಾ ಯಾವುದೇ ಮಾಹಿತಿ ಪಡೆಯಲು ಪ್ರಯತ್ನಿಸಲಿಲ್ಲ. ಮಹಿಳೆ ನಾಪತ್ತೆಯಾಗಿರುವುದು, ಕೆರೆಯಲ್ಲಿ ಶವಕ್ಕಾಗಿ ಹುಡುಕಾಡುತ್ತಿರುವ ವಿಚಾರ ಟಿವಿ ಮತ್ತು ಮೊಬೈಲ್ ಮೂಲಕ ತಿಳಿದಿತ್ತು. ಆದರೆ, ಆ ಮಹಿಳೆಯೇ ತಮ್ಮ ಮನೆಯಲ್ಲಿ ಇದ್ದರು ಎಂಬುದು ತಿಳಿದಾಗ ತಮಗೆ ತೀವ್ರ ಆಘಾತವಾಯಿತು ಎಂದು ಶಿವಣ್ಣ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *