‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ – Kannada News | Naa Ninna Bidalaare Twist: Durga and Ambika Are Sisters! Shocking Revelation

‘ನಾ ನಿನ್ನ ಬಿಡಲಾರೆ’ ಧಾರಾವಾಹಿ (Na Ninna Bidalre) ಪ್ರಮುಖ ಟ್ವಿಸ್ಟ್​​ಗಳನ್ನು ಪಡೆದು ಸಾಗುತ್ತಿದೆ. ದುರ್ಗಾ ಹಾಗೂ ಅಂಬಿಕಾ ಮಧ್ಯೆ ಸಾಕಷ್ಟು ಬಾಂಧವ್ಯ ಬೆಳೆದಿತ್ತು. ಅಂಬಿಕಾ ಆತ್ಮವಾದರೂ ಅದು ಕಾಣಿಸುತ್ತಾ ಇದ್ದಿದ್ದು ದುರ್ಗಾಗೆ ಮಾತ್ರ ಆಗಿತ್ತು. ಹೀಗೇಕೆ ಎಂಬ ಪ್ರಶ್ನೆ ದುರ್ಗಾಗೆ ಅನೇಕ ಬಾರಿ ಕಾಡಿದ್ದೂ ಇದೆ ಎಂದರೂ ತಪ್ಪಾಗಲಾರದು. ಈಗ ಈ ಪ್ರಶ್ನೆಗೆ ಉತ್ತರ ಏನೋ ಸಿಕ್ಕಿದೆ. ಆದರೆ, ಅದು ತುಂಬಾ ತಡವಾಯಿತೇ ಎಂಬ ಪ್ರಶ್ನೆ ಮೂಡಿದೆ.

ಮಾಳವಿಕಾ ಮಾಡುತ್ತಿದ್ದ ಮಾಟದ ತಂತ್ರಕ್ಕೆ ಅಂಬಿಕಾ ಬಲಿಪಶುವಾಗಿದ್ದು ಗೊತ್ತೇ ಇದೆ. ಅಂಬಿಕಾಗೆ ತನ್ನ ಮನಸ್ಸು ಹಿಡಿತಕ್ಕೆ ಸಿಗದೆ ಕೆಟ್ಟದನ್ನು ಮಾಡುತ್ತಿದ್ದಳು. ಇದರಿಂದ ದುರ್ಗಾ ತುಂಬಾನೇ ಭಯಗೊಂಡಳು. ಆ ಬಳಿಕ ದುರ್ಗಾ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡಳು. ಹೇಗಾದರೂ ಮಾಡಿ ಅಂಬಿಕಾ ಆತ್ಮಕ್ಕೆ ಶಾಂತಿಕೊಡಬೇಕು ಎಂದು ಮನೆಯವರು ನಿರ್ಧರಿಸಿದಾಗ ಇದಕ್ಕೆ ಒಪ್ಪಿಗೆ ಕೊಟ್ಟಳು.

ಅಂಬಿಕಾ ಸತ್ತ ದಿನದಿಂದಲೂ ಆಕೆಗೆ ಶ್ರಾದ್ಧ ಆಗಿರಲಿಲ್ಲ. ಹೀಗಾಗಿ, ಅವಳ ಆತ್ಮ ಎಲ್ಲ ಕಡೆಗಳಲ್ಲಿ ಸುತ್ತಾಡುತ್ತಾ ಇತ್ತು. ಕೊನೆಗೂ ಅವಳ ಶ್ರಾದ್ಧ ಮಾಡಲಾಗಿದೆ. ಈ ಮೂಲಕ ಅಂಬಿಕಾ ಆತ್ಮವನ್ನು ಮಾಳವಿಕಾ ಬಂಧಿಸಿಟ್ಟುಕೊಂಡಿದ್ದಾಳೆ. ಈ ವಿಷಯ ಮಾಳವಿಕಾಗೆ ಮಾತ್ರ ಗೊತ್ತು. ಈ ಮಧ್ಯೆ ಅಂಬಿಕಾ ಶ್ರಾದ್ಧ ಮುಗಿದ ಬಳಿಕ ದುರ್ಗಾಗೆ ನಿಜ ವಿಷಯ ಗೊತ್ತಾಗಿದೆ.

ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಕೊನೆ ಆಗುತ್ತಿದೆ ಮಾಯಾ ಪಾತ್ರ?

ಅಂಬಿಕಾ ಹಾಗೂ ದುರ್ಗ ಅಕ್ಕ ತಂಗಿ. ಈ ವಿಷಯ ತಡವಾಗಿ ಅವಳಿಗೆ ಗೊತ್ತಾಗಿದೆ. ಇದನ್ನು ಕೇಳಿ ದುರ್ಗಾ ಶಾಕ್​​ಗೆ ಒಳಗಾಗಿದ್ದಾಳೆ. ಇದಕ್ಕೂ ಕಾರಣ ಇದೆ. ಅಕ್ಕನ ಹುಡುಕಬೇಕು ಎಂಬ ಏಕೈಕ ಕಾರಣಕ್ಕೆ ದುರ್ಗಾ ಬೆಂಗಳೂರಿಗೆ ಬಂದಿದ್ದಳು. ಬೆಂಗಳೂರಿಗೆ ಬಂದರೂ ಅಕ್ಕ ಸಿಗಲಿಲ್ಲ. ಇದಕ್ಕೆ ಆಕೆ ದೇವರಿಗೆ ಶಾಪ ಹಾಕುತ್ತಿದ್ದಳು. ಈಗ ನೋಡಿದರೆ ಎಲ್ಲವೂ ಬದಲಾಗಿದೆ. ಗೆಜ್ಜೆ ಮೂಲಕ ಈ ವಿಷಯ ಗೊತ್ತಾಗಿದೆ.ಅಂಬಿಕಾ ಅನ್ನೋದು ಪ್ರಮುಖ ಪಾತ್ರ. ಆ ಪಾತ್ರವೇ ಯಾವ ಕಾರಣಕ್ಕೂ ಕೊನೆಯಾಗಲ್ಲ ಎಂಬುದು ಅನೇಕರ ನಂಬಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *