ಪ್ಯಾನ್ ಕಾರ್ಡ್ (Pan Card) ಭಾರತೀಯ ಆದಾಯ ತೆರಿಗೆ ಇಲಾಖೆ ನೀಡುವ ಪ್ರಮುಖ ದಾಖಲೆಯಾಗಿದೆ. ತೆರಿಗೆ ಪಾವತಿ ಮತ್ತು ಬ್ಯಾಂಕ್ ಖಾತೆ ತೆರೆಯಲು ಸೇರಿದಂತೆ ಪ್ರಮುಖ ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಬೇಕೇ ಬೇಕು. ಆದಾಯ ತೆರಿಗೆ ಇಲಾಖೆಯೂ ಇ-ಪ್ಯಾನ್ ಸೌಲಭ್ಯವನ್ನು ಒದಗಿಸುತ್ತಿದೆ. ಆಧಾರ್ ಕಾರ್ಡ್ ಇದ್ದರೆ ನೀವು ಮನೆಯಿಂದಲೇ ತ್ವರಿತವಾಗಿ ಇ-ಪ್ಯಾನ್‌ಗೆ ಅರ್ಜಿ ಸಲ್ಲಿಸಬಹುದು.
ಇ-ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮುನ್ನ ಈ ವಿಷ್ಯ ತಿಳಿದಿರಲಿ
- ನಿಮ್ಮ ಆಧಾರ್ ಸಂಖ್ಯೆ ಮಾನ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಿ.
- ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಆಗಿರಲೇ ಬೇಕು.
- ನಿಮ್ಮ ಹೆಸರಿನಲ್ಲಿ ಇಲ್ಲಿಯವರೆಗೆ ಪ್ಯಾನ್ ಕಾರ್ಡ್ ಇರಬಾರದು.
ಇ-ಪ್ಯಾನ್ ಕಾರ್ಡ್ ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಆ ಬಳಿಕ ಇ-ಪ್ಯಾನ್ ಆಯ್ಕೆಯನ್ನು ಆರಿಸಿ.
ಹಂತ 3: ಹೊಸ ಇ-ಪ್ಯಾನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 4: ಇಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
ಹಂತ 5: ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿ ಇಲ್ಲಿ ನಮೂದಿಸಿ.
ಹಂತ 6: ನಿಮ್ಮ ಆಧಾರ್ ವಿವರಗಳು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ. ಎಲ್ಲವೂ ಸರಿಯಾಗಿದ್ದರೆ, ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಹಂತ 7: ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಸ್ವೀಕೃತಿ ಸಂಖ್ಯೆಯನ್ನು ನೀಡಲಾಗುತ್ತದೆ.
ಹಂತ 8: ನಿಮ್ಮ ಅರ್ಜಿಯನ್ನು ಟ್ರ್ಯಾಕ್ ಮಾಡಲು ಸ್ವೀಕೃತಿ ಸಂಖ್ಯೆಯನ್ನು ಉಳಿಸಿ.
ಹಂತ 9: ಇ-ಪ್ಯಾನ್ ಜನರೇಟ್ ಆದ ಬಳಿಕ ಅದನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)
ಪ್ರಶ್ನೆ: ಇ-ಪ್ಯಾನ್ ಎಂದರೇನು?
ಉತ್ತರ: ಇ-ಪ್ಯಾನ್ ಕಾರ್ಡ್ ಪ್ಯಾನ್ ಕಾರ್ಡ್‌ನ ಡಿಜಿಟಲ್ ರೂಪವಾಗಿದೆ. ಇದು ಭೌತಿಕ ಕಾರ್ಡ್‌ನಷ್ಟೇ ಕಾನೂನು ಮಾನ್ಯತೆ ಹೊಂದಿದೆ.
ಪ್ರಶ್ನೆ: ಪ್ಯಾನ್ ಕಾರ್ಡ್ ಹೊಂದಿದ್ರೂ ಇ-ಪ್ಯಾನ್ ಕಾರ್ಡ್ ಪಡೆಯಬಹುದೇ?
ಉತ್ತರ: ಪ್ಯಾನ್ ಕಾರ್ಡ್ ಹೊಂದಿದ್ದರೆ ಇ-ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಾರದು.
ಪ್ರಶ್ನೆ: ಇ-ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ಉತ್ತರ: ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಇ-ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
