“ನಿಮ್ಮ ಸಂಸ್ಥೆಗಾಗಿ ನನ್ನ ರಕ್ತ ಸುರಿಸಿದ್ದೇನೆ”: ಕಾರಣವಿಲ್ಲದೆ ವಜಾ ಮಾಡಿದ ಕಂಪನಿಗೆ ಹಿಗ್ಗಾಮುಗ್ಗಾ ಜಾಡಿಸಿದ ಬೆಂಗಳೂರಿನ ಯುವಕ – Kannada News | Employee Loyalty vs Startup Greed: The Human Cost of Toxic Workplaces in India

ಬೆಂಗಳೂರು, ಫೆ.4: ಒಂದು ಕಂಪನಿಯಲ್ಲಿ ದುಡಿಯುವಾಗ ಹಲವು ಕನಸುಗಳನ್ನು ಇಟ್ಟುಕೊಂಡಿರುತ್ತೇವೆ. ಒಳ್ಳೆಯ ವಾತಾವರಣದಲ್ಲಿ ಕೆಲಸ ಮಾಡುವ ಖುಷಿಯೇ ಬೇರೆ ಇರುತ್ತದೆ. ಆದರೆ ಕಂಪನಿ ಸೇರಿದಾಗ ಇರುವ ಉತ್ಸಾಹ, ನಂತರ ದಿನಗಳಲ್ಲಿ ಆ ಹುಮ್ಮಸ್ಸು, ಕೆಲಸದ ನಿಷ್ಠೆ ಇರುವುದಿಲ್ಲ. ಯಾಕೆಂದರೆ ಕಂಪನಿಯಲ್ಲಿ ನಡೆಯುವ ರಾಜಕೀಯ, ತಾರತಮ್ಯಗಳು, ಇದರಿಂದ ಬೇಸತ್ತು. ಇದು ನಮ್ಮ ಕಂಪನಿ ಅಲ್ಲ ಎಂಬ ಮನಸ್ಥಿತಿಗೆ ಬಂದಿರುತ್ತೇವೆ. ಇದರ ಜತೆಗೆ ನಿಷ್ಠೆಯಿಂದ ಕೆಲಸ ಮಾಡವರಿಗೆ ಇಲ್ಲಿ ಬೆಲೆ ಇರಲ್ಲ. ಇದೀಗ ಇಲ್ಲೊಂದು ಹಂಚಿಕೊಂಡಿರುವ ಪೋಸ್ಟ್​​ ಇಂತಹದೇ ವಿಚಾರದ ಬಗ್ಗೆ ಹೇಳುತ್ತದೆ. ಬೆಂಗಳೂರಿನ ಯುವಕ ಜೀವನ ಎಂಬುವವರು ತಮ್ಮ ಕಂಪನಿಯಲ್ಲಿ ಅನುಭವಿಸಿದ ಕಹಿ ಘಟನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸ್ಟಾರ್ಟ್‌ಅಪ್ ಸಂಸ್ಕೃತಿಯ (Startup Culture) ಕರಾಳ ಮುಖವನ್ನು ಅನಾವರಣ ಮಾಡಿದ್ದಾರೆ. ಕೆಲಸದ ಮೇಲಿನ ನಿಷ್ಠೆ ಮತ್ತು ಮಾನವೀಯ ಮೌಲ್ಯಗಳ ನಡುವಿನ ಕಂದಕ ಹೇಗಿರುತ್ತದೆ ಎಂಬುದನ್ನು ಅವರು ಹೇಳಿದ್ದಾರೆ.

ಜೀವನ ಅವರನ್ನು ಕೆಲಸಕ್ಕೆ ಸೇರಿದ 3 ತಿಂಗಳ ಪ್ರೊಬೇಷನ್ ಅವಧಿ ಮುಗಿಯುವ ಕೆಲವೇ ದಿನಗಳ ಮೊದಲು ಕೆಲಸದಿಂದ ತೆಗೆದುಹಾಕಲಾಗಿದೆ. ನಮ್ಮ ತಂಡವನ್ನು ತೆಗೆದು ಹಾಕುವ ಪ್ಲಾನ್ 9 ರಿಂದ 10 ತಿಂಗಳುಗಳಿಂದ ನಡೆಯುತ್ತಿತ್ತು. ಈ ಬಗ್ಗೆ ನಮ್ಮ ಮುಖ್ಯಸ್ಥರೇ ಸ್ವತಃ ಹೇಳಿದರು. ನಮ್ಮ ಟಿಮ್​​ನ್ನು ತೆಗೆದು ಹಾಕುವ ಮೊದಲೇ ಹೊಸ ಕೆಲಸಗಾರರನ್ನು ನೇಮಕಾ ಮಾಡಿದ್ದಾರೆ. ಇದೊಂದು ನೈತಿಕ ದಿವಾಳಿತನ, ಮುಳುಗುತ್ತಿದ್ದ ಕಂಪನಿಗೆ ಮರುಜೀವ ನೀಡಿದ ಜನರನ್ನೇ ತೆಗೆದು ಹಾಕುವ ಸಾಹಸ ಮಾಡಿದ್ದಾರೆ. ಹಾಗಾದರೆ ಇಂಟರ್ವ್ಯೂ ಸಮಯದಲ್ಲಿ ನೀಡಿದ ಭರವಸೆಗಳು ಮತ್ತು ತೋರಿಸಿದ ದೃಷ್ಟಿಕೋನ ಕೇವಲ ಸುಳ್ಳೇ? 1.5 ತಿಂಗಳು ನೀಡಲಾದ ವೇತನ (Severance Pay) ವೃತ್ತಿಜೀವನದಲ್ಲಿ ಉಂಟಾಗುವ ಗ್ಯಾಪ್ ಮತ್ತು ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಬಲ್ಲದೇ? ಎಂಬ ಪ್ರಶ್ನೆಯನ್ನು ಜೀವನ ಈ ಪೋಸ್ಟ್​​ನಲ್ಲಿ ಕೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಈ ಊರಿನಲ್ಲಿ ನಡೆಯುತ್ತೇ ಅಪರೂಪದ ವಜ್ರಾಭರಣಗಳ ಜಾತ್ರೆ

ಇಲ್ಲಿದೆ ನೋಡಿ ಪೋಸ್ಟ್​:

ತಮ್ಮ ಕಂಪನಿಯ ಈ ನೀತಿಯನ್ನು ಬಳಸಿ ಬಿಸಾಡುವ ನೀತಿ ಎಂದು ಹೇಳಿದ್ದಾರೆ. ಕೆಲಸಗಾರರನ್ನು ಕೇವಲ ಬ್ಯಾಲೆನ್ಸ್ ಶೀಟ್‌ನಲ್ಲಿರುವ ಆಸ್ತಿಗಳಂತೆ ನೋಡುವ ಬದಲು ಮನುಷ್ಯರಂತೆ ನೋಡಿ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಾವು ಎಷ್ಟು ಬೇಗ ರಿಪ್ಲೇಸ್ ಆಗುತ್ತೇವೆ ಎಂದು ಯೋಚಿಸಿದರೆ ಭಯವಾಗುತ್ತದೆ ಎಂದು ಒಬ್ಬರು ಹೇಳಿದ್ದಾರೆ. ಇಂದು ಅವರು ನಿಮ್ಮ ಬೆಲೆ ತಿಳಿಯದೇ ಇರಬಹುದು, ಆದರೆ ಇದು ನಿಮಗೆ ದೊಡ್ಡ ಅವಕಾಶ ಎಂದು ಮತ್ತೊಬ್ಬರು ಹೇಳಿದ್ದಾರೆ. ನೀವು ನಿಮ್ಮ ಕೆಲಸದಿಂದ ಸೋತಿಲ್ಲ, ಅವರು ನಿಮ್ಮ ಉಳಿಸಿಕೊಳ್ಳುವಲ್ಲಿ ಸೋತಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *