ನಿರ್ದೇಶಕ ರೋಹಿತ್ ಶೆಟ್ಟಿ ಖಾಸಗಿ ಕಾರಿನ ಮೇಲೆ ಪೊಲೀಸ್ ಸ್ಟಿಕ್ಕರ್: ವಿವಾದಕ್ಕೆ ಸ್ಪಷ್ಟನೆ

ನಿರ್ದೇಶಕ ರೋಹಿತ್ ಶೆಟ್ಟಿ ಖಾಸಗಿ ಕಾರಿನ ಮೇಲೆ ಪೊಲೀಸ್ ಸ್ಟಿಕ್ಕರ್: ವಿವಾದಕ್ಕೆ ಸ್ಪಷ್ಟನೆ

ಆ್ಯಕ್ಷನ್ ಸಿನಿಮಾಗಳ ಮೂಲಕ ಫೇಮಸ್ ಆದ ಬಾಲಿವುಡ್‌ನ ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಅವರು ಇದೀಗ ಹೊಸ ವಿವಾದವೊಂದಕ್ಕೆ ಸಿಲುಕಿದ್ದಾರೆ. ತಮ್ಮ ಖಾಸಗಿ ಕಾರುಗಳಲ್ಲಿ ಪೊಲೀಸ್ ಸ್ಟಿಕ್ಕರ್ ಮತ್ತು ಲೈಟ್‌ಗಳನ್ನು ಬಳಸಿದ ಆರೋಪ ಅವರ ಮೇಲೆ ಕೇಳಿಬಂದಿದೆ. ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ರೋಹಿತ್ ಶೆಟ್ಟಿ ಅವರ ತಂಡವು ಸ್ಪಷ್ಟನೆಯನ್ನು ನೀಡಿದೆ. ಅಷ್ಟಕ್ಕೂ ರೋಹಿತ್ ಶೆಟ್ಟಿ ಅವರು ತಮ್ಮ ಸ್ವಂತ ಕಾರಿನ ಮೇಲೆ ಪೊಲೀಸ್ (Police) ಸ್ಟಿಕ್ಕರ್ ಮತ್ತು ಲೈಟ್ ಯಾಕೆ ಹಾಕಿದ್ದರು? ಅದಕ್ಕೆ ಉತ್ತರ ಸಿಕ್ಕಿದೆ.

ವರದಿಗಳ ಪ್ರಕಾರ, ರೋಹಿತ್ ಶೆಟ್ಟಿ ಅವರು ತಮ್ಮ ಎರಡು ವೈಯಕ್ತಿಕ ಐಷಾರಾಮಿ ಕಾರುಗಳಿಗೆ ಯಾವುದೇ ಮುನ್ಸೂಚನೆ ಅಥವಾ ಅನುಮತಿಯಿಲ್ಲದೆ ಪೊಲೀಸ್ ವಾಹನಗಳಲ್ಲಿ ಬಳಸುವಂತಹ ಸ್ಟಿಕ್ಕರ್ ಮತ್ತು ಲೈಟ್‌ಗಳನ್ನು ಅಳವಡಿಸಿದ್ದರು. ನಿಯಮದ ಪ್ರಕಾರ, ಪೊಲೀಸ್ ಇಲಾಖೆಯ ವಾಹನಗಳನ್ನು ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ವಾಹನಗಳಲ್ಲಿ ಇವುಗಳನ್ನು ಬಳಸುವುದು ಕಾನೂನುಬಾಹಿರ.

ವಿವಾದದ ಕುರಿತು ಪ್ರತಿಕ್ರಿಯಿಸಿರುವ ರೋಹಿತ್ ಶೆಟ್ಟಿ ಅವರ ವಕ್ತಾರರು, ‘ಇತ್ತೀಚೆಗೆ ನಿರ್ದೇಶಕರ ನಿವಾಸದ ಬಳಿ ಗುಂಡಿನ ದಾಳಿ ನಡೆದ ಘಟನೆಯ ನಂತರ, ಪೊಲೀಸರು ಅವರಿಗೆ ಬಿಗಿ ಭದ್ರತೆಯನ್ನು ಒದಗಿಸಿದ್ದರು. ಆ ಸಮಯದಲ್ಲಿ ಭದ್ರತಾ ದೃಷ್ಟಿಯಿಂದ ಮತ್ತು ವಾಹನಗಳ ಗುರುತಿಗಾಗಿ ಆರಂಭಿಕ ಹಂತದಲ್ಲಿ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಈಗ ಅವುಗಳನ್ನು ತೆಗೆಯಲಾಗಿದೆ’ ಎಂದು ತಿಳಿಸಿದ್ದಾರೆ.

‘ಈಗಲೂ ರೋಹಿತ್ ಶೆಟ್ಟಿ ಅವರಿಗೆ ಇಬ್ಬರು ಪೊಲೀಸ್ ಸಿಬ್ಬಂದಿಯ ಭದ್ರತೆ ಮುಂದುವರಿದಿದೆ. ಇಡೀ ಪ್ರಕರಣವು ಇನ್ನೂ ತನಿಖೆಯ ಹಂತದಲ್ಲಿದೆ. ಸಂಕಷ್ಟದ ಸಮಯದಲ್ಲಿ ಸತತವಾಗಿ ಸಹಕಾರ ನೀಡುತ್ತಿರುವ ಮುಂಬೈ ಪೊಲೀಸರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಅವರ ತಂಡದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: ರೋಹಿತ್ ಶೆಟ್ಟಿ ಮನೆಮೇಲಿನ ದಾಳಿಗೆ ನಾಲ್ಕು ತಿಂಗಳ ಹಿಂದೆಯೇ ನಡೆದಿತ್ತು ಪ್ಲ್ಯಾನ್

ಜನವರಿ 31ರ ರಾತ್ರಿ ರೋಹಿತ್ ಶೆಟ್ಟಿ ಅವರ ನಿವಾಸದ ಮೇಲೆ 4 ಸುತ್ತು ಗುಂಡು ಹಾರಿಸಲಾಗಿತ್ತು. ಕಿಡಿಗೇಡಿಗಳು ನಡೆಸಿದ ಈ ಕೃತ್ಯದಿಂದ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಆತಂಕ ಹೆಚ್ಚಾಯಿತು. ದಾಳಿಗೆ ಕಾರಣ ಏನು ಎಂದು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಗುಂಡಿನ ದಾಳಿ ಬಳಿಕ ರೋಹಿತ್ ಶೆಟ್ಟಿ ಅವರಿಗೆ ಪೊಲೀಸರು ಭದ್ರತೆ ಒದಗಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *