‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ – Kannada News | Ayogya 2 movie actor Sathish Ninasam gives clarification about his controversial statement

‘ಅಯೋಗ್ಯ 2’ ಸಿನಿಮಾದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ನಟ ಸತೀಶ್ ನೀನಾಸಂ (Sathish Ninasam) ಅವರು ಮಾತನಾಡುವಾಗ ‘ನಿರ್ಮಾಪಕರು ಎಜುಕೇಟೆಡ್ ಆಗಿರಬೇಕು’ ಎಂದು ಹೇಳಿದ್ದು ವಿವಾದಕ್ಕೆ ಕಾರಣ ಆಗಿದೆ. ಈ ಬಗ್ಗೆ ಸಭೆ ನಡೆಸಲಾಗಿದ್ದು, ಸತೀಶ್ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ‘ನಾನು ಎಜುಕೇಷನ್ ಎಂಬ ಪದ ಬಳಸಿದ್ದಕ್ಕೆ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಹೇಳಿದ ಎಜುಕೇಷನ್ ಎಂದರೆ ಸಿನಿಮಾದ ಜ್ಞಾನ. ನಾನು ಓದಿದ್ದು ಎಸ್​ಎಸ್​ಎಲ್​ಸಿ ಮಾತ್ರ. ನಮ್ಮ ತಾಯಿ ಓದಿಯೇ ಇಲ್ಲ. ಹಾಗಾಗಿ ಆ ರೀತಿ ಯಾರನ್ನೂ ಹೀಯಾಳಿಸುವಂತಹ ಮನಸ್ಥಿತಿ ನನಗೆ ಇಲ್ಲ. ನಾನು ಬಂದಿದ್ದು ಯಾವುದೋ ಕುಗ್ರಾಮದಿಂದ. 200-300 ರೂಪಾಯಿಗೆ ಸೀರಿಯಲ್ ಮಾಡಿಕೊಂಡು ಬಂದವನು. ಈ ನಿರ್ಮಾಪಕರೆಲ್ಲ ಚಿತ್ರರಂಗವನ್ನು ಕಟ್ಟಿದವರು. ಒಬ್ಬ ನಿರ್ಮಾಪಕರು ಚಿತ್ರರಂಗಕ್ಕೆ ಬರುವಾಗ ಸಿನಿಮಾದ ಜ್ಞಾನ ಬಹಳ ಮುಖ್ಯ ಆಗುತ್ತದೆ. ಆ ಬಗ್ಗೆ ನಾನು ಹೇಳಿದ್ದು ಅಷ್ಟೇ. ನಾನು ಕೂಡ ನಿರ್ಮಾಪಕನಾಗಿ 4 ಸಿನಿಮಾ ನಿರ್ಮಾಣ ಮಾಡಿದ್ದೇನೆ’ ಎಂದು ಸತೀಶ್ ನಿನಾಸಂ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *