ನೀರಿಗಿಂತ ಬಿಯರ್​​ಗೆ ಫುಲ್ ಡಿಮ್ಯಾಂಡ್: ಬಿಸಿಲು ಏರಿದಂತೆ ಬಿಯರ್ ಮಾರಾಟದಲ್ಲೂ ಹೆಚ್ಚಳ

ನೀರಿಗಿಂತ ಬಿಯರ್​​ಗೆ ಫುಲ್ ಡಿಮ್ಯಾಂಡ್: ಬಿಸಿಲು ಏರಿದಂತೆ ಬಿಯರ್ ಮಾರಾಟದಲ್ಲೂ ಹೆಚ್ಚಳ

ಚಿಕ್ಕಬಳ್ಳಾಪುರ, (ಏಪ್ರಿಲ್ 08):  ಸೆಪ್ಟೆಂಬರ್ 2025ರವರೆಗೆ ಕರ್ನಾಟಕದಲ್ಲಿ ಒಟ್ಟು 195.27 ಲಕ್ಷ ಬಾಕ್ಸ್ ಬಿಯರ್ (Beer) ಮಾರಾಟವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗಿಂತ 47.46 ಲಕ್ಷ ಬಾಕ್ಸ್ ಕಡಿಮೆಯಾಗಿದ್ದು ಶೇ. 19.55ರಷ್ಟು ಕುಸಿತ ಕಂಡಿದೆ. ಮಳೆ, ಚಳಿಯಿಂದಾಗಿ ರಾಜ್ಯದಲ್ಲಿ ಬಿಯರ್ ಮಾರಾಟ ಗಣನೀಯ ಕುಸಿತ ಕಂಡಿತ್ತು. ಇದನ್ನು ಸ್ವತಃ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದ್ದರು. ಆದ್ರೆ, ಇದೀಗ ಬೇಸಿಗೆಯ ಬಿಸಿಲು ಏರುತ್ತಿದ್ದಂತೆಯೇ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿ ಬಿಯರ್​ಗೆ ಬೇಡಿಕೆ ಹೆಚ್ಚಾಗಿದೆ. ಹೌದು… ಬಿಸಿಲಿನ ತಾಪಮಾನದಿಂದ ಬಚಾವ್ ಆಗಲು, ಮದ್ಯ ಪ್ರಿಯರು ಹಾಟ್ ಡ್ರಿಂಕ್ಸ್ ಬದಲು ಬಿಯರ್ ಮೊರೆ ಹೋಗಿದ್ದಾರೆ.

ಬೇಸಿಗೆಯಲ್ಲಿ ದೇಹ ತಂಪಾಗಿರುತ್ತೆ ಎಂದು ಮದ್ಯಪ್ರಿಯರು ಬಿಯರ್​​ ನತ್ತ ಮುಖ ಮಾಡಿದ್ದರಿಂದ  ಮಾರಾಟದಲ್ಲಿ ಹೆಚ್ಚಳವಾಗಿದೆ. ಆದ್ರೆ ಬಾರ್ ಗಳಲ್ಲಿ ಬಿಯರ್ ಸ್ಟಾರ್ ಇಲ್ಲ.  ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ಕಳೆದ ಪೆಬ್ರುವರಿಯಿಂದ ಮಾರ್ಚ ತಿಂಗಳಿಗೆ ಹೊಲಿಸಿದ್ರೆ. ಬಿಯರ್ ಬೇಡಿಕೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಬೇಸಿಗೆಯ ಬಿಸಿಲು ಹೇಗೆ ಏರಿಕೆಯಾಗುತ್ತಿದೆಯೂ ಪ್ರತಿ ತಿಂಗಳು ಬಿಯರ್ ಮಾರಾಟದಲ್ಲೂ ಹೆಚ್ಚಳವಾಗಿದೆ.

ಇದನ್ನೂ ಓದಿ: ಒಂದು ದಿನಕ್ಕೆ ನೀವು ಎಷ್ಟು ಪ್ರಮಾಣದ ಬಿಯರ್​​ ಕುಡಿಯಬಹುದು ಗೊತ್ತಾ? ಇಲ್ಲಿದೆ ಮಾಹಿತಿ 

ಬಿಸಿಲು ಏರಿದಂತೆ ಬಿಯರ್ ಮಾರಾಟದಲ್ಲಿ ಏರಿಕೆ

ಚಿಕ್ಕಬಳ್ಳಾಪುರದಲ್ಲಿ ಜನವರಿಯಿಂದ ಮಾರ್ಚ್ ವರೆಗೂ ಎಷ್ಟು ಬಿಯರ್ ಮಾರಾಟವಾಗಿದೆ ಎನ್ನುವುದನ್ನು ನೋಡುವುದಾದರೆ, ಜನವರಿಯಲ್ಲಿ 50,272 ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ ಪೆಬ್ರವರಿಯಲ್ಲಿ 63,372 ಬಾಕ್ಸ್. ಇನ್ನು ಮಾರ್ಚ್ ತಿಂಗಳಲ್ಲಿ 88,523 ಬಾಕ್ಸ್ ಬಿಯರ್ ಮಾರಾಟವಾಗಿದೆ. ಈ ಅಂಕಿ ಸಂಖ್ಯೆ ನೋಡುತ್ತಿದ್ದರೆ ಬೇಸಿಗೆಯ ಬಿಸಿಲು ಏರಿಕೆಯಾಗುತ್ತಿದ್ದಂತೆಯೇ ಪ್ರತಿ ತಿಂಗಳು ಬಿಯರ್ ಮಾರಾಟದಲ್ಲೂ ಸಹ ಏರಿಕೆಯಾಗಿದೆ. ಆದ್ರೆ, ಬಾರ್​ ಗಳಲ್ಲಿ ಬಿಯರ್ ಬೇಡಿಕೆ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಬಾರ್​​ಗಳಿಗೆ ಸರಿಯಾಗಿ ಬಿಯರ್ ಸಪ್ಲೈ ಆಗುತ್ತಿಲ್ಲ.

ಬಡ್ ವೈಸರ್ ಬಿಯರ್ ನಿಂದ ಹಿಡಿದು ಕೆಎಫ್, ಟೂಬರ್ಗ, ಆರ್.ಸಿ, ಬೂಲೆಟ್, ಸನಿಬೀಚ್ ಸೇರಿದಂತೆ ವಿವಿಧ ಬ್ರ್ಯಾಂಡ್ ಗಳ ಬಿಯರ್ ಗಳನ್ನು ಕೇಳುತ್ತಿದ್ದಾರೆ. ಈ ಸಂಬಂಧ ಬಾರ್ ಮಾಲೀಕರು ಸಹ ಹೆಚ್ಚು ಬಿಯರ್ ಕೊಡಿ ಎಂದು ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೂ ಸಹ ಕೇಳಿದಷ್ಟು ಬಿಯರ್ ಸರಬರಾಜು ಮಾಡುತ್ತಿಲ್ಲ ಎನ್ನುವುದು ಬಾರ್ ಮಾಲೀಕರ ಅಳಲು. ಇನ್ನು ಬಾರ್ ನಲ್ಲಿ ಬಿಯರ್ ಸ್ಟಾಕ್ ಇಲ್ಲದಿದ್ದಾಗ ಗ್ರಾಹಕರನ್ನು ಸಮಾಧಾನಪಡಿಸುವುದೇ ಒಂದು ಚಾಲೆಂಜ್ ಆಗಿದೆ ಎಂದು ಬಾರ್ ಮಾಲೀಕರು ಹೇಳುತ್ತಿದ್ದಾರೆ. ಒಟ್ನಲ್ಲಿ ಬೇಸಿಗೆ ಬಿಸಿಯಿಂದ ಆಚೆ ಬರಲು ಮದ್ಯ ಪ್ರಿಯರು, ಕೂಲ್ ಕೂಲ್ ಬಿಯರ್ ಗಳ ಮೊರೆ ಹೋಗಿದ್ದು, ಬಿಯರ್ ಗೆ ಭಾರಿ ಬೇಡಿಕೆ ಬಂದಿದೆ. ಆದ್ರೆ ಅಬಕಾರಿ ಇಲಾಖೆಯಿಂದ ಬೇಡಿಕೆಗೆ ತಕ್ಕಂತೆ ಬಿಯರ್ ಸರಬರಾಜು ಮಾಡಲು ಆಗುತ್ತಿಲ್ಲ. ಇದರಿಂದ ಬಾರ್ ಮಾಲೀಕರು ಸಹ ಬಿಯರ್ ಗಾಗಿ ಪರದಾಡುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *