ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿರುವ ರಣವೀರ್ ಸಿಂಗ್ (Ranveer Singh) ಹಾಗೂ ಆದಿತ್ಯ ಧರ್ ಕಾಂಬಿನೇಷನ್‌ನ ಸೂಪರ್ ಹಿಟ್ ಆ್ಯಕ್ಷನ್ ಸ್ಲೈ ಥ್ರಿಲ್ಲರ್ ‘ಧುರಂಧರ್: ದಿ ರಿವೆಂಜ್’ (Dhurandhar 2) ಇದೀಗ ಒಟಿಟಿ ಪ್ರೇಕ್ಷಕರನ್ನು ಮತ್ತೊಮ್ಮೆ ರಂಜಿಸಲು ಸಜ್ಜಾಗಿದೆ. ಜೂನ್ 19ರಿಂದ ಈ ಚಿತ್ರದ ಬಹುನಿರೀಕ್ಷಿತ ‘ಅನ್‌ಕಟ್ ಇಂಟರ್ನ್ಯಾಷನಲ್ ವರ್ಷನ್’ (Uncut International Version) ನೆಟ್‌ಫ್ಲಿಕ್ಸ್ ಒಟಿಟಿ ಮೂಲಕ ಪ್ರಸಾರ ಆಗಲಿದೆ.
ಕೆಲವೇ ವಾರಗಳ ಹಿಂದೆಯಷ್ಟೇ (ಜೂನ್ 4) ಈ ಸಿನಿಮಾ ‘ಜಿಯೋಹಾಟ್‌ಸ್ಟಾರ್’ ಮೂಲಕ ಡಿಜಿಟಲ್ ಪ್ರೀಮಿಯರ್ ಆಗಿತ್ತು. ಆದರೆ ಆ ಸಮಯದಲ್ಲಿ ಲೈವ್ ಬ್ರಾಡ್‌ಕಾಸ್ಟ್ ಫಾರ್ಮ್ಯಾಟ್ ಮತ್ತು ಕಳಪೆ ವಿಡಿಯೋ-ಆಡಿಯೋ ಕ್ವಾಲಿಟಿಯಿಂದಾಗಿ ನೆಟ್ಟಿಗರು ತೀವ್ರ ಅಸಮಾಧಾನ ಹೊರಹಾಕಿದ್ದರು. ಆದರೆ ಈಗ ನೆಟ್‌ಫ್ಲಿಕ್ಸ್ ಮೂಲಕ ಯಾವುದೇ ಕಟ್‌ಗಳಿಲ್ಲದ, ಸಂಪೂರ್ಣ ಅನ್‌ಸೆನ್ಸಾರ್ಡ್ ವರ್ಷನ್ ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಗುತ್ತಿದೆ.
ಒಟಿಟಿಯಲ್ಲಿ ಈ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿರಲಿದೆ. ಚಿತ್ರಮಂದಿರಗಳಲ್ಲಿ ಹಾಗೂ ಜಿಯೋಹಾಟ್‌ಸ್ಟಾರ್‌ನ ‘ರಾ ಆ್ಯಂಡ್ ಅನ್ದೇಖಾ’ ವರ್ಷನ್‌ನಲ್ಲಿ ಸೆನ್ಸಾರ್ ಆಗಿದ್ದ ಹಲವು ರೋಚಕ ಸನ್ನಿವೇಶಗಳು ಈಗ ನೆಟ್‌ಫ್ಲಿಕ್ಸ್ ಇಂಟರ್ನ್ಯಾಷನಲ್ ಕಟ್‌ನಲ್ಲಿ ಮರಳಿ ಬರಲಿವೆ. ಆದ್ದರಿಂದ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಚಿತ್ರಮಂದಿರಗಳಲ್ಲಿ ಮ್ಯೂಟ್ ಮಾಡಲಾಗಿದ್ದ ಪದಗಳನ್ನು ಈ ವರ್ಷನ್‌ನಲ್ಲಿ ಯಾವುದೇ ಸೆನ್ಸಾರ್ ಇಲ್ಲದೆ ಹಾಗೇ ಉಳಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ವರ್ಷನ್‌ನಲ್ಲಿ ಆ್ಯಕ್ಷನ್ ಸೀನ್‌ಗಳು ಹೆಚ್ಚು ಕ್ರೂರವಾಗಿರಲಿವೆ. ಸುತ್ತಿಗೆ ಫೈಟ್ ಹಾಗೂ ಕ್ಲೈಮ್ಯಾಕ್ಸ್‌ನ ಸಿಮೆಂಟ್ ಬ್ಲಾಕ್ ಫೈಟ್ ಸೀನ್‌ಗಳು ಥಿಯೇಟರ್‌ಗಿಂತಲೂ ಹೆಚ್ಚು ದೀರ್ಘವಾಗಿರಲಿವೆ. ಈ ರೀತಿಯ ಹಲವು ಅಚ್ಚರಿಗಳು ಪ್ರೇಕ್ಷಕರಿಗೆ ಸಿಗಲಿವೆ.
ಇದನ್ನೂ ಓದಿ: ‘ಪ್ರಧಾನಿ ಕಚೇರಿಯವರು ಹೀಗೆಲ್ಲ ಬರೆಯಲು ಸಾಧ್ಯವೇ’; ‘ಧುರಂಧರ್ 2’ ನಟನ ನೇರ ಪ್ರಶ್ನೆ
ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಮ್ಪಾಲ್, ಆರ್. ಮಾಧವನ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ 1,000 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
