ಪುಣೆ, ಜೂನ್ 30: ಲೋಹಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಹತ್ಯೆ (Ketan Agarwal Case) ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ (Siya Goyal) ಪರವಾಗಿ ನ್ಯಾಯಾಲಯದಲ್ಲಿ ಯಾರು ವಾದ ಮಂಡಿಸಲಿದ್ದಾರೆ ಎಂಬ ಪ್ರಶ್ನೆ ಈಗ ತೀವ್ರ ಕಾನೂನು ಹೋರಾಟಕ್ಕೆ ಕಾರಣವಾಗಿದೆ. ಈ ಗೊಂದಲದ ನಡುವೆಯೇ, ಪುಣೆ ಮೂಲದ ವಕೀಲ ಅಶುತೋಷ್ ಶ್ರೀವಾಸ್ತವ ಅವರು ಸಿಯಾ ಗೋಯಲ್ ಸಹೋದರ ಸಾಹಿಲ್ ಗೋಯಲ್‌ಗೆ 10 ಕೋಟಿ ರೂ.ಗಳ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.
ವಡಗಾಂವ್ ಮಾವಳ್ ನ್ಯಾಯಾಲಯದಲ್ಲಿ ಸಿಯಾ ಗೋಯಲ್ ಅವರ ರಿಮಾಂಡ್ ವಿಚಾರಣೆ ನಡೆಯುತ್ತಿದ್ದಾಗ ಸಾರ್ವಜನಿಕವಾಗಿ ಈ ವಿವಾದ ಭುಗಿಲೆದ್ದಿತು. ವಕೀಲ ಅಶುತೋಷ್ ಶ್ರೀವಾಸ್ತವ ಅವರು ನ್ಯಾಯಾಲಯಕ್ಕೆ ಹಾಜರಾಗಿ, ಸಿಯಾ ತಮಗೆ ಸಹಿ ಮಾಡಿದ ‘ವಕಾಲತ್ನಾಮಾ’ (ಅಧಿಕಾರ ಪತ್ರ) ನೀಡಿದ್ದಾರೆ ಎಂದು ವಾದಿಸಲು ಮುಂದಾದರು. ಆದರೆ, ಮ್ಯಾಜಿಸ್ಟ್ರೇಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಪಿ ಸಿಯಾ ಗೋಯಲ್, “ಅಶುತೋಷ್ ಶ್ರೀವಾಸ್ತವ ನನ್ನ ವಕೀಲರಲ್ಲ. ವಿಪುಲ್ ದುಶಿಂಗ್ ನನ್ನನ್ನು ಪ್ರತಿನಿಧಿಸುತ್ತಿದ್ದಾರೆ” ಎಂದು ನೇರವಾಗಿ ಹೇಳಿದರು.
ಇದನ್ನೂ ಓದಿ: ವಿಗ್ ಧರಿಸಿದ್ದರಿಂದಲೇ ಕೇತನ್ನನ್ನು ಕೊಂದಳಾ ಸಿಯಾ?; ಮಹಾರಾಷ್ಟ್ರ ಸಿಎಂ ಭೇಟಿ ಬಳಿಕ ತಂದೆಯ ಶಾಕಿಂಗ್ ಹೇಳಿಕೆ
ಇದರಿಂದ ನ್ಯಾಯಾಲಯದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೊನೆಗೆ, ಸಿಯಾ ಹೇಳಿಕೆಯ ನಂತರ ಅಶುತೋಷ್ ಶ್ರೀವಾಸ್ತವ ಅವರು ವಾದ ಮುಂದುವರಿಸಲಾಗದೆ ನ್ಯಾಯಾಲಯದಿಂದ ಹೊರನಡೆದರು. ಸಿಯಾ ಕುಟುಂಬದವರು ತಾವು ವಿಪುಲ್ ದುಶಿಂಗ್ ಅವರನ್ನು ಮಾತ್ರ ನೇಮಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದರಿಂದ ಮುಜುಗರಕ್ಕೀಡಾದ ವಕೀಲ ಅಶುತೋಷ್ ಶ್ರೀವಾಸ್ತವ ಸಿಯಾ ಕುಟುಂಬಸ್ಥರು ತಮ್ಮ ವೃತ್ತಿಪರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಸಿಯಾಳ ಸಹೋದರ ಸಾಹಿಲ್ ಗೋಯಲ್‌ಗೆ 10 ಪುಟಗಳ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ.
VIDEO | Pune: Siya Goyal’s lawyer, Ashotush Srivastava, slaps Rs 10 crore defamation notice on her brother in Ketan Agarwal murder case.
He says, “We have sent a Rs 10 crore defamation notice to Sahil Goyal. We did this because we heard a statement from him where he is stating… pic.twitter.com/guACw4Twma
— Press Trust of India (@PTI_News) June 30, 2026
ಶ್ರೀವಾಸ್ತವ ಅವರ ವಾದವೇನು?:
ಸಿಯಾ ಗೋಯಲ್ ವಯಸ್ಕಳಾಗಿದ್ದು, ಸ್ವಇಚ್ಛೆಯಿಂದ ತಮಗೆ ವಕಾಲತ್ನಾಮಾಗೆ ಸಹಿ ಹಾಕಿಕೊಟ್ಟಿದ್ದಾರೆ. ಕುಟುಂಬದ ಅನುಮತಿ ಇಲ್ಲದೆಯೂ ಆಕೆಗೆ ವಕೀಲರನ್ನು ನೇಮಿಸಿಕೊಳ್ಳುವ ಹಕ್ಕಿದೆ ಎಂದು ಅಶುತೋಷ್ ಅವರ ವಾದ. ಹೀಗಾಗಿ, ಸಾಹಿಲ್ ಗೋಯಲ್ ಮಾಧ್ಯಮಗಳಿಗೆ ನೀಡಿದ ಹೇಳಿಕೆಯನ್ನು 48 ಗಂಟೆಗಳಲ್ಲಿ ಹಿಂಪಡೆದು ಬೇಷರತ್ ಕ್ಷಮೆಯಾಚಿಸಬೇಕು ಮತ್ತು 7 ದಿನಗಳಲ್ಲಿ 10 ಕೋಟಿ ರೂ. ಪರಿಹಾರ ನೀಡಬೇಕು ಎಂದು ಅವರು ನೋಟಿಸ್ ನೀಡಿದ್ದಾರೆ.
Pune, Maharashtra: On allegations made by Siya’s brother and a legal notice sent to him, Accused Siya Goyal’s advocate Ashutosh Srivastava says, “The basis for this is the reputational damage caused. In the estimation of our office and our people, this is the minimum level of… pic.twitter.com/ZcWG7ipRsz
— IANS (@ians_india) June 30, 2026
ಸಾಹಿಲ್ ಗೋಯಲ್ ಹೇಳಿದ್ದೇನು?:
ಗೋಯಲ್ ಕುಟುಂಬವು ಅಶುತೋಷ್ ಶ್ರೀವಾಸ್ತವ ಅವರ ಕಾನೂನು ಸೇವೆಯನ್ನು ಪಡೆದಿಲ್ಲ ಎಂದು ಸಾಹಿಲ್ ಗೋಯಲ್ ಮಾಧ್ಯಮಗಳ ಸಂದರ್ಶನವೊಂದರಲ್ಲಿ ಹೇಳಿದ್ದರು. ಅಷ್ಟೇ ಅಲ್ಲದೆ, ವಕೀಲ ಅಶುತೋಷ್ ಶ್ರೀವಾಸ್ತವ ಅವರು ಸಿಯಾ ಗೋಯಲ್ ಕೈಯಿಂದ ಕೆಲವು ಕಾನೂನು ಪತ್ರಗಳಿಗೆ ವಂಚನೆಯಿಂದ ಸಹಿ ಪಡೆದಿರಬಹುದು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ವಕೀಲ ಶ್ರೀವಾಸ್ತವ ಅವರು ಸಾಹಿಲ್‌ಗೆ ಕಾನೂನು ನೋಟಿಸ್ ಕಳುಹಿಸಿದ್ದು, ತಮ್ಮ ತಂಡವು ಸ್ವಇಚ್ಛೆಯಿಂದ ಸಿಯಾ ಗೋಯಲ್ ಅವರನ್ನು ಭೇಟಿ ಮಾಡಿತ್ತು. ತಮ್ಮನ್ನು ವಕೀಲರನ್ನಾಗಿ ನೇಮಿಸಿಕೊಳ್ಳಲು ಆಕೆಯ ಒಪ್ಪಿಗೆ ಪಡೆದಿತ್ತು ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಕೇತನ್ ಅಗರ್ವಾಲ್ ಕೊಲೆ ಪ್ರಕರಣ; ಸಿಯಾ ಗೋಯಲ್, ಚೇತನ್ ಜುಲೈ 3ರವರೆಗೆ ಪೊಲೀಸ್ ವಶಕ್ಕೆ
ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ:
ಕೇತನ್ ಅಗರ್ವಾಲ್ ಪುಣೆಯ ಉದ್ಯಮಿ. ಜೂನ್ 18ರಂದು ಪುಣೆಯ ಲೋಹಗಢ ಕೋಟೆಗೆ ಟ್ರೆಕಿಂಗ್ ಹೋಗಿದ್ದ ಕೇತನ್ ಅಗರ್ವಾಲ್ ತಾನು ಮದುವೆಯಾಗಬೇಕಿದ್ದ ಹುಡುಗಿ ಸಿಯಾಳಿಂದ ಬರ್ಬವಾಗಿ ಹತ್ಯೆಗೀಡಾಗಿದ್ದರು. ಕೇತನ್ನನ್ನು ತನ್ನ ಪ್ರೇಮಿ ಚೇತನ್ ಸಹಾಯದಿಂದ 350 ಅಡಿ ಆಳದ ಪ್ರಪಾತಕ್ಕೆ ತಳ್ಳಿದ ಸಿಯಾ ಗೋಯಲ್ ಬಳಿಕ ಆತ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದಾಗಿ ಕತೆ ಕಟ್ಟಿದ್ದಳು.
केतन अग्रवाल हत्याकांड | लोनावला, महाराष्ट्र:
आरोपी सिया के भाई साहिल ने कहा, “हमने उन्हें (एडवोकेट आशुतोष श्रीवास्तव) कभी नियुक्त नहीं किया है और न ही उन्हें हमारे परिवार की ओर से रखा गया है। वह जो भी दावा कर रहे हैं, उसके बारे में मुझे कोई जानकारी नहीं है।”Siya Goyal | Sahil… pic.twitter.com/ZaFoPD3MZy
— The Black Paper (@TheBlackPaper30) June 29, 2026
ಪೊಲೀಸರು ಇಬ್ಬರು ಆರೋಪಿಗಳ ಕಸ್ಟಡಿಯನ್ನು ಇನ್ನೂ 5 ದಿನಗಳ ಕಾಲ ವಿಸ್ತರಿಸಿದ್ದು, ಕ್ರೈಮ್ ಸೀನ್ ಮರುಸೃಷ್ಟಿ ಮಾಡಬೇಕಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಸಿಯಾ, ಕೇತನ್ ಅವರ ಪಾಸ್‌ಪೋರ್ಟ್ ಅನ್ನು ಹರಿದು ಸುಟ್ಟುಹಾಕಿದ್ದಾರೆ ಎನ್ನಲಾಗಿದ್ದು, ಅದರ ಅವಶೇಷಗಳ ಪತ್ತೆಗೆ ತನಿಖೆ ಮುಂದುವರಿದಿದೆ. ಈ ಹೈಪ್ರೊಫೈಲ್ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಲು ಪ್ರಸಿದ್ಧ ವಕೀಲ ಉಜ್ವಲ್ ನಿಕಮ್ ಅವರನ್ನು ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ನೇಮಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
