‘ಪತ್ನಿ ಜೊತೆ ಬಂದು ಸ್ಪಷ್ಟನೆ ಕೊಡಬೇಕು, ಸಂಬಂಧ ಇಟ್ಟುಕೊಂಡವರ ಜೊತೆಯಲ್ಲ’ – Kannada News | Thalapathy Vijay, Trisha Spotted: Divorce Rumors Amidst Wife’s Affair Allegations

ದಳಪತಿ ವಿಜಯ್ (Vijay) ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ನಟಿಯೊಬ್ಬರ ಜೊತೆ ಅವರಿಗೆ ಅಕ್ರಮ ಸಂಬಂಧ ಇದೆ ಎಂದು ಪತ್ನಿ ಕಡೆಯಿಂದಲೇ ಆರೋಪ ಬಂದಿತ್ತು. ಈ ವಿಷಯವಾಗಿ ದಳಪತಿ ವಿಜಯ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬೆನ್ನಲ್ಲೇ ದಳಪತಿ ವಿಜಯ್ ಅವರು ಒಂದು ದೊಡ್ಡ ಬಾಂಬ್ ಹಾಕಿದ್ದಾರೆ. ತ್ರಿಷಾ ಜೊತೆ ಅವರು ವಿವಾಹ ಸಮಾರಂಭಕ್ಕೆ ಹಾಜರಿ ಹಾಕಿದ್ದರು. ಇದನ್ನು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ವಿಜಯ್ ಎಲ್ಲರಿಗೂ ಉತ್ತರ ಕೊಟ್ಟು ಎಂದು ಹೇಳುತ್ತಿದ್ದಾರೆ. ಇದಕ್ಕೆ ಕೆಲವರು ಉತ್ತರಿಸಿದ್ದು, ‘ಪತ್ನಿ ಜೊತೆ ಬಂದು ಸ್ಪಷ್ಟನೆ ಕೊಡಬೇಕು, ಸಂಬಂಧ ಇಟ್ಟುಕೊಂಡವರ ಜೊತೆಯಲ್ಲ’ ಎಂದು ಹೇಳಿದ್ದಾರೆ.

ವಿಜಯ್ ಅವರು ತಮ್ಮ ಕೊನೆಯ ಸಿನಿಮಾ ‘ಜನ ನಾಯಗನ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ವಿಳಂಬ ಆಗುತ್ತಿದೆ. ಸೆನ್ಸಾರ್ ತೊಡಕು ಚಿತ್ರಕ್ಕೆ ಉಂಟಾಗಿದೆ. ಈ ಬೆಳವಣಿಗೆ ಮಧ್ಯೆ ವಿಜಯ್ ಅವರಿಗೆ ಸಮಸ್ಯೆ ತಂದಿದ್ದು ಅವರ ಪತ್ನಿ ಸಂಗೀತಾ ಸಲ್ಲಿಕೆ ಮಾಡಿರೋ ಡಿವೋರ್ಸ್ ಅರ್ಜಿ. ಪತಿಗೆ ನಟಿ ಜೊತೆ ಅಕ್ರಮ ಸಂಬಂಧ ಇದೆ ಎಂದು ಸಂಗೀತಾ ಆರೋಪಿಸಿದ್ದಾರೆ.

ದಳಪತಿ ವಿಜಯ್ ಹಾಗೂ ತ್ರಿಷಾ ಮಧ್ಯೆ ಏನೋ ನಡೆಯುತ್ತಿದೆ ಎಂಬ ಚರ್ಚೆ ಮೊದಲಿನಿಂದಲೂ ದೆ. ಇಬ್ಬರೂ ಒಟ್ಟಿಗೆ ಇದ್ದರು ಎಂಬುದಕ್ಕೆ ಪೂರಕವಾದ ಸಾಕ್ಷಿಗಳನ್ನು ಕೆಲವರು ತಂದಿದ್ದಾರೆ. ಆದರೆ, ವಿಜಯ್ ಆಗಲಿ, ತ್ರಿಷಾ ಆಗಲಿ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಹೀಗಿರುವಾಗಲೇ ಚೆನ್ನೈನಲ್ಲಿ ಗುರುವಾರ (ಮಾರ್ಚ್ 5) ಸಂಜೆ ನಡೆದ ಎಸ್‌. ಕಲ್ಪತಿ ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ವಿಜಯ್ ಹಾಗೂ ತ್ರಿಷಾ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅವರು ಒಂದೇ ಕಾರಲ್ಲಿ ಬಂದರು ಎನ್ನಲಾಗುತ್ತಿದೆ.

ಈ ವಿಡಿಯೋ ಟ್ವೀಟ್ ಮಾಡಿದ್ದ ಅಭಿಮಾನಿ, ‘ವಿಜಯ್ ಅವರು ತಮ್ಮ ಸ್ಟೈಲ್ ಅಲ್ಲಿ ಎಲ್ಲರಿಗೂ ಉತ್ತರ ನೀಡಿದ್ದಾರೆ. ಎಲ್ಲಾ ವದಂತಿಗೆ ತೆರೆ ಎಳೆದಿದ್ದಾರೆ. ಅವರಿಗೆ ಧೈರ್ಯ ಇದೆ’ ಎಂದು ಮೋಹನ್ ಕ್ಷತ್ರೀಯಾ ಎಂಬುವವರು ಟ್ವೀಟ್ ಮಾಡಿದ್ದರು. ಇದಕ್ಕೆ ವ್ಯಕ್ತಿಯೋರ್ವ ಉತ್ತರಿಸಿದ್ದಾನೆ.

ಇದನ್ನೂ ಓದಿ:  ದಳಪತಿ ವಿಜಯ್ ವಿಚ್ಛೇದನಕ್ಕೆ ದೊಡ್ಡ ಟ್ವಿಸ್ಟ್: ತ್ರಿಷಾ ಜತೆ ಮದುವೆಗೆ ಹಾಜರಿ

‘ನೀವು ಬೇರೊಬ್ಬರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದೀರಿ ಎಂದು ಯಾರಾದರೂ ಆರೋಪಿಸಿದಾಗ, ನೀವು ನಿಮ್ಮ ಹೆಂಡತಿಯೊಂದಿಗೆ ಸಮಾರಂಭಗಳಿಗೆ ಕಾಣಿಸಿಕೊಳ್ಳುವ ಮೂಲಕ ವದಂತಿಗಳಿಗೆ ತೆರೆ ಎಳೆಯಬೇಕೆ ಹೊರತೂ, ನೀವು ಸಂಬಂಧ ಹೊಂದಿದ್ದೀರಿ ಎಂದು ಆರೋಪಿಸುವ ಮಹಿಳೆಯೊಂದಿಗೆ ಬಂದು ಅಲ್ಲ’ ಎಂದು ಉತ್ತರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *