ಪರಮಾಣು ಶಕ್ತಿಯಲ್ಲೂ ಭಾರತ ಸ್ವಾವಲಂಬಿಯಾಗಲಿದೆ; ಪ್ರಧಾನಿ ಮೋದಿ ಭರವಸೆ – Kannada News | Noted India moving towards greater self reliance in nuclear power PM Modi says in Independence Day Speech

ನವದೆಹಲಿ, ಆಗಸ್ಟ್ 15: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi Independence Day Speech) ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಹಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು. ಹೆಚ್ಚಿನ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ಅಣುಶಕ್ತಿ, ಕಡಲಾಚೆಯ ತೈಲ ಅನ್ವೇಷಣೆ, ಪರ್ಯಾಯ ಇಂಧನಗಳು ಮತ್ತು ನಿರ್ಣಾಯಕ ಖನಿಜಗಳನ್ನು ಪ್ರಮುಖ ಸ್ತಂಭಗಳನ್ನಾಗಿ ಹೊಂದಿರುವ ವಿಸ್ತೃತ ಮಾರ್ಗಸೂಚಿಯನ್ನು ಅವರು ಅನಾವರಣಗೊಳಿಸಿದರು.

ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಅಗತ್ಯವನ್ನು ಎತ್ತಿಹಿಡಿದ ಪ್ರಧಾನಿಯವರು, ಭಾರತವು ಅಣುಶಕ್ತಿಯಲ್ಲಿ ಹೆಚ್ಚಿನ ಸ್ವಾವಲಂಬನೆಯತ್ತ ಸಾಗುತ್ತಿದೆ ಮತ್ತು ದೇಶದ ಇಂಧನ ಭದ್ರತೆಯನ್ನು ಬಲಪಡಿಸಲು ತಮ್ಮ ಸರ್ಕಾರವು ಸರಣಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಉಲ್ಲೇಖಿಸಿದರು.

“ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಪ್ರಮುಖ ಮಾರ್ಗವೆಂದರೆ ಅಣುಶಕ್ತಿ. 2047ರ ವೇಳೆಗೆ ನಾವು 100 ಗಿಗಾವ್ಯಾಟ್ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದಲಿದ್ದೇವೆ. ಈ ಗುರಿಯತ್ತ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಇದೇ ದಶಕದಲ್ಲಿ, ನಾವು 5 ಹೊಸ ಅಣು ರಿಯಾಕ್ಟರ್‌ಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದ್ದೇವೆ. ಅವುಗಳನ್ನು ಕಾರ್ಯಗತಗೊಳಿಸಲು ನಾವು ಗುರಿಯನ್ನು ನಿಗದಿಪಡಿಸಿದ್ದೇವೆ” ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *