ಪಾಕಿಸ್ತಾನಕ್ಕೆ ಮುಖಭಂಗ: IPL ಆಡ್ತೀವಿ ಎಂದ ಆಸ್ಟ್ರೇಲಿಯಾ ಆಟಗಾರರು! – Kannada News | Australia players not to leave IPL 2026 for Pakistan ODIs

ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳಿಗಿಂತ ಐಪಿಎಲ್ ಎಷ್ಟು ಶಕ್ತಿಶಾಲಿ ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಪಾಕಿಸ್ತಾನದ ವಿರುದ್ಧದ ಏಕದಿನ ಸರಣಿಯನ್ನು ಆಡಲು ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ನಿರಾಕರಿಸಿದ್ದು, ಐಪಿಎಲ್ 2026ರ ಪ್ಲೇ-ಆಫ್ ಪಂದ್ಯಗಳಲ್ಲೇ ಮುಂದುವರಿಯಲು ನಿರ್ಧರಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ನೆಲದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಟ್ರಾವಿಸ್ ಹೆಡ್ ಅವರಂತಹ ದಿಗ್ಗಜರನ್ನು ಎದುರಿಸಲು ಕಾತರದಿಂದ ಕಾಯುತ್ತಿತ್ತು. ಆದರೆ, ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಆಟಗಾರರಿಗೆ ಐಪಿಎಲ್ ಒಪ್ಪಂದ ಪೂರ್ಣಗೊಳಿಸಲು ಹಸಿರು ನಿಶಾನೆ ತೋರಿದ್ದರಿಂದ, ಪಾಕಿಸ್ತಾನ ಈಗ ಎರಡನೇ ದರ್ಜೆಯ ಆಸ್ಟ್ರೇಲಿಯಾ ತಂಡಕ್ಕೆ ಆತಿಥ್ಯ ವಹಿಸುವ ಅನಿವಾರ್ಯತೆಗೆ ಸಿಲುಕಿದೆ. ವಿಶ್ವ ಕ್ರಿಕೆಟ್‌ನ ದೊಡ್ಡ ತಂಡವೊಂದು ತನ್ನ ಸರಣಿಗಿಂತ ಐಪಿಎಲ್‌ಗೆ ಹೆಚ್ಚು ಒತ್ತು ನೀಡಿದ್ದು ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗ ಉಂಟುಮಾಡಿದೆ.

ಸರಣಿ ಮತ್ತು ಐಪಿಎಲ್ ನಡುವಿನ ಸಂಘರ್ಷ:

ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಮೇ 30ರಿಂದ ಜೂನ್ 4ರವರೆಗೆ ನಡೆಯಲಿದೆ. ಇದೇ ಸಮಯದಲ್ಲಿ ಐಪಿಎಲ್‌ನ ಅಂತಿಮ ಹಂತದ ಪಂದ್ಯಗಳು (ಪ್ಲೇ-ಆಫ್ ಮತ್ತು ಫೈನಲ್) ನಡೆಯಲಿರುವುದರಿಂದ ಆಟಗಾರರ ಲಭ್ಯತೆಯ ಬಗ್ಗೆ ಗೊಂದಲವಿತ್ತು. ಆದರೆ, ಈಗ ಕ್ರಿಕೆಟ್ ಆಸ್ಟ್ರೇಲಿಯಾ (CA) ತನ್ನ ಆಟಗಾರರಿಗೆ ಐಪಿಎಲ್ ಒಪ್ಪಂದವನ್ನು ಪೂರ್ಣಗೊಳಿಸಲು ಅನುಮತಿ ನೀಡಿದೆ.

ಯಾರು ಉಳಿಯಲಿದ್ದಾರೆ? ಯಾರು ಹೋಗಲಿದ್ದಾರೆ?

  • ಸನ್‌ರೈಸರ್ಸ್ ಹೈದರಾಬಾದ್ (SRH): ಪ್ಯಾಟ್ ಕಮಿನ್ಸ್ (ನಾಯಕ) ಟ್ರಾವಿಸ್ ಹೆಡ್
  • ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಜೋಶ್ ಹೇಝಲ್ವುಡ್, ಟಿಮ್ ಡೇವಿಡ್
  • ಕೊಲ್ಕತ್ತಾ ನೈಟ್ ರೈಡರ್ಸ್ (KKR): ಕ್ಯಾಮರೋನ್ ಗ್ರೀನ್
  • ಡೆಲ್ಲಿ ಕ್ಯಾಪಿಟಲ್ಸ್ (DC): ಮಿಚೆಲ್ ಸ್ಟಾರ್ಕ್​​.
  • ಲಕ್ನೋ ಸೂಪರ್ ಜೈಂಟ್ಸ್ (LSG): ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್.
  • ಪಂಜಾಬ್ ಕಿಂಗ್ಸ್ (PBKS): ಮಾರ್ಕಸ್ ಸ್ಟೊಯಿನಿಸ್, ಕೂಪರ್ ಕೊನೊಲಿ,  ಕ್ಸೇವಿಯರ್ ಬಾರ್ಟ್ಲೆಟ್.
  • ಚೆನ್ನೈ ಸೂಪರ್ ಕಿಂಗ್ಸ್ (CSK): ಮ್ಯಾಥ್ಯೂ ಶಾರ್ಟ್, ಸ್ಪೆನ್ಸರ್ ಜಾನ್ಸನ್.

ಇದನ್ನೂ ಓದಿ: ದಾಖಲೆ ಮೊತ್ತದ ಒಪ್ಪಂದ: ಪ್ಯಾಟ್ ಕಮ್ಮಿನ್ಸ್‌ಗೆ 27.43 ಕೋಟಿ ರೂ. ಆಫರ್!

  •  ಪಾಕಿಸ್ತಾನಕ್ಕೆ ತೆರಳುವವರು: ಈ ಬಾರಿಯ ಐಪಿಎಲ್​ನಲ್ಲಿ ಕಾಣಿಸಿಕೊಳ್ಳದ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ. ಅದರಂತೆ ಆ್ಯಡಂ ಝಂಪಾ, ಅಲೆಕ್ಸ್ ಕ್ಯಾರಿ ಮತ್ತು ಮಾರ್ನಸ್ ಲಾಬುಶೇನ್ ಸೇರಿದಂತೆ ಕೆಲ ಸ್ಟಾರ್ ಆಟಗಾರರು ಮಾತ್ರ ಪಾಕಿಸ್ತಾನ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಯುವ ಪಡೆಗೆ ಅವಕಾಶ:

ಪ್ರಮುಖ ಆಟಗಾರರು ಐಪಿಎಲ್‌ನಲ್ಲಿ ಕಾರ್ಯನಿರತರಾಗಿರುವುದರಿಂದ, ಪಾಕಿಸ್ತಾನ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ‘ದ್ವಿತೀಯ ದರ್ಜೆ’ಯ ಅಥವಾ ಯುವ ಪಡೆಯನ್ನು ಕಳುಹಿಸಿಕೊಡಲು ನಿರ್ಧರಿಸಿದೆ. ಇದು ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಯುವ ಆಟಗಾರರ ಸಾಮರ್ಥ್ಯ ಪರೀಕ್ಷಿಸಲು ಆಸ್ಟ್ರೇಲಿಯಾ ಮಂಡಳಿಗೆ ಒಂದು ಉತ್ತಮ ವೇದಿಕೆಯಾಗಲಿದೆ.

ಫ್ರಾಂಚೈಸಿಗಳಿಗೆ ನೆಮ್ಮದಿ:

ಟೂರ್ನಿಯ ಅತ್ಯಂತ ಪ್ರಮುಖ ಪಂದ್ಯಗಳ ವೇಳೆ ತಮ್ಮ ಪ್ರಮುಖ ವಿದೇಶಿ ಆಟಗಾರರು ಲಭ್ಯವಿರುತ್ತಾರೆ ಎಂಬ ಸುದ್ದಿ ಐಪಿಎಲ್ ಫ್ರಾಂಚೈಸಿಗಳಿಗೆ ದೊಡ್ಡ ಸಮಾಧಾನ ತಂದಿದೆ. ವಿಶೇಷವಾಗಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್‌ನಂತಹ ತಂಡಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಬೆಂಬಲದಿಂದ ಆನೆ ಬಲ ಬಂದಂತಾಗಿದೆ.

Published On – 12:43 pm, Thu, 7 May 26

Source link

Leave a Reply

Your email address will not be published. Required fields are marked *