ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ಆದೇಶಿಸಿದ್ದರಾ ಇಸ್ರೇಲ್ ಪ್ರಧಾನಿ ನೆತನ್ಯಾಹು? – Kannada News | Benjamin netanyahu ordered mossad to kill pak army chief asim munir in switzerland brazilian journalist claims

ಟೆಲ್ ಅವಿವ್, ಜೂನ್ 24: ಅಂತಾರಾಷ್ಟ್ರೀಯ ರಾಜತಾಂತ್ರಿಕ ಮತ್ತು ಗುಪ್ತಚರ ವಲಯದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಸ್ಫೋಟಕ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಸ್ವಿಟ್ಜರ್ಲೆಂಡ್‌ ಪ್ರವಾಸದಲ್ಲಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ (Asim Munir) ಅವರನ್ನು ಹತ್ಯೆ ಮಾಡಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ದೇಶದ ರಹಸ್ಯ ಗುಪ್ತಚರ ಸಂಸ್ಥೆಯಾದ ‘ಮೊಸಾದ್’ಗೆ ಆದೇಶ ನೀಡಿದ್ದರು ಎಂದು ಬ್ರೆಜಿಲ್‌ನ ಖ್ಯಾತ ಪತ್ರಕರ್ತರೊಬ್ಬರು ಆರೋಪ ಮಾಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ನಿಧನದ ಸುತ್ತಲಿನ ಬೆಳವಣಿಗೆಗಳ ಬೆನ್ನಲ್ಲೇ ಈ ವರದಿ ಹೊರಬಿದ್ದಿರುವುದು ಭಾರಿ ಕುತೂಹಲ ಮೂಡಿಸಿದೆ. ವರದಿಗಳ ಪ್ರಕಾರ, ಬ್ರೆಜಿಲ್‌ನ ತನಿಖಾ ಪತ್ರಕರ್ತರೊಬ್ಬರು ಜಾಗತಿಕ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಈ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎಂದು ‘ಮನಿ ಕಂಟ್ರೋಲ್’ ವರದಿ ಮಾಡಿದೆ.

ಇದನ್ನೂ ಓದಿ: Video: ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು, ಲೆಬನಾನ್ ಮೇಲಿನ ಇಸ್ರೇಲ್ ದಾಳಿಗೆ ಇರಾನ್ ಖಂಡನೆ

ಸ್ವಿಟ್ಜರ್ಲೆಂಡ್‌ನಲ್ಲಿ ಹತ್ಯೆಗೆ ಸಂಚು:

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅಧಿಕೃತ ಭೇಟಿಯ ನಿಮಿತ್ತ ಸ್ವಿಟ್ಜರ್ಲೆಂಡ್‌ನಲ್ಲಿದ್ದಾಗ ಅವರನ್ನು ಗುರಿಯಾಗಿಸಿ ಹತ್ಯೆ ಮಾಡಲು ಮೊಸಾದ್‌ನ ಹಿಟ್‌ ಸ್ಕ್ವಾಡ್‌ಗೆ ನೆತನ್ಯಾಹು ಸೂಚನೆ ನೀಡಿದ್ದರು ಎನ್ನಲಾಗಿದೆ. ಇಸ್ರೇಲ್ ಮತ್ತು ಹಮಾಸ್-ಹೆಜ್ಬೊಲ್ಲಾ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದ ಮಿಲಿಟರಿ ನಾಯಕತ್ವವು ಇರಾನ್ ಮತ್ತು ಇತರ ಇಸ್ಲಾಮಿಕ್ ದೇಶಗಳಿಗೆ ರಹಸ್ಯವಾಗಿ ಶಸ್ತ್ರಾಸ್ತ್ರ ಅಥವಾ ತಾಂತ್ರಿಕ ಬೆಂಬಲ ನೀಡಲು ಮುಂದಾಗಿತ್ತು ಎಂಬ ಹಿನ್ನೆಲೆಯಲ್ಲಿ ಇಸ್ರೇಲ್ ಈ ಕಠಿಣ ನಿರ್ಧಾರಕ್ಕೆ ಮುಂದಾಗಿತ್ತು ಎಂದು ಬ್ರೆಜಿಲ್ ಪತ್ರಕರ್ತ ಹೇಳಿದ್ದಾರೆ.

ಕೊನೆ ಕ್ಷಣದಲ್ಲಿ ಆಗಿದ್ದೇನು?:

ಬ್ರೆಜಿಲಿಯನ್ ಪತ್ರಕರ್ತನ ವರದಿಯ ಪ್ರಕಾರ, ಮೊಸಾದ್ ಬಹಳ ಜಾಣತನದಿಂದಲೇ ಈ ಹತ್ಯಾ ಕಾರ್ಯಾಚರಣೆಯನ್ನು ಯೋಜಿಸಿತ್ತು. ಆದರೆ, ಸ್ವಿಟ್ಜರ್ಲೆಂಡ್‌ನ ಸ್ಥಳೀಯ ಭದ್ರತಾ ಏಜೆನ್ಸಿಗಳು ಅಥವಾ ಇತರ ಮಿತ್ರ ರಾಷ್ಟ್ರಗಳ ಗುಪ್ತಚರ ಇಲಾಖೆಗಳಿಗೆ ಈ ವಿಷಯ ಮುಂಚಿತವಾಗಿಯೇ ತಿಳಿದುಬಂದ ಹಿನ್ನೆಲೆಯಲ್ಲಿ, ರಾಜತಾಂತ್ರಿಕ ಬಿಕ್ಕಟ್ಟನ್ನು ತಪ್ಪಿಸಲು ಕೊನೆಯ ಕ್ಷಣದಲ್ಲಿ ಈ ಕಾರ್ಯಾಚರಣೆಯನ್ನು ಕೈಬಿಡಲಾಯಿತು ಅಥವಾ ಮುಂದೂಡಲಾಯಿತು ಎಂದು ಹೇಳಲಾಗಿದೆ.

ಇದನ್ನೂ ಓದಿ: ಲೆಬನಾನ್ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ಮತ್ತೆ ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್

ಅಧಿಕೃತ ಪ್ರತಿಕ್ರಿಯೆಗಳಿಲ್ಲ:

ಈ ಆಘಾತಕಾರಿ ಆರೋಪದ ಕುರಿತು ಇಸ್ರೇಲ್ ಸರ್ಕಾರದ ಪ್ರಧಾನಿ ಕಚೇರಿಯಾಗಲಿ ಅಥವಾ ಮೊಸಾದ್ ಆಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಸಾಮಾನ್ಯವಾಗಿ ಮೊಸಾದ್ ತನ್ನ ರಹಸ್ಯ ಕಾರ್ಯಾಚರಣೆಗಳ ಬಗ್ಗೆ ಎಂದಿಗೂ ಬಹಿರಂಗವಾಗಿ ಪ್ರತಿಕ್ರಿಯಿಸುವುದಿಲ್ಲ. ಇತ್ತ ಪಾಕಿಸ್ತಾನದ ಸೇನೆಯಾಗಲಿ ಅಥವಾ ಅಲ್ಲಿನ ವಿದೇಶಾಂಗ ಸಚಿವಾಲಯವಾಗಲಿ ಈ ವರದಿಯನ್ನು ಅಧಿಕೃತವಾಗಿ ದೃಢೀಕರಿಸಿಲ್ಲ ಅಥವಾ ನಿರಾಕರಿಸಿಯೂ ಇಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *