ಜಾಂಬಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಲೆಜೆಂಡ್ಸ್ ಲೀಗ್‌ನಲ್ಲಿ ( Asian Legends League) ಇಂದು ಇಂಡಿಯನ್ ರಾಯಲ್ಸ್ ತಂಡ ಪಾಕಿಸ್ತಾನ್ ಪ್ಯಾಂಥರ್ಸ್ (Indian Royals vs Pakistan Panthers) ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ್ ಪ್ಯಾಂಥರ್ಸ್ ತಂಡವನ್ನು 2 ವಿಕೆಟ್ಗಳಿಂದ ಮಣಿಸಿದ ಇಂಡಿಯನ್ ರಾಯಲ್ಸ್ ತಂಡ ಲೀಗ್‌ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 168 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಡಿಯನ್ ರಾಯಲ್ಸ್ 17.4 ಓವರ್ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವು ದಾಖಲಿಸಿತು.
167 ರನ್ ಕಲೆಹಾಕಿದ ಪಾಕ್
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಕ್ಕಿತು. ಆದಾಗ್ಯೂ ಯಾಸಿರ್ ಬಟ್ 18 ರನ್‌ಗಳಿಸಿ ಔಟಾದರು. ನಂತರ ಇಮ್ರಾನ್ ನಜೀರ್ ಮತ್ತು ಇಬ್ರಾರ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇಮ್ರಾನ್ 47 (29) ರನ್‌ಗಳಿಗೆ ಔಟಾದರೂ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಯಾಸಿರ್ ಬಟ್ 6 (12) ಗೆ ಔಟಾದರು. ಕೊನೆಯಲ್ಲಿ, ಭಾರತೀಯ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿ ಪಾಕಿಸ್ತಾನವನ್ನು 167 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಸುಲಭವಾಗಿ ಗೆದ್ದ ಭಾರತ
168 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಕಳಪೆ ಆರಂಭ ಸಿಕ್ಕಿತು. ನಮನ್ ಓಜಾ 4 (4) ರನ್‌ಗಳಿಗೆ ಔಟಾದರು. ಅಭಿಷೇಕ್ ಕೂಡ ಬೇಗನೇ ಔಟಾದರು. ಆ ನಂತರ ಬಂದ ಮೊಹಮ್ಮದ್ ಇರ್ಫಾನ್ ಕೂಡ ಹೆಚ್ಚಿನದನ್ನು ಮಾಡಲಿಲ್ಲ. ಹೀಗಾಗಿ ಭಾರತ ನಾಲ್ಕು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು, ಆದರೆ ರಿಷಿ ಧವನ್ ಮತ್ತು ಸರುಲ್ ತಂಡದ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಆದಾಗ್ಯೂ, ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಔಟಾದ ನಂತರ, ಭಾರತವು ನಾಲ್ಕು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಆದಾಗ್ಯೂ, ಕೊನೆಯ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಹೊಡೆತಗಳನ್ನು ಆಡಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಇದರ ಪರಿಣಾಮವಾಗಿ ಭಾರತ ಇನ್ನೂ 14 ಎಸೆತಗಳು ಬಾಕಿ ಇರುವಾಗ ಪಂದ್ಯವನ್ನು ಗೆದ್ದುಕೊಂಡಿತು.
ತಂಡದ ಪರ ರಿಷಿ ಧವನ್ 32 ಎಸೆತಗಳಲ್ಲಿ 50 ರನ್ ಗಳಿಸಿದರೆ, 29 ಎಸೆತಗಳಲ್ಲಿ 46 ರನ್ ಗಳಿಸಿ ಸರುಲ್ ಔಟಾದರು. ಈ ಇಬ್ಬರು ಆಟಗಾರರ ಔಟಾದ ನಂತರ ಭಾರತ ತಂಡ ಗೆಲುವಿಗಾಗಿ ಸಾಕಷ್ಟು ಕಷ್ಟಪಡಬೇಕಾಯಿತ್ತಾದರೂ ಕೊನೆಯಲ್ಲಿ ಗೆಲುವು ಸಾಧಿಸಿತು. ಈ ಪಂದ್ಯಾವಳಿಯಲ್ಲಿ ಇದು ಇಂಡಿಯನ್ ರಾಯಲ್ಸ್ ತಂಡದ ಎರಡನೇ ಗೆಲುವು. ಇದಕ್ಕೂ ಮೊದಲು ಭಾರತ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಟೈಗರ್ಸ್ ತಂಡವನ್ನು 19 ರನ್‌ಗಳಿಂದ ಸೋಲಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 9:03 pm, Sun, 2 August 26
