ಪಿಸಿ ಶೇಖರ್ ಜೊತೆ ಕೈ ಜೋಡಿಸಿದ ‘ಲ್ಯಾಂಡ್‌ಲಾರ್ಡ್’ ನಿರ್ಮಾಕರ ಕೆವಿ ಸತ್ಯಪ್ರಕಾಶ್

ಪಿಸಿ ಶೇಖರ್ ಜೊತೆ ಕೈ ಜೋಡಿಸಿದ ‘ಲ್ಯಾಂಡ್‌ಲಾರ್ಡ್’ ನಿರ್ಮಾಕರ ಕೆವಿ ಸತ್ಯಪ್ರಕಾಶ್

ಯುಗಾದಿ ಎಂದರೆ ಹೊಸ ವರ್ಷ. ಆ ಪ್ರಯುಕ್ತ ಚಿತ್ರರಂಗದಲ್ಲಿ (Kannada Film Industry) ಕೂಡ ಹೊಸ ಉತ್ಸಾಹ ಮೂಡುತ್ತಿದೆ. ಹೊಸ ವರ್ಷಕ್ಕೆ ಅನೇಕ ಹೊಸ ಸಿನಿಮಾಗಳ ಅನೌನ್ಸ್‌ ಆಗುತ್ತಿವೆ. ಯುಗಾದಿ ಸಂಭ್ರಮದಲ್ಲಿ ನಿರ್ದೇಶಕ ಪಿಸಿ ಶೇಖರ್‌ (PC Shekar) ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ‘ರಾಗ’, ‘ರೊಮಿಯೋ’ ಮುಂತಾದ ಸಿನಿಮಾಗಳನ್ನು ಮಾಡಿರುವ ನಿರ್ದೇಶಕ ಪಿಸಿ ಶೇಖರ್ ಈಗ ತಮ್ಮ ಹೊಸ ಸಿನಿಮಾಗೆ ನಿರ್ದೇಶನ ಮಾಡಲು ತಯಾರಾಗಿದ್ದಾರೆ. ಈ ಬಾರಿ ಪಿಸಿ ಶೇಖರ್ ಜೊತೆ ‘ಸಾರಥಿ’, ‘ಲ್ಯಾಂಡ್‌ಲಾರ್ಡ್’ ಖ್ಯಾತಿಯ ನಿರ್ಮಾಪಕ ಕೆವಿ ಸತ್ಯಪ್ರಕಾಶ್ (KV Sathyaprakash) ಅವರು ಕೈ ಜೋಡಿಸಿದ್ದಾರೆ.

ಪಿಸಿ ಶೇಖರ್ ಮತ್ತು ಕೆವಿ ಸತ್ಯಪ್ರಕಾಶ್ ಅವರು ಒಂದಾಗುತ್ತಿರುವುದು ಕುತೂಹಲ ಮೂಡಿಸಿದೆ. ಈಗಾಗಲೇ ಈ ಚಿತ್ರಕ್ಕೆ ಎಲ್ಲ ತಯಾರಿ ಮುಗಿದಿದೆ. ಇನ್ನೇನು ಸಿನಿಮಾ ಸೆಟ್ಟೇರುವುಷ್ಟೇ ಬಾಕಿ ಇದೆ. ಸದ್ಯ ‘ಮಹಾನ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಇರುವ ಪಿಸಿ ಶೇಖರ್ ಅವರು ಆ ಸಿನಿಮಾದ ಬಿಡುಗಡೆಗೂ ಮೊದಲೇ ಮತ್ತೊಂದು ಸಿನಿಮಾಗೆ ಸಜ್ಜಾಗಿದ್ದಾರೆ.

ಈ ಚಿತ್ರವು ದೊಡ್ಡ ಮಟ್ಟದಲ್ಲಿ ತಯಾರಾಗಲಿದೆ ಎಂದು ನಿರ್ದೇಶಕ ಪಿಸಿ ಶೇಖರ್ ಹೇಳಿದ್ದಾರೆ. ‘ಸಾರಥಿ, ಲ್ಯಾಂಡ್‌ಲಾರ್ಡ್ ರೀತಿಯ ದೊಡ್ಡ ಸಿನಿಮಾಗಳನ್ನು ಮಾಡಿರುವ ನಿರ್ಮಾಪಕರು ನನಗೆ ಅವಕಾಶ ಕೊಟ್ಟಿದ್ದು ಬಹಳ ಖುಷಿಯಾಗುತ್ತಿದೆ. ಸದ್ಯದಲ್ಲೇ ಸಿನಿಮಾದ ಟೈಟಲ್ ಮತ್ತು ಪಾತ್ರವರ್ಗದ ಬಗ್ಗೆ ಮಾಹಿತಿ ನೀಡುತ್ತೇವೆ’ ಎಂದು ಪಿಸಿ ಶೇಖರ್ ಅವರು ಹೇಳಿದ್ದಾರೆ.

ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಹಾಗೂ ನಿರ್ದೇಶಕ ಪಿಸಿ ಶೇಖರ್ ಅವರ ಗೆಳೆಯ ನಟ-ನಿರ್ಮಾಪಕ ಮಿತ್ರ ಅವರು ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪಿಸಿ ಶೇಖರ್ ನಿರ್ದೇಶನ ಮಾಡಿದ್ದ ‘ರಾಗ’ ಸಿನಿಮಾದಲ್ಲಿ ಮಿತ್ರ ಅವರು ಹೀರೋ ಆಗಿ ಕಾಣಿಸಿಕೊಂಡಿದ್ದರು. ಆದರೆ ಈ ಹೊಸ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಕ್ಯಾಮರಾ ಹಿಂದೆ ಕೆಲಸ ಮಾಡುತ್ತಿರುವುದು ವಿಶೇಷ.

ಇದನ್ನೂ ಓದಿ: ಭಾರತೀಯ ಚಿತ್ರರಂಗದ ಭವಿಷ್ಯ ಬದಲಿಸಲಿದೆ ಧುರಂಧರ್ 2: ರಣವೀರ್ ಸಿಂಗ್

‘ರಾಗ’ ಸಿನಿಮಾದಲ್ಲಿ ನಟ ಮಿತ್ರ ಮತ್ತು ಪಿಸಿ ಶೇಖರ್ ಅವರ ಕಾಂಬಿನೇಷನ್ ತುಂಬ ಚೆನ್ನಾಗಿ ವರ್ಕೌಟ್ ಆಗಿತ್ತು. ಹಾಗಾಗಿ ಇದೀಗ ಮತ್ತೆ ಒಟ್ಟಿಗೆ ಸೇರಿರುವುದರಿಂದ ಈ ಸಿನಿಮಾದ ಮೇಲೆ ನಿರೀಕ್ಷೆ ಮೂಡಿದೆ. ಸದ್ಯದಲ್ಲೇ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ ಸಿನಿಮಾ ತಂಡ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *