‘ಪುಷ್ಪ 2’ ದಾಖಲೆ ಮುರಿದ ‘ರಾಮಾಯಣ’? ಕೋಟಿ ಕೋಟಿಗೆ ಮಾರಾಟವಾಯ್ತು ಮ್ಯೂಸಿಕ್ ಹಕ್ಕು – Kannada News | Ranbir Kapoor Ramayana Breaks Pushpa 2 Record With Massive Rs 75 Crore Music Deal

ವಿಶ್ವ ಮಟ್ಟದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿರುವ ‘ರಾಮಾಯಣ’ ಸಿನಿಮಾ (Ramayana Movie) ಈಗ ಹೊಸ ಇತಿಹಾಸ ಬರೆಯಲು ರೆಡಿ ಆಗಿದೆ. ಬಿಡುಗಡೆಗೂ ಮುನ್ನವೇ ಈ ಚಿತ್ರ ಒಳ್ಳೆಯ ಬಿಸ್ನೆಸ್ ಮಾಡುತ್ತಿದೆ. ಟಿ-ಸೀರೀಸ್ ಸಂಸ್ಥೆಯು ಭಾರಿ ಮೊತ್ತಕ್ಕೆ ಈ ಚಿತ್ರದ ಆಡಿಯೋ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಮ್ಯೂಸಿಕ್ ಡೀಲ್ ಕುದುರಿಸಿದ ಹೆಗ್ಗಳಿಕೆಗೆ ಈ ಸಿನಿಮಾ ಪಾತ್ರವಾಗಿದೆ.

75 ಕೋಟಿ ರೂಪಾಯಿಗೆ ಆಡಿಯೋ ಹಕ್ಕು ಮಾರಾಟ

ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಚಿತ್ರದ ಮ್ಯೂಸಿಕ್ ರೈಟ್ಸ್ ಬರೋಬ್ಬರಿ 75 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂದು ವರದಿಯಾಗಿದೆ. ಸಿನಿಮಾ ವಲಯದಲ್ಲಿ ಈ ಸುದ್ದಿ ದೊಡ್ಡ ಸಂಚಲನ ಮೂಡಿಸಿದೆ. ಇದು ನಿಜವೇ ಆದಲ್ಲಿ ಭಾರತೀಯ ಸಿನಿಮಾ ರಂಗದಲ್ಲಿ ಇದು ಹೊಸ ಮೈಲಿಗಲ್ಲು ಸೃಷ್ಟಿಸಲಿದೆ. ಈ ಡೀಲ್ ಮೂಲಕ ಸಿನಿಮಾ ತನ್ನ ಗತ್ತನ್ನು ಪ್ರದರ್ಶಿಸಿದೆ.

‘ಪುಷ್ಪ 2’ ದಾಖಲೆ ಧೂಳೀಪಟ ಮಾಡಿದ ರಾಮ

ಇಲ್ಲಿಯವರೆಗೆ ಅತಿ ಹೆಚ್ಚು ಮೊತ್ತಕ್ಕೆ ಆಡಿಯೋ ಹಕ್ಕು ಮಾರಾಟವಾದ ದಾಖಲೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಹೆಸರಿನಲ್ಲಿತ್ತು. ‘ಪುಷ್ಪ 2’ ಚಿತ್ರದ ಮ್ಯೂಸಿಕ್ ರೈಟ್ಸ್ ಸುಮಾರು 65 ಕೋಟಿ ರೂಪಾಯಿಗೆ ಸೇಲ್ ಆಗಿತ್ತು. ಈಗ ‘ರಾಮಾಯಣ’ ಸಿನಿಮಾ ಆ ದಾಖಲೆಯನ್ನು ಸುಲಭವಾಗಿ ಮೀರಿ ನಿಂತಿದೆ. ಆ ಮೂಲಕ ‘ಪುಷ್ಪ’ ಚಿತ್ರದ ದಾಖಲೆ ಧೂಳೀಪಟವಾಗಿದೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ: ನಮಿತ್ ಮಲ್ಹೋತ್ರಾ ಅಧಿಕೃತ ಘೋಷಣೆ

ಯಶ್ ನಟನೆಯ ಚಿತ್ರದ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಈ ಬಿಗ್ ಬಜೆಟ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಇಲ್ಲಿ ರಾವಣನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜುಲೈ 30 ರಂದು ‘ರಾಮಾಯಣ ಭಾಗ 1’ ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *