Headlines

ಪ್ರಜ್ವಲ್ ರೇವಣ್ಣ ಸೆಲ್​​​​​​​ನಲ್ಲಿ ಸಿಕ್ಕ ಮೊಬೈಲ್, ಪೆನ್​​​​ಡ್ರೈವ್​​​​​ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ – Kannada News | Obscene videos Found In Mobile And Pen drive at Jail: Prajwal revanna Shifted to Prison cell From VIP

ಬೆಂಗಳೂರು, ಆಗಸ್ಟ್ 12): ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ (parappana agrahara central Jail) ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna)  ಬಳಿ ಮೊಬೈಲ್ ಹಾಗೂ ಪೆನ್​​​​​ಡ್ರೈವ್ ಪತ್ತೆಯಾಗಿದೆ. ಇದು ಕಾರಾಗೃಹ ಇಲಾಖೆಯಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಮೊಬೈಲ್ ಹಾಗೂ ಪೆನ್​​​ಡ್ರೈವ್​​​​ನಲ್ಲಿ ಏನೇನಿದೆ ಎನ್ನುವುದು ಪರಿಶೀಲನೆ ನಡೆಸಿದಾಗ ಪೊಲೀಸ್ ಅಧಿಕಾರಿಗಳು ಶಾಕ್ ಆಗಿದ್ದಾರೆ. ಹೌದು….ಪ್ರಜ್ವಲ್ ಬಳಿ ಇದ್ದ ಮೊಬೈಲ್ ಹಾಗೂ ಪೆನ್​​​ಡ್ರೈವ್​​​ನಲ್ಲಿ ಅಶ್ಲೀಲ ವಿಡಿಯೋಗಳು ಇರುವುದು ಪತ್ತೆಯಾಗಿವೆ.ಅಲ್ಲದೇ ಯುವತಿಯರ ಅಶ್ಲೀಲ ಫೋಟೋಗಳ ಕಟ್ಟಿಂಗ್ ಗಳು ಇರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಪ್ರಜ್ವಲ್ ರೇವಣ್ಣನನ್ನು ವಿಐಪಿ ಸೆಲ್​​​​​​​​​​ನಿಂದ ಸಾಮಾನ್ಯ ಸಜಾ ಬಂಧಿಗಳ ಸೆಲ್​​​​ಗೆ ಶಿಫ್ಟ್ ಮಾಡಲಾಗಿದೆ.

ಪ್ರಜ್ವಲ್​​​​​​​​ಗೆ ಮೊಬೈಲ್ ಕೊಟ್ಟಿದ್ಯಾರು?

ಪ್ರಜ್ವಲ್ ರೇವಣ್ಣ ಸೆಲ್ ನಲ್ಲಿ ನೀಲಿ ಬಣ್ಣದ Redmi 5g ಮೊಬೈಲ್ ಫೋನ್ , ಒಂದು ಚಾರ್ಜರ್ , ಒಂದು ನೀಲಿ ಪಾಕೆಟ್ ನೋಟ್‌ಬುಕ್ ಹಾಗೂ ಒಂದು ಕಪ್ಪು ಬಣ್ಣದ ಸ್ಯಾಂಡಿಸ್ಕ್ ಪೆನ್‌ಡ್ರೈವ್ ಸಿಕ್ಕಿದೆ. ಆದ್ರೆ, ಮೊಬೈಲ್ ಹಾಗೂ ಪೆನ್​​​​ಡ್ರೈವ್​​​ನಲ್ಲಿ ಅಶ್ಲೀಲ ವಿಡಿಯೋಗಳು ಇರುವುದು ಕಂಡುಬಂದಿದ್ದು, ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ, ಪ್ರಜ್ವಲ್ ರೇವಣ್ಣಗೆ ಮೊಬೈಲ್, ಪೆನ್​​​ಡ್ರೈವ್ ಕೊಟ್ಟವರು ಯಾರು? ಅದರಲ್ಲಿ ಅಶ್ಲೀಲ ವಿಡಿಯೋಗಳು ಹೇಗೆ ಬಂದವು ಎನ್ನುವುದನ್ನು ಪ್ರಜ್ವಲ್ ರೇವಣ್ಣ ಬಾಯಿ ಬಿಡುತ್ತಿಲ್ಲ. ಹೀಗಾಗಿ ಇದು ನಿಗೂಢವಾಗಿದ್ದು, ಈ ಸಂಬಂಧ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು, ಜೈಲು ಸುಪರಿಡೆಂಟ್​​​​ಗೆ ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ಸಿಸಿಬಿ ದಾಳಿ: ಪ್ರಜ್ವಲ್ ರೇವಣ್ಣ​ ಬ್ಯಾರಕ್​ನಲ್ಲಿದ್ದ ಫೋನ್​​​​ನಲ್ಲಿ ಏನೇನು ಸಿಕ್ತು? ಸ್ಫೋಟಕ ಅಂಶ ಬಿಚ್ಚಿಟ್ಟ ಅಲೋಕ್​​ ಕುಮಾರ್

ಸಾಮಾನ್ಯ ಸೆಲ್​​​ಗೆ ಶಿಫ್ಟ್, ಲೈಬ್ರರಿ ಕೆಲಸ ಮಾಡುವಂತೆ ತಾಕೀತು

ಇನ್ನು ಮೊಬೈಲ್ ಸಿಕ್ಕ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪ್ರಜ್ವಲ್​​​ನ್ನು ವಿಐಪಿಯಿಂದ ಸಮಾನಾ್ಯ ಸಜಾ ಬಂಧಿ ಖೈದಿಗಳ ಸೆಲ್​​​​ಗೆ ಶಿಫ್ಟ್ ಮಾಡಲಾಗಿದೆ. ವಿಐಪಿ ಸೆಲ್​​​​​​ನಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಮತ್ತೋರ್ವ ವಿಚಾರಣಾ ಖೈದಿ ಪ್ರತಾಪ್ ರಾಯ್ ಇದ್ದರು. ಪೊಕ್ಸೋ ಕೇಸ್ ನಲ್ಲಿ ಬಂಧಿತ ಪ್ರತಾಪ್ ರಾಯ್, ಪ್ರಜ್ವಲ್ ರೇವಣ್ಣಗೆ ಅಸಿಸ್ಟೆಂಟ್ ರೀತಿ ಇದ್ದ ಎಂದು ತಿಳಿದುಬಂದಿದೆ. ಇದೀಗ ಪ್ರಜ್ವಲ್​​​​ 20 ಖೈದಿಗಳ ಜೊತೆ ಒಂದೇ ಟಾಯ್ಲೆಟ್ ಇರೋ ಸೆಲ್​​​​​​​​​​​​​​​​​​​​​​​ ಗತಿಯಾಗಿದೆ. ಇನ್ನು ಇಪ್ಪತ್ತು ಖೈದಿಗಳಿಗೆ ಇರುವುದು ಒಂದೇ ಟಾಯ್ಲೆಟ್. ಹೀಗಾಗಿ ಪ್ರಜ್ವಲ್ 20 ಖೈದಿಗಳ ಜೊತೆ ಒಂದೇ ಟಾಯ್ಲೆಟ್ ಬಳಸಬೇಕಿದೆ. ಅಲ್ಲದೆ ಯೂನಿಫಾರ್ಮ್ ಹಾಕಿ ಲೈಬ್ರರಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಕಠಿಣ ಶಿಕ್ಷೆ ಹಿನ್ನೆಲೆ ಜೈಲಿನ ಕಡ್ಡಾಯ ಸಮವಸ್ತ್ರ ಧರಿಸಿ ಲೈಬ್ರರಿ ಕೆಲಸ ಮಾಡಲು ತಿಳಿಸಲಾಗಿದೆ.

ತನಿಖೆಗೆ ಸೂಚನೆ

ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಜೈಲಿನ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣ ರಂಗಾಪುರರನ್ನು ಅಮಾನತುಗೊಳಿಸಲಾಗಿದೆಅಷ್ಟೇ ಅಲ್ಲದೆ, ಜೈಲು ಎಸ್.ಪಿ ಅನ್ಶುಕುಮಾರ್ ಗೂ ಜೈಲು ಡಿಜಿಪಿ ಅಲೋಕ್ ಕುಮಾರ್ ನೋಟಿಸ್ ಜಾರಿ ಮಾಡಿದ್ದು, ಕರ್ತವ್ಯ ಲೋಪಕ್ಕೆ ಕಾರಣ ನೀಡುವಂತೆ ಸೂಚಿಸಿದ್ದಾರೆ. ಕಳೆದ 6ರಂದು ಜೈಲಾಧಿಕಾರಿಗಳು ನಡೆಸಿದ್ದ ತಪಾಸಣೆಯಲ್ಲಿ ಸಿಗದ ಮೊಬೈಲ್ ಈಗ ಹೇಗೆ ಬಂತು, ಪ್ರಜ್ವಲ್‌ಗೆ ಮೊಬೈಲ್ ಕೊಟ್ಟವರು ಯಾರು ಎಂಬುದನ್ನು ತಕ್ಷಣವೇ ತನಿಖಡ ನಡೆಸಿ ಮಾಹಿತಿ ಕೊಡಿ ಎಂದು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:15 pm, Wed, 12 August 26

Source link

Leave a Reply

Your email address will not be published. Required fields are marked *