Headlines

ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ತೀರ್ಪಿನ ಮೇಲೆ ದರ್ಶನ್ ಭವಿಷ್ಯ ನಿರ್ಧಾರ – Kannada News | Pradosh Approver plea hearing adjourned in Renukaswamy Case Actor Darshan

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು 14ನೇ ಆರೋಪಿ ಪ್ರದೋಷ್ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಲಾಗಿದೆ. ಸೋಮವಾರ (ಆಗಸ್ಟ್ 17) ಪ್ರಾಸಿಕ್ಯೂಷನ್ ಪರ ಎಸ್​ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದರು. ಸುಪ್ರೀಂ ಕೋರ್ಟ್ ಈಗಾಗಲೇ ಮಾಫಿ ಸಾಕ್ಷಿಗಳ ಬಗ್ಗೆ ನೀಡಿರುವ ತೀರ್ಪುಗಳನ್ನು ಪ್ರಸನ್ನ ಕುಮಾರ್ ಉಲ್ಲೇಖಿಸಿದರು. ಕೋರ್ಟ್ ಒಪ್ಪಿದರೆ ಪ್ರದೋಷ್ ಮಾಫಿ ಸಾಕ್ಷಿ ಆಗಬಹುದು. ನ್ಯಾಯಾಲಯ ನೀಡಲಿರುವ ಆದೇಶದ ಮೇಲೆ ದರ್ಶನ್ (Darshan) ಭವಿಷ್ಯ ನಿರ್ಧಾರ ಆಗಲಿದೆ. ಇನ್ನು, ಕೋರ್ಟ್ ವಿಚಾರಣೆಯಲ್ಲಿ ತಮ್ಮನ್ನು ವಿಡಿಯೋ ಕಾನ್ಫರೆನ್ಸ್ ಬದಲು ಖುದ್ದು ಹಾಜರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ಅವರ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *