ಪ್ರಯಾಣಿಕರ ಗಮನಕ್ಕೆ: ಶನಿವಾರ ಬೆಳಿಗ್ಗೆ 4 ಗಂಟೆಯಿಂದಲೇ ಮೆಟ್ರೋ ಸೇವೆ, ವಿಶೇಷ ಏನು ಗೊತ್ತಾ? – Kannada News | Bangaluru Metro Saturday Timings | BMRCL Announces Special Early Metro Services for Bengaluru BDA Tree Planting and Walkathon on June 27

ಬೆಂಗಳೂರು, ಜೂನ್​​ 26: ಬಿಡಿಎ ಸಹಯೋಗದಲ್ಲಿ ನಾಳೆ ಅಂದರೆ ಜೂನ್​​ 27ರಂದು ಬೆಂಗಳೂರಿನ ಹಲವೆಡೆ ಸಸಿ ನೆಡುವ ಹಾಗೂ ವಾಕ್‌ಥಾನ್​​ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗಿನಜಾವ 4 ಗಂಟೆಯಿಂದಲೇ ನಗರದಲ್ಲಿ ನಮ್ಮ ಮೆಟ್ರೋ (Namma Metro) ಸೇವೆ ಆರಂಭಗೊಳ್ಳಲಿದೆ. ಈ ವಿಶೇಷ ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮನವಿ ಮಾಡಿದೆ.

ಬಿಎಂಆರ್​ಸಿಎಲ್​ ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಬಿಎಂಆರ್​ಸಿಎಲ್​ ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊಡಿಸಿದೆ. ಬಿಡಿಎ ವತಿಯಿಂದ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ವಾಕ್‌ಥಾನ್‌ನಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಜೂನ್ 27ರ ಶನಿವಾರ ವಿಶೇಷ ಮುಂಜಾನೆ ಮೆಟ್ರೋ ಸೇವೆ ಒದಗಿಸಲಾಗುತ್ತಿದೆ.

ನಮ್ಮ ಮೆಟ್ರೋ ಟ್ವೀಟ್​

ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಸುಲಭವಾಗಿ ತಮ್ಮ ಗಮ್ಯಸ್ಥಾನವನ್ನು ತಲುಪುವ ಉದ್ದೇಶದಿಂದ, ನಮ್ಮ ಮೆಟ್ರೋ ಎಲ್ಲಾ ಮಾರ್ಗಗಳ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 4 ಗಂಟೆಗೆ ರೈಲು ಸಂಚಾರವನ್ನು ಆರಂಭಿಸುತ್ತಿದೆ. ಇದು ಸಾಮಾನ್ಯ ಶನಿವಾರದ ಬೆಳಿಗ್ಗೆ 5 ಗಂಟೆಯ ಸೇವೆಗಿಂತ ಒಂದು ಗಂಟೆ ಮುಂಚಿತವಾಗಿ ರೈಲು ಸಂಚಾರ ಆರಂಭವಾಗಲಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ 3 ವರ್ಷದಲ್ಲಿ 21 ಬಾರಿ ಯಡವಟ್ಟು: ಬಿಎಂಆರ್‌ಸಿಎಲ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಗರಂ, ತನಿಖೆಗೆ ಪತ್ರ

ಸಾರ್ವಜನಿಕರು ಈ ವಿಶೇಷ ಮುಂಜಾನೆ ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಂಡು, ಬಿಡಿಎ ಸಸಿ ನೆಡುವ ಕಾರ್ಯಕ್ರಮ ಹಾಗೂ ವಾಕ್‌ಥಾನ್‌ನಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಹಾಗೂ ಸುರಕ್ಷಿತ, ಸುಗಮ ಮತ್ತು ಪರಿಸರ ಸ್ನೇಹಿ ಮೆಟ್ರೋ ಸೇವೆಯನ್ನು ಬಳಸುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಇನ್ನು ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಯೋಜಿಸಿಕೊಳ್ಳುವಂತೆ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:11 pm, Fri, 26 June 26

Source link

Leave a Reply

Your email address will not be published. Required fields are marked *