ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಶಾಂತ್ ಗೌಡ ನಿಶ್ಚಿತಾರ್ಥ ನಟಿ ಕೃತಿ ಗೌಡ ಜೊತೆ ಇತ್ತೀಚೆಗೆ ನೆರವೇರಿದೆ. ಈ ಫೋಟೋಗಳನ್ನು ನವ ಜೋಡಿ ಹಂಚಿಕೊಂಡಿದ್ದಾರೆ. ಇವರ ಮದುವೆಗಾಗಿ ಫ್ಯಾನ್ಸ್ ಕಾದಿದ್ದಾರೆ.
ಪ್ರಶಾಂತ್ ಹಾಗೂ ಕೃತಿ ಇಬ್ಬರಿಗೂ ಬಣ್ಣದ ಲೋಕದ ಜೊತೆ ಒಳ್ಳೆಯ ನಂಟಿದೆ. ಈ ಕಾರಣದಿಂದಲೇ ಅನೇಕ ಸೆಲೆಬ್ರಿಟಿಗಳು ಇವರ ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು ಅನ್ನೋದು ವಿಶೇಷ.
ಅನುಪಮಾ ಹಾಗೂ ಪ್ರಶಾಂತ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇಬ್ಬರೂ ಕಿರುತೆರೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅನುಪಮಾ ಅವರು ನಿಶ್ಚಿತಾರ್ಥಕ್ಕೆ ಆಗಮಿಸಿ ಶುಭಕೋರಿದ್ದಾರೆ.
ಶ್ರುತಿ ಅವರು ಕೂಡ ಪ್ರಶಾಂತ್ ಹಾಗೂ ಕೃತಿ ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು. ಅವರು ನವ ಜೋಡಿಗೆ ಶುಭ ಕೋರಿದ್ದಾರೆ. ಪ್ರಶಾಂತ್-ಕೃತಿ ಜೊತೆ ಅವರು ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ.
ನಿವೇದಿತಾ ಗೌಡ ಅವರು ಎಂದಾದರೂ ಸೀರೆಯಲ್ಲಿ ನೋಡಿದ್ದೀರಾ? ಪ್ರಶಾಂತ್ ಹಾಗೂ ಕೃತಿ ನಿಶ್ಚಿತಾರ್ಥದಂದು ಅವರು ಸೀರೆಯಲ್ಲೇ ಆಗಮಿಸಿದ್ದರು ಅನ್ನೋದು ವಿಶೇಷ. ಅವರನ್ನು ಡ್ರೆಡಿಷನಲ್ ಲುಕ್ ಅಲ್ಲಿ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.
ಬಿಗ್ ಬಾಸ್ ಮೂಲಕ ಫೇಮಸ್ ಆದ ರಘು ಗೌಡ ಹಾಗೂ ತುಕಾಲಿ ಸಂತೋಷ್ ಅವರು ಪ್ರಶಾಂತ್ ಹಾಗೂ ಕೃತಿಗೆ ಶುಭ ಕೋರಿದ್ದಾರೆ. ಆ ಸಂದರ್ಭದ ಫೋಟೋ ಇದಾಗಿದೆ.
ಸೃಜನ್ ಲೋಕೇಶ್ ಕೂಡ ತಮ್ಮ ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಪ್ರಶಾಂತ್ ಹಾಗೂ ಕೃತಿ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದರು ಎಂಬುದು ವಿಶೇಷ.
