ಪ್ರೆಗ್ನೆನ್ಸಿಯಲ್ಲಿ ಚಹಾ ಕುಡಿಯುವುದು ಸುರಕ್ಷಿತವೇ? ಇದು ಅಸಿಡಿಟಿ ಹೆಚ್ಚಿಸುತ್ತದೆಯೇ ತಿಳಿದುಕೊಳ್ಳಿ – Kannada News | Is Tea Safe in Pregnancy?

ಗರ್ಭಾವಸ್ಥೆಯ (Pregnancy) ಸಮಯದಲ್ಲಿ ಆಹಾರ ಪದ್ಧತಿಗೆ ವಿಶೇಷ ಗಮನ ನೀಡುವುದು ಅತ್ಯಂತ ಅಗತ್ಯ. ಏಕೆಂದರೆ ಈ ಅವಧಿಯಲ್ಲಿ ಮಹಿಳೆಯ ದೇಹವು ತನ್ನಿಗಷ್ಟೇ ಅಲ್ಲದೆ ಗರ್ಭದಲ್ಲಿರುವ ಶಿಶುವಿಗೂ ಪೋಷಣೆಯನ್ನು ಒದಗಿಸಬೇಕಾಗುತ್ತದೆ. ಅಸಮತೋಲಿತ ಆಹಾರದಿಂದ ದೌರ್ಬಲ್ಯ, ದಣಿವು, ತಲೆ ಸುತ್ತು, ಅನೀಮಿಯಾ, ಅಸಿಡಿಟಿ ಹಾಗೂ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು ಕಂಡುಬರಬಹುದು. ಪೋಷಕಾಂಶಗಳ ಕೊರತೆ ಶಿಶುವಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು, ಏನು ತಪ್ಪಿಸಬೇಕು ಎಂಬ ಅರಿವು ಬಹಳ ಮುಖ್ಯ. ಅದರಲ್ಲಿಯೂ ಬಹುತೇಕ ಮಹಿಳೆಯರ ದಿನಚರಿ ಚಹಾದಿಂದ ಆರಂಭವಾಗುವುದರಿಂದ ಗರ್ಭಾವಸ್ಥೆಯಲ್ಲಿ ಚಹಾ ಕುಡಿಯುವ ಅಭ್ಯಾಸ ಸುರಕ್ಷಿತವೇ ಎಂಬ ಪ್ರಶ್ನೆ ಮೂಡುತ್ತದೆ. ಚಹಾದಲ್ಲಿರುವ ಕೆಫೀನ್, ಹಾಲು ಮತ್ತು ಸಕ್ಕರೆ ದೇಹದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಸಣ್ಣ ನಿರ್ಲಕ್ಷ್ಯವೂ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಚಹಾವನ್ನು ಎಷ್ಟು ಪ್ರಮಾಣದಲ್ಲಿ ಮತ್ತು ಯಾವ ರೀತಿಯಲ್ಲಿ ಸೇವಿಸಬಹುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಅಗತ್ಯ. ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಗರ್ಭಾವಸ್ಥೆಯಲ್ಲಿ ಚಹಾ ಕುಡಿಯುವುದು ಸುರಕ್ಷಿತವೇ?

ಡಾ. ಅನಾಮಿಕಾ ಗೌರ್ ಹೇಳುವ ಪ್ರಕಾರ, ಗರ್ಭಾವಸ್ಥೆಯಲ್ಲಿ ಮಿತ ಪ್ರಮಾಣದಲ್ಲಿ ಚಹಾ ಕುಡಿಯುವುದು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಆದರೆ ಅತಿಯಾದ ಸೇವನೆ ಹಾನಿಕಾರಕವಾಗಬಹುದು. ಚಹಾದಲ್ಲಿರುವ ಕೆಫೀನ್ ದೇಹದಲ್ಲಿ ಕಬ್ಬಿಣದ ಅಂಶವನ್ನು ಕಡಿಮೆ ಮಾಡಬಹುದು. ಇದರಿಂದ ಅನೀಮಿಯಾ ಅಪಾಯ ಹೆಚ್ಚಾಗಬಹುದು. ಅಷ್ಟೇಅಲ್ಲ ಹೆಚ್ಚೆಚ್ಚು ಚಹಾ ಕುಡಿಯುವುದರಿಂದ ಅಸಿಡಿಟಿ, ಗ್ಯಾಸು ಮತ್ತು ಎದೆ ಉರಿಯುವ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಾತ್ರವಲ್ಲ ಗರ್ಭಾವಸ್ಥೆಯಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿರುವುದರಿಂದ ಅವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕೆಲವು ಮಹಿಳೆಯರಲ್ಲಿ ಚಹಾ ಸೇವನೆಯಿಂದ ನಿದ್ರೆ ಕೊರತೆ ಮತ್ತು ಹೃದಯ ಬಡಿತ ವೇಗವಾಗಬಹುದು. ಆದ್ದರಿಂದ ದಿನಕ್ಕೆ ಒಂದು ಕಪ್‌ಗಿಂತ ಹೆಚ್ಚು ಚಹಾ ಕುಡಿಯದಂತೆ ಸಲಹೆ ನೀಡಲಾಗುತ್ತದೆ. ಆದರೆ ಅಸಿಡಿಟಿ ಅಥವಾ ವಾಂತಿ ಸಮಸ್ಯೆ ಹೆಚ್ಚಿದ್ದರೆ ಚಹಾವನ್ನು ತಪ್ಪಿಸುವುದು ಒಳಿತು. ವೈದ್ಯರ ಸಲಹೆಯ ಮೇರೆಗೆ ಮಾತ್ರ ಚಹಾ ಸೇವಿಸುವುದು ಸುರಕ್ಷಿತ.

ಚಹಾಕ್ಕೆ ಬದಲಾಗಿ ಏನು ಕುಡಿಯಬಹುದು?

ಗರ್ಭಿಣಿಯರು ಚಹಾಕ್ಕೆ ಬದಲಾಗಿ ಆರೋಗ್ಯಕರ ಆಯ್ಕೆಗಳನ್ನು ಮಾಡಬಹುದು. ಬಿಸಿ ಹಾಲಿನ ಸೇವನೆ ಮಾಡಬಹುದು. ಇದು ಕ್ಯಾಲ್ಸಿಯಂ ಒದಗಿಸುತ್ತದೆ, ಎಲುಬುಗಳ ಬಲಕ್ಕೆ ಸಹಾಯಕವಾಗಿರುತ್ತದೆ. ಜೊತೆಗೆ ಏಳನೀರು ದೇಹವನ್ನು ಹೈಡ್ರೇಟ್ ಮಾಡುತ್ತದೆ, ಜೊತೆಗೆ ದಣಿವನ್ನು ಕೂಡ ಕಡಿಮೆ ಮಾಡುತ್ತದೆ. ನಿಂಬು ನೀರು ಕೂಡ ಒಳ್ಳೆಯದು ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇವುಗಳ ಬದಲು ಅಭ್ಯಾಸವಿದ್ದರೆ ಶುಂಠಿ ಕಷಾಯವನ್ನು ಕೂಡ ಮಾಡಿ ಕುಡಿಯಬಹುದು. ಇದು ವಾಂತಿಯ ಭಾವನೆ ಕಡಿಮೆ ಮಾಡಲು ಸಹಾಯಕವಾಗುತ್ತದೆ. ಅಷ್ಟು ಮಾತ್ರವಲ್ಲ, ಹರ್ಬಲ್ ಪಾನೀಯಗಳನ್ನು ಕೂಡ ಕುಡಿಯಬಹುದು. ಆದರೆ ಅದರ ಮೊದಲು ವೈದ್ಯರಿಂದ ಸಲಹೆ ಪಡೆದುಕೊಳ್ಳಬೇಕು. ಈ ಪರ್ಯಾಯಗಳು ದೇಹಕ್ಕೆ ಪೋಷಕಾಂಶ ಒದಗಿಸುವುದರ ಜೊತೆಗೆ ಅಸಿಡಿಟಿ ಅಪಾಯವನ್ನು ಕಡಿಮೆ ಮಾಡುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *