ಪ್ರೇಮಿಗಳ ದಿನವೇ ದುರಂತ; ಕಾರಿನೊಳಗೆ ಪ್ರೇಯಸಿಯನ್ನು ಕೊಂದು ತಾನೂ ಶೂಟ್ ಮಾಡಿಕೊಂಡ ಪ್ರೇಮಿ – Kannada News | Man Kills Girlfriend Then shoots himself Inside Parked Car In Noida on Valentine’s Day

ನೋಯ್ಡಾ, ಫೆಬ್ರವರಿ 14: ಉತ್ತರ ಪ್ರದೇಶದ ನೋಯ್ಡಾದಲ್ಲಿ 32 ವರ್ಷದ ವ್ಯಕ್ತಿಯೊಬ್ಬ ತನ್ನ 26 ವರ್ಷದ ಪ್ರೇಯಸಿಯ ಮೇಲೆ ಗುಂಡು (Firing) ಹಾರಿಸಿ ಕೊಂದು, ಲಾಕ್ ಮಾಡಿದ ಕಾರಿನೊಳಗೆ ತನಗೆ ತಾನೇ ಶೂಟ್ ಮಾಡಿಕೊಂಡಿದ್ದಾನೆ. ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಶವಗಳು ಪತ್ತೆಯಾಗಿವೆ. ಇಂದು ಬೆಳಿಗ್ಗೆ ಅನುಮಾನಾಸ್ಪದವಾಗಿ ನಿಲ್ಲಿಸಿದ್ದ ಕಾರಿನ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಈ ಸಾವಿನ ವಿಷಯ ಗೊತ್ತಾಗಿದೆ. ಆ ಕಾರನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು.

ಮೃತರನ್ನು ದೆಹಲಿಯ ತ್ರಿಲೋಕಪುರಿಯ ನಿವಾಸಿ 32 ವರ್ಷದ ಸುಮಿತ್ ಮತ್ತು ನೋಯ್ಡಾದ ಸೆಕ್ಟರ್ 101ರ ನಿವಾಸಿ 26 ವರ್ಷದ ರೇಖಾ ಎಂದು ಗುರುತಿಸಲಾಗಿದೆ. ಅವರ ಕುಟುಂಬಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅವರಿಬ್ಬರೂ ಶುಕ್ರವಾರದಿಂದ ಕಾಣೆಯಾಗಿದ್ದಾರೆ ಎಂದು ವರದಿಯಾಗಿದ್ದು, ಅವರ ಕುಟುಂಬಸ್ಥರು ನಾಪತ್ತೆಯಾದ ಬಗ್ಗೆ ದೂರುಗಳನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಲೇಜಿನೊಳಗೇ ಯುವತಿಯನ್ನು ಕೊಂದು, ತಾನೂ ಶೂಟ್ ಮಾಡಿಕೊಂಡ ಪಂಜಾಬ್​​ನ ಕಾನೂನು ವಿದ್ಯಾರ್ಥಿ

ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತೆ ಮನಿಷಾ ಸಿಂಗ್ ಅವರ ಪ್ರಕಾರ, ಇಬ್ಬರ ತಲೆಗೂ ಗುಂಡೇಟಿನ ಗಾಯಗಳಾಗಿದ್ದು, ಆ ವ್ಯಕ್ತಿಯ ಕೈಯಲ್ಲಿ ಒಂದು ಪಿಸ್ತೂಲ್ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಿಂದ ಇದು ಕೊಲೆ-ಆತ್ಮಹತ್ಯೆಯ ಪ್ರಕರಣ ಎಂದು ತಿಳಿದುಬಂದಿದೆ. ಆ ವ್ಯಕ್ತಿ ಮೊದಲು ಮಹಿಳೆಯನ್ನು ಕೊಂದು ತನಗೆ ತಾನೇ ಶೂಟ್ ಮಾಡಿಕೊಂಡಿದ್ದಾನೆ.

ಅವರಿಬ್ಬರೂ ಹಲವಾರು ವರ್ಷಗಳಿಂದ ಸಂಬಂಧದಲ್ಲಿದ್ದರು. ಮದುವೆಯ ಕಾರಣಕ್ಕೆ ಗಲಾಟೆ ನಡೆದಿರಬಹುದು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *