ಬೆಂಗಳೂರು, (ಜೂನ್ 24): ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ (krishna byre gowda) ಅವರು ಪ್ರತಿದಿನ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಬೆಂಗಳೂರು ರಸ್ತೆಗಳ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾಯ್ತು. ಇದೀಗ ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ಮುಂದಾಗಿದ್ದು, ಈ ಸಂಬಂಧಅದರಂತೆ ಇಂದು (ಜೂನ್ 24) GBA ಮುಖ್ಯ ಆಯುಕ್ತರು, ನಗರ ಪಾಲಿಕೆಗಳ ಆಯುಕ್ತರು, ಜಂಟಿ ಆಯುಕ್ತರ ಸಭೆ ನಡೆಸಿದ್ದಾರೆ. ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿ ಜನ ಉಪಯೋಗಕ್ಕೆ ನೆರವಾಗುವಂತೆ ದುರಸ್ತಿ ಕಾಮಗಾರಿಗಳನ್ನು ನಡೆಸುವ ಕುರಿತು ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಮುಖ್ಯವಾಗಿ ಫುಟ್ ಪಾತ್ ತೆರವಿಗೆ ಸಂಬಂಧ ತೊಂದರೆ ಬಂದರೆ ಅಧಿಕಾರಿಗಳ ಬೆನ್ನಿಗೆ ನಿಲ್ಲುವ ಮಾತುಗಳನ್ನಾಡಿದ್ದಾರೆ.
ಜನರ ಕಣ್ಣಿಗೆ ಕಾಣುವ ರೀತಿ ಸುಧಾರಣೆ ಆಗಲೇಬೇಕು. ಫುಟ್ ಪಾತ್ ಅತಿಕ್ರಮಣ ತಪ್ಪಿಸೋಕೆ ಕ್ರಿಯಾಯೋಜನೆ ಮಾಡಬೇಕು. ಫುಟ್ ಪಾತ್ ಅತಿಕ್ರಮಣ ಮಾಡದಂತೆ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ಇದೆ . ಈ ವಿಚಾರವಾಗಿ ಈಗಾಗಲೇ ಸಾವಿರ ಬಾರಿ ಚರ್ಚೆ ಆಗಿದೆ. ಅದರ ಅರಿವು ನನಗೆ ಇದೆ. ಅಧಿಕಾರಿಗಳು Helpless ಇರಬಹುದು. ಆದರೆ, ಸರ್ಕಾರ helpless ಅಲ್ಲ. ಪಾದಚಾರಿ ಒತ್ತುವರಿ ತೆರವಿಗೆ ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ಜರುಗಿಸಿ. ನಿಮಗೆ ಏನೇ ತೊಂದರೆ ಬಂದರೂ ನಿಮ್ಮ ಬೆನ್ನಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
