ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ – Kannada News | AI Impact Summit 2026 at Delhi’s Bharat Mandapam from Feb 16 20, key details of the event

ನವದೆಹಲಿ, ಫೆಬ್ರುವರಿ 15: ರಾಷ್ಟ್ರ ರಾಜಧಾನಿಯಲ್ಲಿ ನಾಳೆಯಿಂದ (ಫೆ. 16) ಐದು ದಿನಗಳ ಕಾಲ ಎಐ ಇಂಪ್ಯಾಕ್ಟ್ ಸಮಿಟ್ (AI Impact Summit 2026) ನಡೆಯಲಿದೆ. ಎಐ ಕುರಿತು ಅರಿವು ಮೂಡಿಸಲು ಮತ್ತು ಎಐ ಕ್ಷೇತ್ರದಲ್ಲಿ ಭಾರತದ ಯೋಜನೆಗಳನ್ನು ಜಗಜ್ಜಾಹೀರುಗೊಳಿಸಲು ಈ ಎಐ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ವಿಶ್ವದ ಅನೇಕ ದೇಶಗಳಿಂದ ಟೆಕ್ ಮುಖಂಡರು ಮತ್ತು ಕಂಪನಿಗಳು ಈ ಸಮಿಟ್​ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದರಲ್ಲೂ ಸುಮಾರು 50 ದಕ್ಷಿಣ ದೇಶಗಳ ಉಪಸ್ಥಿತಿ ಇದರಲ್ಲಿರಲಿದೆ.

ದೆಹಲಿಯ ಭಾರತ್ ಮಂಡಪಂನಲ್ಲಿ ಎಐ ಇಂಪ್ಯಾಕ್ಟ್ ಸಮಿಟ್ ನಡೆಯಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ. ಎಐ ಎಕ್ಸಿಬಿಶನ್, ಉನ್ನತ ಮಟ್ಟದ ಸಿಇಒ ಫೋರಂ, ಚರ್ಚೆಗಳು, ಉಪನ್ಯಾಸಗಳು ಇತ್ಯಾದಿ ನಾನಾ ರೀತಿಯ ಕಾರ್ಯಕ್ರಮಗಳು ಈ ಐದು ದಿನಗಳಾದ್ಯಂತ ನಡೆಯಲಿವೆ.

ಇದನ್ನೂ ಓದಿ: ಹೊಸ ಐಟಿ ರೂಲ್ಸ್; ಎಐ ಸೃಷ್ಟಿದ ಕಂಟೆಂಟ್​ಗೆ ಲೇಬಲಿಂಗ್ ಕಡ್ಡಾಯ; ಫೇಸ್​ಬುಕ್, ಇನ್ಸ್​ಟಾಗಳಿಗೆ ಕಠಿಣ ನಿಯಮ

ಎಐನಿಂದ ಮಾನವನ ಬದುಕಿಗೆ ಯಾವ್ಯಾವ ರೀತಿಯ ಪರಿಣಾಮ ಬೀರುತ್ತದೆ, ಎಷ್ಟು ಒಳಿತು, ಎಷ್ಟು ಮಾರಕ ಎಂಬುದನ್ನು ಅರಿಯುವ ಮತ್ತು ನಿವೇದಿಸುವ ಪ್ರಯತ್ನವಾಗಲಿದೆ. ಸಮಗ್ರ ಅಭಿವೃದ್ಧಿಗೆ ಎಐ ಅನ್ನು ಹೇಗೆ ಬಳಸಬಹುದು ಎಂಬುದನ್ನು ಚರ್ಚಿಸಲಾಗುತ್ತದೆ.

ವಿಶ್ವದ ಅತ್ಯಂತ ಪ್ರಬಲ ಎಐ ಚಿಪ್​ಗಳನ್ನು ತಯಾರಿಸುವ ಎನ್​ವಿಡಿಯಾ ಕಂಪನಿಯ ಸಿಇಒ ಹುವಾಂಗ್ ಜೆನ್ಸೆನ್ ಅವರು ಈ ಸಭೆಯಲ್ಲಿ ಕಾರಣಾಂತರಗಳಿಂದ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಲಾಗಿದೆ. ಆದರೆ, ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ಜಯ್ ಪುರಿ ನೇತೃತ್ವದ ನಿಯೋಗವೊಂದು ಸಮಿಟ್​ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು, ಇಸ್ರೇಲ್ ದೇಶವು ಈ ಸಮಿಟ್​ನಲ್ಲಿ ಉಪಸ್ಥಿತಿ ಹೊಂದಿರುತ್ತದೆ.

ಎಐ ಇಂಪ್ಯಾಕ್ಟ್ ಸಮಿಟ್​ಗೆ ನೊಂದಾಯಿಸುವುದು ಹೇಗೆ?

  • ಶೃಂಗಸಭೆ ನಡೆಯುವ ಸ್ಥಳ: ದೆಹಲಿಯ ಭಾರತ್ ಮಂಡಪಂ
  • ದಿನಾಂಕ: ಫೆಬ್ರುವರಿ 16ರಿಂದ 20ರವರೆಗೆ
  • ಅಧಿಕೃತ ವೆಬ್​ಸೈಟ್: impact.indiaai.gov.in/
  • ನೊಂದಣಿಗೆ ಲಿಂಕ್: impact.indiaai.gov.in/registration

ಇದನ್ನೂ ಓದಿ: ಸರ್ವಮ್ ಎಐನಿಂದ ಹೊಸ ಮಾಡಲ್; ಡಾಕ್ಯುಮೆಂಟ್ ಇಂಟೆಲಿಜೆನ್ಸ್​ನಲ್ಲಿ ವಿಶ್ವಲ್ಲೇ ಬೆಸ್ಟ್; ಕಟು ಟೀಕಾಕಾರರಿಗೂ ಅಚ್ಚರಿ

ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಹೆಚ್ಚು ಜನರು ನೊಂದಾಯಿಸಿಕೊಂಡಿದ್ದಾರೆ. ರಿಜಿಸ್ಟರ್ ಮಾಡಿಕೊಂಡರೆ ಅವರಿಗೆ ಪಾಸ್ ಕೊಡಲಾಗುತ್ತದೆ. ಅಂಥವರಿಗೆ ಮಾತ್ರವೇ ಪ್ರವೇಶಾವಕಾಶ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *