ಯಾದಗಿರಿ, (ಮಾರ್ಚ್ 05): ಬಾಲಕಿ ಜೊತೆ ಅನುಚಿತ ವರ್ತನೆ ಸಂಬಂಧ ಫೋಕ್ಸೋ ಪ್ರಕರಣ (pocso Case) ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಯಾದಗಿರಿಯ (Yadagir) ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ (mallikarjun mutya) ಪ್ರತ್ಯಕ್ಷರಾಗಿದ್ದಾರೆ. ಫೆಬ್ರವರಿ 25ರಿಂದ ಕಾಣೆಯಾಗಿದ್ದ ಮಲ್ಲಿಕಾರ್ಜುನ ಮುತ್ಯಾ ನಿನ್ನೆ (ಮಾರ್ಚ್ 04) ರಾತ್ರಿ ಶಹಾಪುರ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಗೆ ಹಾಜರಾಗಿದ್ದು, ಈ ವೇಳೆ ಪೊಲೀಸರು ವಿಚಾರಣೆ ನಡಸಿ ಇಂದು(ಮಾರ್ಚ್ 05) ಮಧ್ಯಾಹ್ನ 3 ಗಂಟೆಗೆ ಬರುವಂತೆ ಕಳುಹಿಸಿಕೊಟ್ಟಿದ್ದರು. ಅದರಂತೆ ಮುತ್ಯಾ ವಿಚಾರಣೆಗೆ ಹಾಜರಾಗಿದ್ದು, ಮೊದಲು ಪೊಲೀಸರು ಮುತ್ಯಾನನ್ನು ಶಹಾಪುರ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮೆಡಿಕಲ್ ಟೆಸ್ಟ್ ಪ್ರಕ್ರಿಯೆ ನಡೆಸಿದ್ದಾರೆ.
ಕರ್ನಾಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
