‘ಫೌಜಿ’ ಹೊಸ ಪೋಸ್ಟರ್ ವೈರಲ್: ಮುಖ ತೋರಿಸದೇ ಕೌತುಕ ಮೂಡಿಸಿದ ಪ್ರಭಾಸ್ – Kannada News | Prabhas Fauzi new Independence Day poster hides face viral social media

ಪ್ಯಾನ್-ಇಂಡಿಯಾ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ‘ಫೌಜಿ’ (Fauzi) ಸಿನಿಮಾದಿಂದ ಮತ್ತೊಂದು ಮಾಸ್ ಪೋಸ್ಟರ್ ಬಿಡುಗಡೆಯಾಗಿದೆ. ಹನು ರಾಘವಪೂಡಿ ನಿರ್ದೇಶನದ ಈ ಬಿಗ್ ಬಜೆಟ್ ವಾರ್ ಆ್ಯಕ್ಷನ್ ಡ್ರಾಮಾ ಚಿತ್ರದ ಹೊಸ ಲುಕ್ ನೋಡಿ  ಪ್ರಭಾಸ್ (Prabhas) ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಚಿತ್ರತಂಡ ಈ ಪೋಸ್ಟರ್ ಹಂಚಿಕೊಂಡಿದೆ. ‘ಸ್ವಾತಂತ್ರ್ಯ ಸಂಭ್ರಮವಾಗುವ ಮೊದಲು ಅದೊಂದು ಯುದ್ಧವಾಗಿತ್ತು. ನಮ್ಮ ನಾಳೆಗಾಗಿ ಹೋರಾಡಿದ ಪ್ರತಿಯೊಬ್ಬ ಫೌಜಿಯ ತ್ಯಾಗಕ್ಕೆ ಪ್ರಣಾಮಗಳು’ ಎಂದು ಚಿತ್ರತಂಡ ಈ ಪೋಸ್ಟರ್ ಹಂಚಿಕೊಂಡಿದೆ.

ಚಿತ್ರತಂಡ ಬಿಡುಗಡೆ ಮಾಡಿರುವ ಈ ಪೋಸ್ಟರ್‌ನಲ್ಲಿ ಗಾಂಧೀಜಿಯವರ ವೇಷಧಾರಿ ವೃದ್ಧರೊಬ್ಬರು ಚಾರ್ಮಿನಾರ್ ಕಡೆಗೆ ನಡಿಯುತ್ತಿರುವುದು ಕಾಣಿಸುತ್ತದೆ. ಮತ್ತೊಂದೆಡೆ, ರಕ್ತದ ಕಲೆಗಳಿರುವ ಉಡುಪಿನಲ್ಲಿ ಎರಡು ಕೈಗಳಲ್ಲಿ ಪಿಸ್ತೂಲ್ ಹಿಡಿದು ಪ್ರಭಾಸ್ ನಿಂತಿದ್ದಾರೆ. ಆದರೆ, ಈ ಪೋಸ್ಟರ್‌ನಲ್ಲಿ ಪ್ರಭಾಸ್ ಅವರ ಮುಖವನ್ನು ತೋರಿಸದಿರುವುದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

‘ಫೌಜಿ’ ಪೋಸ್ಟರ್ ನೋಡಿ ಜನರ ಪ್ರತಿಕ್ರಿಯೆ:

ಈ ಪೋಸ್ಟರ್ ಅತ್ಯಂತ ಕುತೂಹಲಭರಿತವಾಗಿ ವಿನ್ಯಾಸಗೊಂಡಿದ್ದು, ಸಿನಿಮಾ ಬಿಡುಗಡೆಯಾದಾಗ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಪುಡಿ ಮಾಡಲಿದೆ ಎಂದು ಅಭಿಮಾನಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಒಂದು ಬದಿಯಲ್ಲಿ ಗಾಂಧೀಜಿಯವರ ಅಹಿಂಸಾ ಮಾರ್ಗ, ಮತ್ತೊಂದು ಬದಿಯಲ್ಲಿ ಹಿಂಸೆಯ ವಾತಾವರಣ ಮತ್ತು ಮಧ್ಯದಲ್ಲಿ ಚಾರ್ಮಿನಾರ್ ಬಿಂಬಿಸಿರುವ ವಿನ್ಯಾಸಕ್ಕೆ ನೆಟ್ಟಿಗರು ಮಾರುಹೋಗಿದ್ದಾರೆ.

ನಿರ್ದೇಶಕರ ಮೇಲೆ ನಿಂತಿದೆ ಯಶಸ್ಸು:

ಪ್ರಭಾಸ್ ಅವರು ಒಂದೇ ರೀತಿಯ ಪಾತ್ರಕ್ಕೆ ಕಟ್ಟುಬಿದ್ದಿಲ್ಲ. ಸದಾ ಹೊಸ ತರಹದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ‘ಬಾಹುಬಲಿ’, ‘ಕಲ್ಕಿ’ ಮತ್ತು ‘ಸಲಾರ್’ ರೀತಿಯಲ್ಲಿ ಈ ಸಿನಿಮಾವನ್ನು ನಿರ್ದೇಶಕರು ಹೇಗೆ ತೆರೆಗೆ ತರುತ್ತಾರೆ ಎಂಬುದರ ಮೇಲೆ ಇದರ ಯಶಸ್ಸು ಆಧಾರಿತವಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ಏಳು ವರ್ಷಗಳ ಬಳಿಕ ಇನ್​​ಸ್ಟಾಗ್ರಾಂ ಡಿಪಿ ಬದಲಿಸಿದ ಪ್ರಭಾಸ್

‘ಫೌಜಿ’ ಚಿತ್ರದಲ್ಲಿ ಇಮಾನ್ವಿ ನಾಯಕಿಯಾಗಿ ನಟಿಸುತ್ತಿದ್ದು, ಬಾಲಿವುಡ್‌ನ ಹಿರಿಯ ನಟರಾದ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಜಯಪ್ರದಾ ಹಾಗೂ ಕನ್ನಡದ ನಟಿ ಚೈತ್ರಾ ಜೆ. ಆಚಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶಾಲ್ ಚಂದ್ರಶೇಖರ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದೆ. ‘ಫೌಜಿ’ ಸಿನಿಮಾ ಡಿಸೆಂಬರ್ 3ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *