ಬಂಕ್‌ಗಳ ಮುಂದೆ ಮತ್ತೆ ಶುರುವಾಗುತ್ತಾ ಕ್ಯೂ? ಕೈಗಾರಿಕೆಗಳ ‘ಬಲ್ಕ್’ ಖರೀದಿಯಿಂದ ಸಾಮಾನ್ಯ ಗ್ರಾಹಕರಿಗೆ ಡೀಸೆಲ್ ಸಂಕಷ್ಟ! – Kannada News | India Diesel Shortage Alert: Petroleum Dealers Complain to PMO Over Fuel Supply Crisis

ಕೈಗಾರಿಕೆಗಳ ‘ಬಲ್ಕ್’ ಖರೀದಿಯಿಂದ ಸಾಮಾನ್ಯ ಗ್ರಾಹಕರಿಗೆ ಡೀಸೆಲ್ ಸಂಕಷ್ಟ!
Image Credit source: google Gemini

ಬೆಂಗಳೂರು, ಮೇ 12: ಎರಡು ದಿನಗಳ ಹಿಂದೆ ಪ್ರಧಾನಿ ಮೋದಿಯವರು (Narendra Modi) ಚಿನ್ನ, ಇಂಧನ ಖರೀದಿ ಮಿತಗೊಳಿಸಿ ಎಂದು ಹೇಳಿದ್ದು ಸಾಕಷ್ಟು ಚರ್ಚೆ ಹುಟ್ಟಿಹಾಕಿದೆ.  ಈ ಬೆನ್ನಲ್ಲೇ ದೇಶದಲ್ಲಿ ಡೀಸೆಲ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಚಿಲ್ಲರೆ ಪೆಟ್ರೋಲ್ ಬಂಕ್‌ಗಳಲ್ಲಿ ಹೈ ಸ್ಪೀಡ್ ಡೀಸೆಲ್ (HSD) ಕೊರತೆ ಉಂಟಾಗುವ ಆತಂಕ ಎದುರಾಗಿದೆ. ಈ ಗಂಭೀರ ಪರಿಸ್ಥಿತಿಯ ಕುರಿತು ‘ನಮ್ಮ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್’ ಪ್ರಧಾನ ಮಂತ್ರಿಗಳ ಕಚೇರಿಗೆ (PMO) ದೂರು ಸಲ್ಲಿಸಿದೆ.

ಮುಖ್ಯಾಂಶಗಳು

  • ಕೈಗಾರಿಕೆಗಳ ಅತಿಯಾದ ಖರೀದಿಯಿಂದ ಚಿಲ್ಲರೆ ಬಂಕ್‌ಗಳಲ್ಲಿ ಡೀಸೆಲ್ ಪೂರೈಕೆ ಕೊರತೆ ಉಂಟಾಗಿದೆ.
  •  ಬಲ್ಕ್ ಮತ್ತು ಚಿಲ್ಲರೆ ದರ ವ್ಯತ್ಯಾಸದಿಂದಾಗಿ ಇಂಧನ ಸರಬರಾಜಿನಲ್ಲಿ ತೀವ್ರ ಅಸ್ಥಿರತೆ.
  •  ಡೀಸೆಲ್ ಬಿಕ್ಕಟ್ಟು ನಿವಾರಿಸಲು ಪೆಟ್ರೋಲಿಯಂ ಡೀಲರ್ಸ್ ಸಂಘದಿಂದ ಪ್ರಧಾನಿ ಮೋದಿಗೆ ದೂರು.

ಸಮಸ್ಯೆಗೆ ಮುಖ್ಯ ಕಾರಣವೇನು?

ಬಲ್ಕ್ (ಸಗಟು) ಸರಬರಾಜು ದರ ಮತ್ತು ಚಿಲ್ಲರೆ ಮಾರಾಟ ದರದ ನಡುವೆ ಭಾರಿ ವ್ಯತ್ಯಾಸ ಉಂಟಾಗಿರುವುದು ಈ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ. ಕೈಗಾರಿಕೆಗಳು ಮತ್ತು ದೊಡ್ಡ ಸಂಸ್ಥೆಗಳು ಈ ಹಿಂದೆ ಬಲ್ಕ್ ಸರಬರಾಜು ಮೂಲಕ ಡೀಸೆಲ್ ಪಡೆಯುತ್ತಿದ್ದವು. ಆದರೆ ಈಗ ಅಲ್ಲಿ ದರ ಹೆಚ್ಚಾಗಿರುವುದರಿಂದ, ಕೈಗಾರಿಕಾ ಮಟ್ಟದ ಖರೀದಿಗಳು ಚಿಲ್ಲರೆ ಪೆಟ್ರೋಲ್ ಬಂಕ್‌ಗಳತ್ತ ತಿರುಗಿವೆ. ಇದರಿಂದಾಗಿ ಸಾಮಾನ್ಯ ಗ್ರಾಹಕರಿಗೆ ಮೀಸಲಿಟ್ಟ ಇಂಧನವು ಕೈಗಾರಿಕೆಗಳ ಪಾಲಾಗುತ್ತಿದೆ.

ಡೀಲರ್‌ಗಳ ಆತಂಕ ಮತ್ತು ಪ್ರಮುಖ ಸಮಸ್ಯೆಗಳಿವು

  •  ಚಿಲ್ಲರೆ ಮಾರಾಟ ಸರಾಸರಿಗಳ ಕೃತಕ ಏರಿಕೆ
  •  ಇಂಧನ ಸರಬರಾಜು ಯೋಜನೆ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ವ್ಯತ್ಯಯ
  •  OMCಗಳಿಂದ ಇಂಧನ ಸರಬರಾಜಿನ ಕಡಿತ ಮತ್ತು ನಿರ್ಬಂಧ
  •  ಪೆಟ್ರೋಲ್ ಬಂಕ್‌ಗಳಲ್ಲಿ ‘ನೋ ಸ್ಟಾಕ್’ ಪರಿಸ್ಥಿತಿಗಳ ಹೆಚ್ಚಳ
  • ನೈಜ ಚಿಲ್ಲರೆ ಗ್ರಾಹಕರಿಗೆ ತೊಂದರೆ
  • ಟ್ಯಾಂಕರ್ ಸಂಚಾರದ ಮೇಲಿನ ಒತ್ತಡ ಹಾಗೂ ಸರಬರಾಜಿನ ಅಸ್ಥಿರತೆ
  • ಡೀಲರ್‌ಗಳಿಗೆ ಆರ್ಥಿಕ ಮತ್ತು ಕಾರ್ಯಾಚರಣಾ ಅನಿಶ್ಚಿತತೆ

ಇದಕ್ಕೆ ಮುಖ್ಯ ಕಾರಣ ಸಂಸ್ಥಾತ್ಮಕ ಗ್ರಾಹಕರು ಚಿಲ್ಲರೆ ಬಂಕ್‌ಗಳಿಂದ ಖರೀದಿ ಮಾಡುತ್ತಿರುವುದು. ಈ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ OMCಗಳನ್ನು ಒಳಗೊಂಡ ಸಮಗ್ರ ಪರಿಶೀಲನೆ ಅಗತ್ಯವಾಗಿದೆ.

ಈ ಪರಿಶೀಲನೆಯಲ್ಲಿ ಕೆಳಗಿನ ಮಾಹಿತಿಗಳನ್ನು ಸಂಗ್ರಹಿಸಬೇಕೆಂದು ಸಂಘದ ಮನವಿ

  • ದೇಶದಾದ್ಯಂತದ ಕೈಗಾರಿಕಾ ಮತ್ತು ಸಂಸ್ಥಾತ್ಮಕ HSD ಬಳಕೆದಾರರ ವಿವರಗಳು
  •  ಹಿಂದಿನ ಬಳಕೆ ಮತ್ತು ಖರೀದಿ ಮಾದರಿಗಳು
  • ಸಂಸ್ಥಾತ್ಮಕ ಸರಬರಾಜು ಮಾರ್ಗಗಳಿಂದ ಚಿಲ್ಲರೆ ಬಂಕ್‌ಗಳಿಗೆ ಖರೀದಿ ತಿರುಗಿರುವ ಪ್ರಮಾಣ
  • ಬಲ್ಕ್ ಮತ್ತು ಚಿಲ್ಲರೆ ಸರಬರಾಜು ದರಗಳ ಹೋಲಿಕೆ
  • ಪ್ರದೇಶವಾರು ಅಸಾಮಾನ್ಯ HSD ಚಿಲ್ಲರೆ ಮಾರಾಟ ಏರಿಕೆ ವಿವರಗಳು

ಇದನ್ನೂ ಓದಿ ಅಗತ್ಯ ಸೇವೆಗಳು ಕೂಡ ದುಬಾರಿ ಆಗಬಹುದು ಎಂದ ಆರ್ಥಿಕ ತಜ್ಞ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಕಾರಣ, ದೇಶೀಯವಾಗಿಯೂ ಇಂಧನ ದರಗಳು ಏರುಗತಿಯಲ್ಲಿವೆ. ಇದರ ನಡುವೆ ಈಗ ಡೀಸೆಲ್ ಅಭಾವ ಸೃಷ್ಟಿಯಾಗಿರುವುದು ಆತಂಕ ಮೂಡಿಸಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸದಿದ್ದರೆ ಸಾರಿಗೆ ಮತ್ತು ಕೃಷಿ ವಲಯದ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *