Headlines

ಬಂಡಾಯ ಮಣಿಸಿ ದಾವಣಗೆರೆ ಬೈ ಎಲೆಕ್ಷನ್​ ಗೆದ್ದ ಸಮರ್ಥ್ ಶಾಮನೂರು – Kannada News | Davanagere South Bypoll: Congress’ Samarth Shamanur Defeats BJP’s Srinivas Das Kariyappa

ದಾವಣಗೆರೆ, ಮೇ 04: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಮೊಮ್ಮಗ, ಕಾಂಗ್ರೆಸ್​​ ಅಭ್ಯರ್ಥಿ ಸಮರ್ಥ್ ಶಾಮನೂರು ಗೆದ್ದು ಬೀಗಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ್ ಕರಿಯಪ್ಪಗೆ ಸೋಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ನಡೆದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಪರಾಭಯಗೊಂಡಿದೆ. ತನ್ನದೇ ಹಿಡಿತದಲ್ಲಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರವನ್ನು ಆಡಳಿತಾರೂಢ ಕಾಂಗ್ರೆಸ್​​ ಮರಳಿ ತೆಕ್ಕೆಗೆ ಪಡೆದಿದೆ.

ಯಾರಿಗೆ ಎಷ್ಟು ಮತ?

ಕಾಂಗ್ರೆಸ್​ನ ಸಮರ್ಥ್ ಶಾಮನೂರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ್ ಕರಿಯಪ್ಪ ವಿರುದ್ಧ  5,708 ಮತಗಳ ಅಂತರಿಂದ ಜಯ ಸಾಧಿಸಿದ್ದಾರೆ. ಕಾಂಗ್ರೆಸ್​​ನ ಸಮರ್ಥ್ ಶಾಮನೂರುಗೆ 69,578 ಮತಗಳು ಬಿದ್ದಿದ್ದರೆ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸ ಕರಿಯಪ್ಪಗೆ 63,870 ಮತಗಳನ್ನು ಪಡೆದಿದ್ದಾರೆ. ಇನ್ನು ಎಸ್​ಡಿಪಿಐನ ಅಫ್ಸರ್ ಕೊಡ್ಲಿಪೇಟೆಗೆ 18975 ಮತಗಳು ಮತ್ತು ನೋಟಾಗೆ 511 ಮತಗಳು ಚಲಾವಣೆಯಾಗಿವೆ.

ಕಾರ್ಯಕರ್ತರ ವಿಜಯೋತ್ಸವ

ಸಮರ್ಥ್ ಶಾಮನೂರು ಗೆಲುವಿನ ಹಿನ್ನೆಲೆ ಕಾಂಗ್ರೆಸ್​​ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ಕೆಲವರು ಮುಸ್ಲಿಂ ಮತಗಳು ವಿಭಜನೆ ಆಗುವಂತೆ ಮಾಡಿದ್ದು, ಕಾಂಗ್ರೆಸ್​​ನ 22 ಸಾವಿರ ಮತಗಳು ಬೇರೆಯವರ ಪಾಲಾಗಿವೆ. ಹೀಗಾಗಿಯೇ ಇದಕ್ಕೆ ಕಾರಣರಾದ ಮುಖಂಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಮುಸ್ಲಿಂ‌‌ ಮುಖಂಡ ಅಮಾನತ್ತನ್ನು ಕಾರ್ಯಕರ್ತರು ಸಮರ್ಥಿಸಿಕೊಂಡಿದ್ದಾರೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ.)

Published On – 3:05 pm, Mon, 4 May 26

Source link

Leave a Reply

Your email address will not be published. Required fields are marked *