ಬಟ್ಟೆ ಬಿಚ್ಚಿ, ರೇಜರ್ ಬ್ಲೇಡ್​ನಿಂದ ಹಲ್ಲೆಗೆ ಯತ್ನ: ರೈಲಿನಲ್ಲಿ ನಟಿ ಅಂತರಾ ಬ್ಯಾನರ್ಜಿ ಅವಾಂತರ; ಬಂಧನ – Kannada News | Actress Antara Banerjee allegedly stripped and attacked RPF official with razor blade during train travel

ಭಾರತೀಯ ರೈಲ್ವೆImage Credit source: Jaromir/Moment/Getty Images

ಮುಂಬೈ, ಆಗಸ್ಟ್ 16: ಮಾಡೆಲ್ ಹಾಗೂ ನಟಿ ಅಂತರಾ ಬ್ಯಾನರ್ಜಿ (Antara Banerjee) ಅವರು ರೈಲಿನಲ್ಲಿ ಸೀಟು ವಿಚಾರವಾಗಿ ಗಲಾಟೆ ನಡೆಸಿ, ಆರ್‌ಪಿಎಫ್ (RPF) ಭದ್ರತಾ ಸಿಬ್ಬಂದಿ ಹಾಗೂ ಟಿಕೆಟ್ ಪರೀಕ್ಷಕರ (TC) ಮೇಲೆ ರೇಜರ್ ಬ್ಲೇಡ್‌ನಿಂದ ದಾಳಿ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಆಗಸ್ಟ್ 12 ರಂದು ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಮುಂಬೈನಿಂದ ಸೂರತ್‌ಗೆ ‘ಅರಾವಳಿ ಎಕ್ಸ್‌ಪ್ರೆಸ್’ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಂತರಾ ಬ್ಯಾನರ್ಜಿ, ಸ್ಲೀಪರ್ ಕ್ಲಾಸ್ ಟಿಕೆಟ್ ಹೊಂದಿದ್ದರೂ ಎಸಿ (AC) ಕೋಚ್‌ಗೆ ಪ್ರವೇಶಿಸಿ ರಿಸರ್ವ್ಡ್ ಸೀಟ್‌ನಲ್ಲಿ ಕುಳಿತಿರುತ್ತಾರೆ. ಸೀಟ್ ತೆರವುಗೊಳಿಸುವಂತೆ ಸಹಪ್ರಯಾಣಿಕರು ಕೇಳಿದಾಗ, ಅಂತರಾ ಅದಕ್ಕೆ ಒಪ್ಪುವುದಿಲ್ಲ. ಆ ಪ್ರಯಾಣಿಕರು ಟಿಕೆಟ್ ಪರೀಕ್ಷಕರಿಗೆ ವಿಷಯ ತಿಳಿಸುತ್ತಾರೆ. ಟಿಸಿ ಮೂಲಕ ರೈಲ್ವೆ ಪೊಲೀಸ್ ಪಡೆಗೆ ಮಾಹಿತಿ ಹೋಗುತ್ತದೆ. ಸನ್ನಿವೇಶ ತಿಳಿಗೊಳಿಸಲು ಬಂದ ಆರ್‌ಪಿಎಫ್ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಯಾಮಿನಿ ಕಾಂತ್ ಮಿಶ್ರಾ ಹಾಗೂ ಕಾನ್‌ಸ್ಟೇಬಲ್ ಜೊತೆ ಅಂತರಾ ಗಲಾಟೆ ಮಾಡುತ್ತಾರೆ.

ಇದನ್ನೂ ಓದಿ: RRB Recruitment 2026: ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ; 3,993 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಕೆ ಬಟ್ಟೆ ಕಳಚಿ, ರೇಜರ್ ಬ್ಲೇಡ್​ನಿಂದ ಹಲ್ಲೆ ಮಾಡಲು ಯತ್ನಿಸುತ್ತಾರೆ. ಸ್ವತಃ ತಮ್ಮ ಮೇಲೂ ಗಾಯ ಮಾಡಿಕೊಳ್ಳುತ್ತಾರೆ ಎಂದು ಆರ್​ಪಿಎಫ್ ಸಿಬ್ಬಂದಿ ಆರೋಪಿಸಿದ್ದಾರೆ. ಈ ಗಲಾಟೆಯ ನಡುವೆ ಆರ್‌ಪಿಎಫ್ ಅಧಿಕಾರಿಯ ಯುನಿಫಾರ್ಮ್, ಕನ್ನಡಕ ಮತ್ತು ಮೊಬೈಲ್ ಫೋನ್ ಹಾನಿಗೊಳಗಾಗಿದ್ದು, ರೈಲಿನ ಗ್ಲಾಸ್ ಒಡೆದು ತಪ್ಪಿಸಿಕೊಳ್ಳಲು ನಟಿ ಯತ್ನಿಸಿದ್ದಾರೆ ಎನ್ನಲಾಗಿದೆ. ಮುಂಬೈನ ಬೊರಿವಿಲಿ ಮತ್ತು ದಹಾಣು ರೈಲ್ವೆ ನಿಲ್ದಾಣಗಳ ಮಧ್ಯೆ ಈ ಘಟನೆ ನಡೆದಿದೆ.

ಬಂಧನ ಮತ್ತು ಜಾಮೀನು: ದಹಾಣು ರೈಲ್ವೆ ನಿಲ್ದಾಣದಲ್ಲಿ ನಟಿಯನ್ನು ಇಳಿಸಿ ಜಿಆರ್‌ಪಿಗೆ (GRP) ಒಪ್ಪಿಸಲಾಯಿತು. ಬೋರಿವಲಿ ರೈಲ್ವೆ ಪೊಲೀಸರು ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ, ಪ್ರಾಣಕ್ಕೆ ಅಪಾಯ ತಂದೊಡ್ಡುವುದು ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು. ನಂತರ ಅವರಿಗೆ ಜಾಮೀನು ದೊರೆತಿದೆ.

ಇದನ್ನೂ ಓದಿ: ವಾರಣಾಸಿ ಏರ್​ಪೋರ್ಟ್​ನಲ್ಲಿ ಭದ್ರತಾ ತಪಾಸಣೆ ವೇಳೆ ಆಕಸ್ಮಿಕವಾಗಿ ಫೈರ್ ಆದ ಬಂದೂಕು; ಇಬ್ಬರು ಸಿಬ್ಬಂದಿಗೆ ಗಾಯ

ಅಂತರಾ ಬ್ಯಾನರ್ಜಿ ಅವರು ‘ಬಧೋ ಬಹು’, ‘ಕಸೌತಿ ಜಿಂದಗಿ ಕೆ’ ಮುಂತಾದ ಹಿಂದಿ ಧಾರಾವಾಹಿಗಳಲ್ಲಿ ಮತ್ತು ಕೆಲವು ವೆಬ್ ಸೀರೀಸ್​ಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *