ಶ್ರೀಲಂಕಾ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1000 ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ (1374 ವಿಕೆಟ್‌ಗಳು), ರಂಗನ ಹೆರಾತ್ (1080 ವಿಕೆಟ್‌ಗಳು) ಮತ್ತು ದಿನುಕಾ ಹೆಟ್ಟಿಯಾರಾಚಿ (1001 ವಿಕೆಟ್‌ಗಳು) ಮಾತ್ರ ಇದ್ದರು. ಆದರೆ ಈಗ ಮಲಿಂದಾ ಪುಷ್ಪಕುಮಾರ ಕೂಡ ಈ ಪಟ್ಟಿಗೆ ಸೇರಿಕೊಂಡಿದ್ದಾರೆ. ಇನ್ನು ಜಾಗತಿಕವಾಗಿ, ಪುಷ್ಪಕುಮಾರ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ 218 ನೇ ಆಟಗಾರ ಎನಿಸಿಕೊಂಡಿದ್ದಾರೆ.
