ಬಾಗಲಕೋಟೆ, (ಜುಲೈ 26): ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಬಳಿ ಮಹೀಂದ್ರಾ XUV300 ಕಾರು ಸ್ಫೋಟಗೊಂಡಿದೆ. ಹಿಪ್ಪರಗಿಯ ಯುವರಾಜ ವೈನ್ ಸ್ಟೋರ್ ಮಾಲೀಕ ಕಮ್ ಮ್ಯಾನೇಜರ್ ಹನುಮಂತ ಅಥಣಿ ಅವರ ಕಾರು ನಿನ್ನೆ (ಜುಲೈ 25) ಸಂಜೆ 4:30ಕ್ಕೆ ವೈನ್ ಸ್ಟೋರ್ ಎದುರು ನಿಲ್ಲಿಸಲಾಗಿದ್ದು, ರಾತ್ರಿ 10:45ರ ಸುಮಾರಿಗೆ ಏಕಾಏಕಿ ಕಾರು ಸ್ಫೋಟಗೊಂಡಿದೆ. ಘಟನೆಯ ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳ, ಎಸ್‌ಒಸಿಒ (Scene of Crime) ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ಸ್ಟೋಟದ ಶಂಕೆ ವ್ಯಕ್ತವಾಗಿದ್ದು ಸಂಬಂಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇನ್ನು ಈ ಕಾರು ಬ್ಲಾಸ್ಟ್ ಘಟನೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದು, ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
