ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಹೀನಾಯವಾಗಿ ಸೋಲಿಸಿದ್ದ ಇಂಗ್ಲೆಂಡ್ ತಂಡದಿಂದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಮೂರು ಮಾದರಿಯ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ತಂಡಕ್ಕೆ ತರಬೇತಿ ನೀಡುತ್ತಿದ್ದ ನ್ಯೂಜಿಲೆಂಡ್ನ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 2012 ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಗೇರಿದ್ದ ಮೆಕಲಮ್ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದರು. ಟೆಸ್ಟ್ ಕ್ರಿಕೆಟ್ಗೂ ಹೊಡಿಬಡಿ ಆಟವನ್ನು ಪರಿಚಯಿಸಿದ್ದ ಮೆಕಲಮ್ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಹಲವಾರು ಸ್ಮರಣೀಯ ಗೆಲುವುಗಳಿಗೆ ಹಾಗೆಯೇ ಹಲವಾರು ಹೀನಾಯ ಸೋಲುಗಳಿಗೆ ಮುನ್ನಡೆಸಿದ್ದರು. ಇದೀಗ ಟೆಸ್ಟ್ ತಂಡದ ಕೋಚ್ ಆಗಿ ತಮ್ಮ ನಾಲ್ಕು ವರ್ಷದ ಪಯಣಕ್ಕೆ ಮೆಕಲಮ್ ಅಂತ್ಯ ಹಾಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ಕ್ರಿಕೆಟ್ನಲ್ಲಿ ಬಾಝ್ ಬಾಲ್ ಕ್ರಿಕೆಟ್ ಕೂಡ ಯುಗಾಂತ್ಯವಾಗಿದೆ ಎನ್ನಬಹುದು.
