ಬಾಯ್ಕಾಟ್ ಮಾಡಿದ್ರೆ ಇಷ್ಟೊಂದು ಅವಮಾನ ಆಗ್ತಿರಲಿಲ್ಲ: ಪಾಕ್ ಕ್ರಿಕೆಟಿಗ – Kannada News | Danish Kaneria Mocks Pakistan After Defeat Against India

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡ ಪಾರುಪತ್ಯ ಮುಂದುವರೆಸಿದೆ. ಅದು ಕೂಡ 8ನೇ ಬಾರಿ ಗೆಲುವು ದಾಖಲಿಸುವ ಮೂಲಕ. ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್ 2026ರ 27ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 175 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ 18 ಓವರ್​ಗಳಲ್ಲಿ ಕೇವಲ 114 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಾಕ್ ಪಡೆ 61 ರನ್​ಗಳ ಹೀನಾಯ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ತಂಡದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಟ್ವೀಟ್ ಮಾಡಿ ಬಾಯ್ಕಾಟ್ ಮಾಡಿದ್ರೆ ಸಾಕಿತ್ತು ಎಂದು ಅಣಕವಾಡಿದ್ದಾರೆ.

ಇದಕ್ಕೂ ಮುನ್ನ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭಾರತದ ವಿರುದ್ಧದ ಪಂದ್ಯವನ್ನು ಬಾಯ್ಕಾಟ್ ಮಾಡುವುದಾಗಿ ಬೆದರಿಸಿತ್ತು. ಆದರೆ ಐಸಿಸಿ ಮಧ್ಯ ಪ್ರವೇಶಿಸಿ ಪಿಸಿಬಿಯ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಭಾರತದ ವಿರುದ್ಧ ಕಣಕ್ಕಿಳಿದ ಪಾಕಿಸ್ತಾನ್ ತಂಡ ಇದೀಗ ಹೀನಾಯವಾಗಿ ಸೋತಿದೆ.

ಈ ಸೋಲನ್ನು ಕೇವಲ ಒಂದೇ ವಾಕ್ಯದಲ್ಲಿ ದಾನಿಶ್ ಕನೇರಿಯಾ ವಿಮರ್ಶಿಸಿದ್ದು, “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪಂದ್ಯವನ್ನು ಬಹಿಷ್ಕರಿಸಿದ್ದರೆ ನಾವು ಕಡಿಮೆ ಮುಜುಗರ ಅನುಭವಿಸಬಹುದಿತ್ತು” ಎಂದಿದ್ದಾರೆ.

ಅಂದರೆ ಈ ಮ್ಯಾಚ್​ ಆಡದೇ ಇದ್ದಿದ್ದರೆ ಇಷ್ಟೊಂದು ಅವಮಾನ ಆಗುತ್ತಿರಲಿಲ್ಲ ಎಂದು ದಾನಿಶ್ ಕನೇರಿಯಾ ಪಾಕ್ ತಂಡದ ಪ್ರದರ್ಶನವನ್ನು ವ್ಯಂಗ್ಯವಾಡಿದ್ದಾರೆ.

 

 

 

Source link

Leave a Reply

Your email address will not be published. Required fields are marked *