ಸಾಯಿ ಪಲ್ಲವಿ (Sai Pallavi) ಅವರಿಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರ ಸಿನಿಮಾಗಳು ಇಲ್ಲಿ ಅದ್ಭುತ ಕಲೆಕ್ಷನ್ ಮಾಡುತ್ತವೆ. ಈಗ ಅವರು ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ಆಮಿರ್ ಖಾನ್ ಮಗ ಜುನೈದ್ ಖಾನ್ ಅವರ ‘ಏಕ್ ದಿನ್’ ಚಿತ್ರಕ್ಕೆ ಅವರು ನಾಯಕಿ. ಈ ಸಿನಿಮಾ ಮೇ 1ರಂದು ರಿಲೀಸ್ ಆಯಿತು. ಈ ಸಿನಿಮಾ ಕಮಾಲ್ ಮಾಡಲು ವಿಫಲವಾಗಿದೆ. ಈ ಚಿತ್ರ ಡಲ್ ಓಪನಿಂಗ್ ಕಂಡಿದೆ.
‘ಏಕ್ ದಿನ್’ ರೊಮ್ಯಾಂಟಿಕ್ ಡ್ರಾಮಾ ಶೈಲಿಯ ಸಿನಿಮಾವಾಗಿದ್ದು, ಜಪಾನ್ ಅಲ್ಲಿ ಶೂಟ್ ಮಾಡಲಾಗಿದೆ. ಸಿನಿಮಾದ ಶೀರ್ಷಿಕೆ ಸೂಚಿಸುವಂತೆ, ಇದು ಇಬ್ಬರು ಅಪರಿಚಿತ ವ್ಯಕ್ತಿಗಳು ಭೇಟಿಯಾಗಿ ಒಂದೇ ದಿನದಲ್ಲಿ ನಡೆಯುವ ಕಥೆ. ಈ ಚಿತ್ರವನ್ನು ಸುನಿಲ್ ಪಾಂಡೆ ನಿರ್ದೇಶಿಸಿದ್ದಾರೆ. ಆಮಿರ್ ಖಾನ್ ಈ ಚಿತ್ರ ನಿರ್ಮಾಣ ಮಾಡಿದ್ದರೆ.
‘ಏಕ್ ದಿನ್’ ಸಿನಿಮಾ ಮೊದಲ ದಿನ 1 ಕೋಟಿ ರೂಪಾಯಿ ಮಾತ್ರ ಗಳಿಸಿದೆ. ಈ ಚಿತ್ರಕ್ಕೆ ದೇಶಾದ್ಯಂತ ಸಿಕ್ಕಿದ್ದು ಬರೋಬ್ಬರಿ 1,710 ಶೋ. ಆದರೂ ಸಿನಿಮಾ ಗಳಿಸಿದ್ದು ಕೇವಲ 1 ಕೋಟಿ ರೂಪಾಯಿ. ಈ ಚಿತ್ರ ಅಕ್ಯುಪೆನ್ಸಿ ಕೇವಲ 14 ಪರ್ಸೆಂಟ್ ಇತ್ತು. ಅಂದರೆ, 100 ಸೀಟ್ ಇರುವ ಚಿತ್ರಮಂದಿರದಲ್ಲಿ ತುಂಬಿದ್ದು ಕೇವಲ 14 ಸೀಟ್ ಮಾತ್ರ. ಹೀಗಾಗಿ, ಕೇವಲ 1 ಕೋಟಿ ರೂಪಾಯಿ ಮಾತ್ರ ಗಳಿಸಿದೆ.
ಇದನ್ನೂ ಓದಿ: ಸಾಯಿ ಪಲ್ಲವಿ ಹೆಗಲಮೇಲೆ ಕೈ ಹಾಕಲು ಮುಂದಾದ ಆಮಿರ್ ಮಗ; ಮುಂದಾಯ್ತು ಯಾರು ಊಹಿಸದ ಘಟನೆ
ಸಾಯಿ ಪಲ್ಲವಿ ಅವರು ಸಾಮಾನ್ಯವಾಗಿ ಗ್ಲಾಮರ್ ಪಾತ್ರಗಳಿಗಿಂತ ಕಥೆಗೆ ಪ್ರಾಮುಖ್ಯತೆ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ‘ಏಕ್ ದಿನ್’ ಕೂಡ ಅದೇ ಸಾಲಿಗೆ ಸೇರುವ ಚಿತ್ರವಾಗಿದೆ. ಸಾಯಿ ಪಲ್ಲವಿ ಪರಿಚಯ ಬಾಲಿವುಡ್ನವರಿಗೆ ಇಲ್ಲ. ಅವರು ‘ರಾಮಾಯಣ’ದಲ್ಲಿ ಸೀತೆ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಆದ ಬಳಿಕ ‘ಏಕ್ ದಿನ್’ ತೆರೆಗೆ ಬಂದಿದ್ದರೆ ಸಿನಿಮಾಗೆ ಹೆಚ್ಚು ಲಾಭ ಆಗುತ್ತಿತ್ತು. ಆದರೆ, ಆಮಿರ್ ಖಾನ್ ಅವರಿಗೆ ಅಷ್ಟು ಸಮಯ ಕಾಯುವ ತಾಳ್ಮೆ ಇರಲಿಲ್ಲ. ಹೀಗಾಗಿ, ಅವರು ಈ ನಿರ್ಧಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.