‘ಬಾಹುಬಲಿ 2’ ದಾಖಲೆ ಉಡೀಸ್: ಹೊಸ ಇತಿಹಾಸ ಬರೆಯಲು ಸಜ್ಜಾದ ‘ಧುರಂಧರ್ 2’ – Kannada News | Dhurandhar 2 set to surpass Baahubali 2 Box Office Collection record

ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ‘ಧುರಂಧರ್ 2’ (Dhurandhar 2) ಸಿನಿಮಾ ಮಾಡಿದ ಸಾಧನೆ ಸಣ್ಣದಲ್ಲ. ಕಳೆದ ಒಂಬತ್ತು ವರ್ಷಗಳಿಂದ ಅಲುಗಾಡದಂತೆ ಉಳಿದಿದ್ದ ‘ಬಾಹುಬಲಿ 2’ (Baahubali 2) ಚಿತ್ರದ ಬೃಹತ್ ದಾಖಲೆಯನ್ನು ಮುರಿಯಲು ‘ಧುರಂಧರ್ 2’ ಚಿತ್ರ ಸಜ್ಜಾಗಿದೆ. ರಿಲೀಸ್ ಆದ ದಿನದಿಂದಲೂ ಭರ್ಜರಿ ಕಲೆಕ್ಷನ್ ಮಾಡುತ್ತಾ ಬಂದಿರುವ ಈ ಸಿನಿಮಾ ವಿಶ್ವಾದ್ಯಂತ ಅಬ್ಬರಿಸಿದೆ. ಚಿತ್ರದ ಒಟ್ಟು ಕಲೆಕ್ಷನ್ 1700 ಕೋಟಿ ರೂಪಾಯಿ ಮೀರಿದೆ. ಈ ಮೂಲಕ ರಣವೀರ್ ಸಿಂಗ್ (Ranveer Singh) ಅವರ ಖ್ಯಾತಿ ಹೆಚ್ಚಾಗಿದೆ.

ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಚಿತ್ರವು ವಿಶ್ವಾದ್ಯಂತ ಅಂದಾಜು 1790 ಕೋಟಿ ರೂಪಾಯಿ ಗಳಿಸುವ ಮೂಲಕ ಅತಿಹೆಚ್ಚು ಗಳಿಕೆ ಮಾಡಿದ ಭಾರತದ ಎರಡನೇ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು. ಚೀನಾದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ‘ದಂಗಲ್’ ಸಿನಿಮಾ ಮೊದಲ ಸ್ಥಾನದಲ್ಲಿದೆ. ಈಗ ‘ಧುರಂಧರ್ 2’ ಚಿತ್ರವು ‘ಬಾಹುಬಲಿ 2’ ದಾಖಲೆ ಮುರಿಯಲು ಕೇವಲ 10 ಕೋಟಿ ರೂಪಾಯಿ ಬಾಕಿ ಇದೆ.

‘ಧುರಂಧರ್ 2’ ಚಿತ್ರದ ಸದ್ಯದ ವೇಗವನ್ನು ನೋಡಿದರೆ, ಈ ವಾರಾಂತ್ಯದ ವೇಳೆಗೆ ಅಧಿಕೃತವಾಗಿ 1790 ಕೋಟಿ ರೂಪಾಯಿ ಗಡಿ ದಾಟಲಿದೆ. ಈ ಮೂಲಕ ಜಾಗತಿಕವಾಗಿ ಅತಿಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ‘ಬಾಹುಬಲಿ 2’ ಸಿನಿಮಾವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ‘ಧುರಂಧರ್ 2’ ಏರಲಿದೆ. ಇದು ಚಿತ್ರತಂಡದ ದೊಡ್ಡ ಸಾಧನೆ ಆಗಲಿದೆ.

ಒಂದು ಕಾಲದಲ್ಲಿ ಮುಟ್ಟಲು ಅಸಾಧ್ಯ ಎನ್ನಲಾಗುತ್ತಿದ್ದ ದಾಖಲೆಗಳು ಈಗಿನ ಸಿನಿಮಾಗಳಿಗೆ ಸುಲಭವಾಗುತ್ತಿವೆ. ಪ್ರೇಕ್ಷಕರ ವ್ಯಾಪಕ ಬೆಂಬಲ ಮತ್ತು ಮಲ್ಟಿಪ್ಲೆಕ್ಸ್​​ಗಳ ಸಂಖ್ಯೆ ಹೆಚ್ಚಿರುವುದರಿಂದ ‘ಧುರಂಧರ್ 2’ ಈ ಮೈಲಿಗಲ್ಲನ್ನು ವೇಗವಾಗಿ ತಲುಪುತ್ತಿದೆ. ಈ ಸಾಧನೆಯು ಭಾರತೀಯ ಸಿನಿಮಾ ಲೋಕದಲ್ಲಿ ಹೊಸ ಯುಗದ ಆರಂಭವನ್ನು ಸೂಚಿಸುತ್ತಿದೆ ಎನ್ನುತ್ತಿದ್ದಾರೆ ಟ್ರೇಡ್ ತಜ್ಞರು

ಇದನ್ನೂ ಓದಿ: ‘ಧುರಂಧರ್’ ಚಿತ್ರಕ್ಕೆ ತಿರುಗೇಟು ನೀಡಲು ‘ಮೇರಾ ಲಿಯಾರಿ’ ಸಿನಿಮಾ ಮಾಡಿದ ಪಾಕಿಸ್ತಾನ

ಆದಿತ್ಯ ಧರ್ ಅವರು ‘ಧುರಂಧರ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್ ಮತ್ತು ಸಾರಾ ಅರ್ಜುನ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅರ್ಜುನ್ ರಾಮ್​ಪಾಲ್, ರಾಕೇಶ್ ಬೇಡಿ, ಸಂಜಯ್ ದತ್, ಆರ್. ಮಾಧವನ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *