ರಾಮನಗರ, ಏಪ್ರಿಲ್ 20: ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ಗೆ ಓರ್ವ ವ್ಯಕ್ತಿ ಕಲ್ಲು ತೂರಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬಿಡದಿ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ. ಬಸ್ ಚಾಲಕ ರ‍್ಯಾಶ್ ಡ್ರೈವಿಂಗ್ ಮಾಡಿದ ಎಂದು ಬಸ್ ಮುಂಭಾಗದ ಗ್ಲಾಸ್ಗೆ ಕಲ್ಲು ತೂರಿದ್ದಾನೆ. ಕುಡಿದ ಮತ್ತಿನಲ್ಲಿ ಬೆಂಗಳೂರಿನಿಂದ ಬಿಡದಿಗೆ ಬಿಎಂಟಿಸಿ ಬಸ್‌ನಲ್ಲಿ ಬಂದಿದ್ದ ವ್ಯಕ್ತಿ, ಬಸ್ ಚಾಲಕ ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಗಾಡಿ ಓಡಿಸಿದ್ದರಿಂದ ಬಸ್ ಒಳಗಿದ್ದ ತನಗೆ ಪೆಟ್ಟಾಗಿ, ಮೂಗಿನಿಂದ ರಕ್ತ ಬಂದಿದೆ ಎಂದು ಆರೋಪಿಸಿ ರಂಪಾಟ ಮಾಡಿದ್ದಾನೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಗೆ ಬಸ್ ಚಾಲಕ ದೂರು ದಾಖಲಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
