
ನೇರ ಮಾತು ಹಾಗೂ ಗ್ಲಾಮರಸ್ ಶೈಲಿಯಿಂದಲೇ ಗುರುತಿಸಿಕೊಂಡಿರುವ ನಟಿ ಆಕಾಂಕ್ಷಾ ಪುರಿ, ಇತ್ತೀಚೆಗೆ ನಡೆದ ಫ್ಯಾಷನ್ ವೀಕ್ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡರು. ಸಾಂಪ್ರದಾಯಿಕ ಸೀರೆಗೆ ಬಿಕಿನಿ (Bikini) ಬ್ಲೌಸ್ ಧರಿಸಿ ಮಿಂಚಿದ್ದ ಅವರ ಫೋಟೋ ಮತ್ತು ವಿಡಿಯೋಗಳು ವೈರಲ್ ಆದವು. ಆಕಾಂಕ್ಷಾ ಪುರಿ ಅವರ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಅವರ ಫ್ಯಾಷನ್ ಸೆನ್ಸ್ ಬಗ್ಗೆ ಕಿಡಿಕಾರಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಬಗೆಬಗೆಯ ಟೀಕೆಗಳು ವ್ಯಕ್ತವಾಗಿವೆ. ಅವುಗಳಿಗೆಲ್ಲ ಆಕಾಂಕ್ಷಾ ಪುರಿ (Akanksha Puri) ಅವರು ತಿರುಗೇಟು ನೀಡಿದ್ದಾರೆ.
ಖ್ಯಾತ ವಿನ್ಯಾಸಕ ರೋಹಿತ್ ವರ್ಮಾ ಅವರ ಶೋಗಾಗಿ ಆಕಾಂಕ್ಷಾ ಈ ವಿಶಿಷ್ಟ ಉಡುಪು ಧರಿಸಿದ್ದರು. ಮಹಾರಾಷ್ಟ್ರದ ಸಂಪ್ರದಾಯದ ಸಂಕೇತವಾಗಿರುವ ಪೈಠಣಿ ಸೀರೆಯನ್ನು ಬಿಕಿನಿ ಬ್ಲೌಸ್ ಜೊತೆ ಧರಿಸುವ ಮೂಲಕ ಅವರು ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡಿದ್ದರು.
ಟಿವಿ9 ಹಿಂದಿ ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ ಆಕಾಂಕ್ಷಾ, ‘ನನಗೆ ಈ ಉಡುಪಿಗಾಗಿ ಸಾಕಷ್ಟು ಮೆಚ್ಚುಗೆಗಳು ಸಿಕ್ಕಿವೆ. ಹೊಗಳಿಕೆ ಇರುವಲ್ಲಿ ಟ್ರೋಲ್‌ಗಳು ಇರುವುದು ಸಹಜ. ನಾನು ನಕಾರಾತ್ಮಕ ವಿಚಾರಗಳಿಗಿಂತ ಸಕಾರಾತ್ಮಕತೆ ಮೇಲೆ ಹೆಚ್ಚು ಗಮನ ಹರಿಸುತ್ತೇನೆ’ ಎಂದು ಶಾಂತವಾಗಿಯೇ ಉತ್ತರಿಸಿದ್ದಾರೆ.
ಆಕಾಂಕ್ಷಾ ಪುರಿ ವೈರಲ್ ವಿಡಿಯೋ:
ಅಲ್ಲದೆ, ಈ ಉಡುಪಿನ ಆಯ್ಕೆಯ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ಇದು ಸಂಪೂರ್ಣವಾಗಿ ಡಿಸೈನರ್ ರೋಹಿತ್ ವರ್ಮಾ ಅವರ ಕಲ್ಪನೆಯಾಗಿತ್ತು. ರೋಹಿತ್ ಅವರ ಪ್ರತಿಭೆಯ ಮೇಲೆ ನನಗೆ ಅಪಾರ ನಂಬಿಕೆಯಿದೆ. ಅವರು ಏನನ್ನಾದರೂ ವಿನ್ಯಾಸಗೊಳಿಸಿದರೆ ಅದರ ಹಿಂದೆ ಒಂದು ಉದ್ದೇಶವಿರುತ್ತದೆ. ಒಬ್ಬ ಕಲಾವಿದೆಯಾಗಿ ಅವರ ವಿನ್ಯಾಸವನ್ನು ಗೌರವಿಸುವುದು ಮತ್ತು ಅದನ್ನು ಆತ್ಮವಿಶ್ವಾಸದಿಂದ ತೊಡುವುದು ನನ್ನ ಕೆಲಸ’ ಎಂದು ಆಕಾಂಕ್ಷಾ ಹೇಳಿದ್ದಾರೆ.
ಇದನ್ನೂ ಓದಿ: ಬಿಕಿನಿ ಧರಿಸಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಮಹಿಳೆ, ವಿಡಿಯೋ ವೈರಲ್
ಸದ್ಯ ಆಕಾಂಕ್ಷಾ ಅವರು ಅಶ್ಮಿತ್ ಪಟೇಲ್ ಜೊತೆಗಿನ ‘ಸಾಡಿ ಫರ್ಮಾಯಿಶ್’ ಹಾಡಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. 2023ರಲ್ಲಿ ಬಿಗ್ ಬಾಸ್ ಒಟಿಟಿ ಮೂಲಕವೂ ಅವರು ಸಾಕಷ್ಟು ಸುದ್ದಿಯಲ್ಲಿದ್ದರು. ಎಷ್ಟೇ ಟ್ರೋಲ್ ಆದರೂ ತಮ್ಮ ಫ್ಯಾಷನ್ ಆಯ್ಕೆಗಳ ಬಗ್ಗೆ ಅವರು ಎಂದಿಗೂ ಹಿಂಜರಿದಿಲ್ಲ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.