ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಗೆದ್ದಿರುವ ಗಿಲ್ಲಿ ನಟ ಇಂದು (ಜನವರಿ 22) ಸಿಎಂ ಸಿದ್ದರಾಮಯ್ಯ ಅವರ ಭೇಟಿ ಆಗಿದ್ದರು. ಈ ವೇಳೆ ಸಿದ್ದರಾಮಯ್ಯ ಅವರೇ ಗಿಲ್ಲಿಗೆ ಹಾರ ಹಾಕಿದ್ದಲ್ಲದೆ ಆಶೀರ್ವಾದ ಸಹ ಮಾಡಿ, ಒಳ್ಳೆಯದಾಗಲಿ ಎಂದು ಹರಿಸಿದರು. ಗಿಲ್ಲಿ ನಟ, ಸಿದ್ದರಾಮಯ್ಯ ಅವರ ಭೇಟಿ ಆದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕೆಲ ಸಮಯ, ಗಿಲ್ಲಿ ನಟನ ಜೊತೆಗೆ ಮಾತುಕತೆ ಆಡಿದರು. ಗಿಲ್ಲಿ ಬಗ್ಗೆ ಅವರ ಕುಟುಂಬದ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಸಹ ಪಡೆದರು. ಅಲ್ಲೇ ಇದ್ದ ಸಚಿವ ಭೈರತಿ ಸುರೇಶ್ ಅವರು ಗಿಲ್ಲಿ ಬಗ್ಗೆ ಹೇಳಿದ ಮಾತಿಗೆ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ನಕ್ಕರು. ಗಿಲ್ಲಿ ಮತ್ತು ಸಿದ್ದರಾಮಯ್ಯ ಅವರ ಮಾತುಕತೆಯ ವಿಡಿಯೋ ಇಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
