‘ಬಿಗ್ ಬಾಸ್’ ಸ್ಪರ್ಧಿಗಳಿಂದ ದೊಡ್ಮನೆ ಹಬ್ಬ; ಅಶ್ವಿನಿ-ಗಿಲ್ಲಿ ಮುಖಾಮುಖಿ

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಸ್ಪರ್ಧಿಗಳು ಮತ್ತೆ ಸೇರಿದ್ದಾರೆ. ಇದು ಸಾಮಾನ್ಯ ಗೆಟ್​ ಟುಗೆದರ್ ಅಲ್ಲ! ಬಿಗ್ ಬಾಸ್ ರೀತಿಯೇ ಈ ಕಾರ್ಯಕ್ರಮದಲ್ಲೂ ಸಖತ್ ಮನರಂಜನೆ ಇದೆ. ಕಾರ್ಯಕ್ರಮದ ಹೆಸರು ‘ದೊಡ್ಮನೆ ಹಬ್ಬ’. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಮುಗಿದು ಒಂದು ತಿಂಗಳು ಆಗುತ್ತಾ ಬಂದಿದೆ. ಆದಾಗ್ಯೂ ಶೋ ಬಗ್ಗೆ ಹಾಗೂ ಸ್ಪರ್ಧಿಗಳ ಬಗ್ಗೆ ಇರೋ ಕ್ರೇಜ್ ಕಡಿಮೆ ಆಗಿಲ್ಲ. ಹೀಗಾಗಿ ಕಲರ್ಸ್ ವಾಹಿನಿ ಹೊಸ ಶೋ ಒಂದನ್ನು ಮಾಡಿದೆ. ಈ ಶೋಗೆ ‘ದೊಡ್ಮನೆ ಹಬ್ಬ’ ಎಂದು ಇಡಲಾಗಿದೆ. ಈ ಹಬ್ಬದಲ್ಲಿ ಭರ್ಜರಿ ಮನರಂಜನೆ ಸಿಗಲಿದೆ.

ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು ಬಿಗ್ ಬಾಸ್ ರೀ ಯೂನಿಯನ್; ಯಾರೆಲ್ಲ ಬಂದ್ರು?

ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಕಲರ್ಸ್ ವಾಹಿನಿ ಒಂದು ಒಪ್ಪಂದ ಮಾಡಿಕೊಂಡಿರುತ್ತದೆ. ಹೀಗಾಗಿ, ಬಿಗ್ ಬಾಸ್ ಮುಗಿದು ಆರು ತಿಂಗಳವರೆಗೆ ಕಲರ್ಸ್ ವಾಹಿನಿ ಆಯೋಜನೆ ಮಾಡೋ ಶೋಗಳಿಗೆ ಸ್ಪರ್ಧಿಗಳನ್ನು ಆಹ್ವಾನಿಸಿದಗ ಬರಬೇಕು. ಈಗ ಬಿಗ್ ಬಾಸ್ ಮುಗಿದ ತಿಂಗಳ ಬಳಿಕ ಶೋ ಆಯೋಜನೆ ಮಾಡಲಾಗಿದ್ದು, ಬಹುತೇಕ ಎಲ್ಲಾ ಸ್ಪರ್ಧಿಗಳು ಹಾಜರಿ ಹಾಕಿದ್ದಾರೆ ಎನ್ನಲಾಗಿದೆ. ಈ ಶೋ ಫೆಬ್ರವರಿ 14ರ ಸಂಜೆ 6ಕ್ಕೆ ಪ್ರಸಾರ ಕಾಣಲಿದೆ.

ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ ಅಶ್ವಿನಿ ಹಾಗೂ ಗಿಲ್ಲಿ ನಟ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಈ ಮೊದಲು ಗಿಲ್ಲಿ ನಟ ಕಪ್ ಎತ್ತಿದ ಬಳಿಕ ಅಶ್ವಿನಿ ಗೌಡ ಸಾಕಷ್ಟು ಮಾತನಾಡಿದ್ದರು. ಗಿಲ್ಲಿಗೆ ಕಪ್ ಸಿಕ್ಕಿದ್ದು ಸರಿ ಅಲ್ಲ ಎಂದಿದ್ದರು. ಇದು ಚರ್ಚೆಗೆ ಕಾರಣ ಆಗಿತ್ತು. ಅದಾದ ಬಳಿಕ ಇಬ್ಬರೂ ಮೊದಲ ಬಾರಿಗೆ ಒಂದೇ ವೇದಿಕೆ ಹಂಚಿಕೊಂಡಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *